fbpx
ಸಮಾಚಾರ

“ಹಿಂದೂಸ್ತಾನದಲ್ಲಿ ಎಲ್ಲರೂ ಹಿಂದಿ ಕಲಿಬೇಕು, ಅದಕ್ಕಿಂತಲೂ ದೊಡ್ಡ ಭಾಷೆಯಿಲ್ಲ” ಎಂದ ರಣಜಿ ಪಂದ್ಯದ ಕಾಂಮೆಂಟೇಟರ್‌ಗೆ ಗ್ರಾಚಾರ ಬಿಡಿಸಿದ ಕನ್ನಡಿಗರು!

ಕರ್ನಾಟಕ-ಬರೋಡಾ ರಣಜಿ ಪಂದ್ಯದ 2ನೇ ದಿನವಾದ ಗುರುವಾರ ವೀಕ್ಷಕ ವಿವರಣೆಗಾರ ಸುಶೀಲ್‌ ದೋಶಿ ನೀಡಿದ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಣಜಿ ಕ್ರಿಕೆಟ್ ಟೂರ್ನಿಯ `ಬಿ’ ಗುಂಪಿನ 9ನೇ ಪಂದ್ಯ ನಡೆಯುತ್ತಿದೆ. ಈ ವೇಳೆ ವೀಕ್ಷಕ ವಿವರಣೆಗಾರರು, ಭಾರತೀಯರು ಹಿಂದಿ ಕಲಿಯಬೇಕು. ಹಿಂದಿ ನಮ್ಮ ಮಾತೃಭಾಷೆ ಎಂದಿದ್ದಾರೆ.

ವೀಕ್ಷಕ ವಿವರಣೆಗಾರ, ‘ಗವಾಸ್ಕರ್‌ ಹಿಂದಿಯಲ್ಲಿ ಕಾಮೆಂಟ್ರಿ ಮಾಡುವುದನ್ನು ಕೇಳುವುದಕ್ಕೆ ಖುಷಿಯಾಗುತ್ತದೆ’ ಎಂದಿದ್ದಕ್ಕೆ ಇದಕ್ಕೆ ಪ್ರತಿಯಾಗಿ ಮಾತಿಗಿಳಿದ ಮತ್ತೊಬ್ಬ ಕಾಮೆಂಟೇಟರ್‌ (ಸುಶೀಲ್‌ ದೋಶಿ) “ಪ್ರತಿಯೊಬ್ಬ ಭಾರತೀಯನಿಗೂ ಹಿಂದಿ ಬರಬೇಕು. ಅದು ನಮ್ಮ ಮಾತೃಭಾಷೆ. ಅದಕ್ಕಿಂತಲೂ ದೊಡ್ಡ ಭಾಷೆಯಿಲ್ಲ. ನಾನು ಕ್ರಿಕೆಟಿಗರಾಗಿ ಹಿಂದಿ ಮಾತನಾಡಬೇಕೆ? ಎನ್ನುವರನ್ನು ನಾನು ಕೋಪದಿಂದ ನೋಡುತ್ತೇನೆ. ನೀನು ಭಾರತದಲ್ಲಿ ಇರುವಾಗ ಖಂಡಿತವಾಗಿ ಅಲ್ಲಿನ ಮಾತೃಭಾಷೆಯನ್ನೇ ಮಾತನಾಡಬೇಕು,” ಎಂದು ವಿವಾದಾತ್ಮಕ ಮಾತುಗಳನ್ನಾಡಿದ್ದಾರೆ.

ಈ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದ್ದು, ಬಿಸಿಸಿಐ ಹಾಗೂ ಪಂದ್ಯ ಪ್ರಸಾರ ಮಾಡುತ್ತಿರುವ ಸ್ಟಾರ್‌ ಸ್ಪೋರ್ಟ್ಸ್ ಸಂಸ್ಥೆಯನ್ನು ಗುರಿಯಾಗಿಸಿಕೊಂಡು ಕರ್ನಾಟಕದ ಅಭಿಮಾನಿಗಳು ಟ್ವೀಟ್‌ಗಳನ್ನು ಮಾಡಿದ್ದಾರೆ. ಎಲ್ಲಾ ರಾಜ್ಯಗಳು ತಮ್ಮದೇ ಆದ ಭಾಷೆಯನ್ನು ಹೊಂದಿದೆ. ಭಾರತದಲ್ಲಿ ಯಾವುದೇ ರಾಷ್ಟ್ರ ಭಾಷೆ ಅಂತ ಇಲ್ಲ ಎಂದು ಟ್ವಿಟರ್‌ನಲ್ಲೇ ಹಲವರು ತರಾಟೆಗೆ ತೆಗೆದುಕೊಂಡಿದ್ದಾರೆ.

Did this lunatic commentator just say “Every Indian should know Hindi” ? What on earth do you think you’re ⁦@BCCI⁩ ? Stop imposing Hindi and disseminating wrong messages. Kindly atone. Every Indian need not know Hindi #StopHindiImposition #RanjiTrophy #KARvBRD pic.twitter.com/thS57yyWJx — Ramachandra.M/ ರಾಮಚಂದ್ರ.ಎಮ್ (@nanuramu) February 13, 2020

ನೀವು ಕಮೆಂಟ್ರಿ ಹೇಳುತ್ತಿದ್ದೀರೋ ಅಥವಾ ಹಿಂದಿ ಹೇರಿಕೆ ಮಾಡುತ್ತಿದ್ದೀರೋ ಎಂದು ಜನ ಪ್ರಶ್ನೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ. ‘ಮಾನಸಿಕ ಸ್ಥಿಮಿತತೆ ಕಳೆದುಕೊಂಡಿರುವ ವೀಕ್ಷಕ ವಿವರಣೆಗಾರರೊಬ್ಬರು, ‘ಪ್ರತಿಯೊಬ್ಬ ಭಾರತೀಯನೂ ಹಿಂದಿಯನ್ನು ಕಲಿಯಬೇಕು’ ಎಂದು ಹೇಳುತ್ತಾರೆ. ಹಿಂದಿ ಹೇರಿಕೆಯನ್ನು ನಿಲ್ಲಿಸಿ. ತಪ್ಪು ಸಂದೇಶವನ್ನು ಹರಡಬೇಡಿ. ಪ್ರತಿಯೊಬ್ಬ ಭಾರತೀಯನೂ ಹಿಂದಿ ಕಲಿಯಬೇಕಾದ ಅಗತ್ಯವೇನೂ ಇಲ್ಲ’ ಎಂದು ಬಿಸಿಸಿಐ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾವು ನೀಡಿದ ವಿವರಣೆ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಅಮರನಾಥ್ ಮತ್ತು ಜೋಷಿ ಕ್ಷಮೆ ಕೇಳಿದ್ದಾರೆ. ಭಾರತ ಹಲವು ಭಾಷೆಗಳ ಭೂಮಿಯಾಗಿದ್ದು, ಯಾವ ಭಾಷೆಯನ್ನು ಮಾತನಾಡಬೇಕು ಎನ್ನುವುದು ಅವರ ಆಯ್ಕೆಗೆ ಬಿಟ್ಟ ವಿಚಾರ. ಯಾರನ್ನು ನೋಯಿಸುವ ಉದ್ದೇಶ ನಮ್ಮದಲ್ಲ ಎಂದು ಅಮರನಾಥ್ ಬಳಿಕ ಲೈವ್ ನಲ್ಲಿ ಹೇಳಿ ವಿಷಯವನ್ನು ತಣ್ಣಗೆ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top