fbpx
ಸಮಾಚಾರ

ಟಾಲಿವುಡ್​ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಕೆಜಿಎಫ್​-2: ತೆಲುಗು ರೈಟ್ಸ್ 40 ಕೋಟಿ

ಪ್ರಶಾಂತ್‌ ನೀಲ್ ನಿರ್ದೇಶನದ ‘ರಾಕಿಂಗ್‌ ಸ್ಟಾರ್‌’ ಯಶ್‌ ನಾಯಕನಾಗಿರುವ ‘ಕೆಜಿಎಫ್‌ ಚಾಪ್ಟರ್‌ 1’ ಕನ್ನಡ ಚಿತ್ರರಂಗದಲ್ಲಿ ಹಲವು ಮೈಲಿಗಲ್ಲುಗಳಿಗೆ ನಾಂದಿ ಹಾಡಿದ ಚಿತ್ರ. ಈಗ ಕೆಜಿಎಫ್ 2 ಸಿನಿಮಾದ ಶೂಟಿಂಗ್​ ಇದೀಗ ಅಂತಿಮ ಹಂತಕ್ಕೆ ಬರುತ್ತಿದ್ದು, ಸದ್ಯದ ಸುದ್ದಿ ಏನಂದರೆ, ಕೆಜಿಎಫ್ 2′ ಸಿನಿಮಾ ತೆರೆಕಾಣುವುದಕ್ಕೂ ಮೊದಲೇ ಚಿತ್ರ ಭಾರೀ ಬ್ಯುಸಿನೆಸ್ ಮಾಡಿದೆಯಂತೆ.

#KGFChapter2 telugu states asking price is more than 40cr, this is insane.
Rocky the brand! pic.twitter.com/j9T2SWefQb— KFI Box-office (@kfi_boxOffice) February 12, 2020

ಚಿತ್ರದ ತೆಲುಗು ರೈಟ್ಸ್‌ಗೆ ಭಾರಿ ಬೇಡಿಕೆ ಬಂದಿದೆಯಂತೆ. ಆಂಧ್ರ ಪ್ರದೇಶ ಮತ್ತು ತೆಲಂಗಾಣದ ತೆಲುಗು ರೈಟ್ಸ್ ಅಂದಾಜು ₹ 40 ಕೋಟಿಗೆ ಬೇಡಿಕೆ ಇಡಲಾಗಿದೆಯಂತೆ. ಆದರೆ ಇನ್ನೂ ಅಂತಿಮವಾಗಿಲ್ಲ ಎಂದಿವೆ ಮೂಲಗಳು. ಕನ್ನಡದ ಸಿನಿಮಾವೊಂದು ಬೇರೆ ಭಾಷೆಗೆ ಇಷ್ಟೊಂದು ದೊಡ್ಡ ಮೊತ್ತಕ್ಕೆ ಸೇಲ್ ಆಗಿದ್ದು ಇದೇ ಮೊದಲು ಎನ್ನಲಾಗಿದೆ.

ಒಟ್ಟಾರೆಯಾಗಿ ‘ಕೆಜಿಎಫ್ 2’ ಚಿತ್ರ ಹಲವು ಕಾರಣಗಳಿಂದ ಕುತೂಹಲ ಸೃಷ್ಟಿಸಿದೆ. ‘ಕೆಜಿಎಫ್ 1’ ವಿಶ್ವದಾದ್ಯಂತ ತೆರೆಕಂಡು ಗಲ್ಲಾಪೆಟ್ಟಿಗೆಯಲ್ಲೂ ಕೂಡ ದಾಖಲೆ ಬರೆದಿತ್ತು. ಈ ಚಿತ್ರಕ್ಕೆ ಪ್ರಶಾಂತ್ ನೀಲ್ ನಿರ್ದೇಶನ, ಹೊಂಬಾಳೆ ಫಿಲ್ಮ್ಸ್ ಬಂಡವಾಳವಿದೆ. ಈ ಸಿನಿಮಾದ ಶೂಟಿಂಗ್ ಕಾರ್ಯ ಭರದಿಂದ ಸಾಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top