fbpx
ಸಮಾಚಾರ

ಅಂಧ ಸಹೋದರಿಯರಿಗೆ ನಿರ್ಮಾಣವಾಗುತ್ತಿದೆ ಚಂದದ ಮನೆ

ಅಂಧ ಸಹೋದರಿಯರ ಕಷ್ಟವನ್ನು ಆಲಿಸಿದ ನವರಸ ನಾಯಕ ಜಗ್ಗೇಶ್ ಅವರ ಬಡ ಕುಟುಂಬಕ್ಕೆ ಸಹಾಯದ ಹಸ್ತವನ್ನು ಚಾಚಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಪಮ ಶೋಗೆ ರತ್ನಮ್ಮ ಮತ್ತು ಮಂಜಮ್ಮ ಇಬ್ಬರು ಸಹೋದರಿಯರು ಬಂದಿದ್ದರು. ಈ ವೇಳೆ ತಮ್ಮ ಕಷ್ಟವನ್ನು ಹೇಳಿಕೊಂಡಿದ್ದರು. ಇದೀಗ ಈ ಅಂಧ ಸಹೋದರಿಯರ ಬದುಕಿಗೆ ನವರಸ ಜಗ್ಗೇಶ್ ಬೆಳಕಾಗಿದ್ದಾರೆ. View this post on Instagram

@ztvkannada #saregama ಕಾರ್ಯಕ್ರಮದಲ್ಲಿ ಈ ದೇವರಮಕ್ಕಳ ಸ್ಥಿತಿಕಂಡು ಭಾವುಕನಾದೆ!ತಡಮಾಡದೆ ಇವರಿಗೆ ಸೂರು ಕಲ್ಪಿಸಿಕೊಡುವಂತೆ ರಾಯರ ಪ್ರೇರಣೆಯಾಯಿತು.. ಆ ಕಾರ್ಯ ಶಿರಬಾಗಿ ಮಾಡಿಕೊಡಲು #ಕೊರಟಗೆರೆ #ಜಗ್ಗೇಶ್ #ಅಭಿಮಾನಿ #ಸಂಘ #friendsgroup ಗೆ ಜವಾಬ್ದಾರಿ ನೀಡಿರುವೆ.. ಈ ಕಲಾವಿದರ ಕೂಗು ರಾಯರ ಮಡಿಲು ಸೇರಿತು..ಗುರುಭ್ಯೋನಮಃ…ಹರಿಓಂ..

A post shared by (@actor_jaggesh) on Feb 10, 2020 at 9:48pm PST

ಇವರ ಕಥೆ ಕೇಳಿದ ಪ್ರತಿಯೊಬ್ಬರ ಕಣ್ಣಾಲಿಗಳನ್ನು ಒದ್ದೆ ಮಾಡಿದ್ದವು. ಅಲ್ಲದೆ ಈ ಸಹೋದರಿಯರ ಕಷ್ಟ ಕಾರ್ಪಣ್ಯಗಳನ್ನು ಸ್ಥಿತಿ ವಿಟಿ ನೋಡಿ ಮರುಗಿದ್ದರು. ಮಧುರ ಕಂಠದೊಂದಿಗೆ ಕೇಳುಗರನ್ನು ಮೋಡಿ ಮಾಡಿದ್ದ ಈ ಜೋಡಿ, ಆ ಬಳಿಕ ತಮ್ಮ ದಹನೀಯ ಸ್ಥಿತಿಯ ಬಗ್ಗೆ ಹೇಳಿಕೊಂಡಿದ್ದರು. ಈ ವಿಡಿಯೋ ಇದೀಗ ನವರಸ ನಾಯಕನ ತನಕ ಮುಟ್ಟಿದೆ. ಸಹೋದರಿಯರ ಕಷ್ಟವನ್ನು ತಿಳಿದ ಜಗ್ಗೇಶ್ ಅವರು ಬಡ ಕುಟುಂಬದ ಸಹಾಯಕ್ಕೆ ಮುಂದಾಗಿದ್ದಾರೆ.

ಸಹೋದರಿಯರು ಸಣ್ಣ ಗುಡಿಸಲಿನಲ್ಲಿ ವಾಸ ಮಾಡುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಮನೆ ಕಟ್ಟಿಕೊಡುವುದಾಗಿ ನಟ ಜಗ್ಗೇಶ್​ ಇನ್​ಸ್ಟಾಗ್ರಾಮ್​ನಲ್ಲಿ ಭರವಸೆ ನೀಡಿದ್ದಾರೆ. “ದೇವರ ಮಕ್ಕಳ ಸ್ಥಿತಿಕಂಡು ಭಾವುಕನಾದೆ. ತಡಮಾಡದೆ ಇವರಿಗೆ ಸೂರು ಕಲ್ಪಿಸಿಕೊಡುವಂತೆ ರಾಯರ ಪ್ರೇರಣೆಯಾಯಿತು. ಆ ಕಾರ್ಯಕ್ಕೆ ಶಿರಬಾಗಿ ಮಾಡಿಕೊಡಲು ಕೊರಟಗೆರೆ ಜಗ್ಗೇಶ್ ಅಭಿಮಾನಿಗಳ ಸಂಘದ ಫ್ರೆಂಡ್ಸ್ ಗ್ರೂಪ್‍ಗೆ ಜವಾಬ್ಧಾರಿ ನೀಡಿರುವೆ. ಈ ಕಲಾವಿದರ ಕೂಗು ರಾಯರ ಮಡಿಲು ಸೇರಿತು” ಎಂದು ಬರೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top