fbpx
ಸಮಾಚಾರ

‘ಆಕೆ’ ನಂಬರ್ ಕೊಡಿ ಎಂದ ಭೂಪನಿಗೆ ಮುಟ್ಟಿ ನೋಡಿಕೊಳ್ಳುವ ಹಾಗೆ ಉತ್ತರ ಕೊಟ್ಟ ಪೊಲೀಸರು!

ಇತ್ತೀಚಿನ ದಿನಗಳಲ್ಲಿ ಭಾರತೀಯ ಪೊಲೀಸ್ ಪಡೆಗಳು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ ಹಾಗೂ ವಿನೂತನ ಮಾರ್ಗಗಳಿಂದ ಸಾರ್ವಜನಿಕರಿಗೆ ಮಾಹಿತಿಯನ್ನು ನೀಡುತ್ತಿದ್ದಾರೆ. ಟ್ವಿಟರ್ ನಲ್ಲಿ ಪೊಲೀಸ್ ಖಾತೆಗಳಲ್ಲಿ ನೀಡಲಾಗುವ ಹಾಸ್ಯಾಸ್ಪದ ಹಾಗೂ ಕ್ರಿಯೇಟಿವ್ ವಾರ್ನಿಂಗ್ ಜನರನ್ನು ಅತಿ ಹೆಚ್ಚು ಆಕರ್ಷಿಸುತ್ತದೆ. ಈ ಮದ್ಯೆ ಪುಣೆ ಪೊಲೀಸರ ಅಧಿಕೃತ ಟ್ವಿಟರ್ ಖಾತೆಯಲ್ಲಿ ಯುವತಿಯ ನಂಬರ್ ಕೇಳಿದ ಯುವಕನೊಬ್ಬನಿಗೆ ಕ್ಲಾಸ್ ತೆಗೆದುಕೊಂಡಿರುವುದು ಸದ್ದು ಮಾಡುತ್ತಿದೆ. ಹೀಗೆ ಮೊಬೈಲ್ ನಂಬರ್ ಕೇಳಿದಾತನಿಗೆ ಪೊಲೀಸರು ಕೊಟ್ಟಿರುವ ರಿಪ್ಲೈ ಜನರ ಮನಗೆದ್ದಿದೆ.

Sir, we are more interested in your number currently, to understand your interest in the lady’s number. You may DM. We respect privacy. https://t.co/LgaD1ZI2IT— PUNE POLICE (@PuneCityPolice) January 12, 2020

ಕಾನೂನು ವಿದ್ಯಾರ್ಥಿನಿಯೊಬ್ಬರು ತುರ್ತು ಅಗತ್ಯಕ್ಕಾಗಿ ಪುಣೆ ಪೊಲೀಸರ ಬಳಿ ಧನೋರಿ ಪೊಲೀಸ್ ಠಾಣೆ ನಂಬರ್ ಕೇಳಿದ್ದರು. ಪುಣೆ ಪೊಲೀಸರು ಕೂಡಾ ಅಷ್ಟೇ ಬೇಗ ಪ್ರತಿಕ್ರಿಯಿಸಿ ಟ್ವಿಟ್ಟರಿನಲ್ಲಿ ನಂಬರ್ ಕೊಟ್ಟಿದ್ದರು. ಆದರೆ, ಇದಾದ ಬಳಿಕ ಪುಣೆ ಪೊಲೀಸರ ಅಧಿಕೃತ ಟ್ವಿಟ್ಟರ್ ಖಾತೆಗೆ @abirchiklu ಎಂಬ ಬಳಕೆದಾರನಿಂದ ವಿಚಿತ್ರ ಮತ್ತು ಕುಚೇಷ್ಟೆಯ ರಿಕ್ವೆಸ್ಟ್‌ ಒಂದು ಬಂದಿತ್ತು. ಅದೇನೆಂದರೆ, ಈ ಭೂಪ ಪೊಲೀಸ್ ಠಾಣೆಯ ನಂಬರ್ ಕೇಳಿದ್ದ ಯುವತಿಯ ಫೋನ್ ನಂಬರ್ ಕೊಡಿ ಎಂದು ಪೊಲೀಸರ ಬಳಿ ಕೇಳಿದ್ದ…!

Yes madam, this is 020- 27171190 dhanori police chowki contact number.— PUNE POLICE (@PuneCityPolice) January 12, 2020

ಇದಕ್ಕೆ ಪ್ರತಿಕ್ರಿಯಿಸಿದ ಪುಣೆ ಪೊಲೀಸ್‌, “ಸರ್‌ ನಮಗೆ ಸದ್ಯದ ಮಟ್ಟಿಗೆ ನಿಮ್ಮ ನಂಬರ್‌ ಬಗ್ಗೆಯೇ ಹೆಚ್ಚು ಆಸಕ್ತಿ ಇದೆ. ಲೇಡಿಯ ನಂಬರ್‌ ಮೇಲಿನ ನಿಮ್ಮ ಆಸಕ್ತಿಯನ್ನು ತಿಳಿಯುವ ಕುತೂಹಲ ನಮ್ಮದು. ನೀವು ಡಿಎಂ ಮಾಡಬಹುದು. ನಿಮ್ಮ ಖಾಸಗಿತನವನ್ನು ಗೌರವಿಸುತ್ತೇವೆ,” ಎನ್ನುವ ಮೂಲಕ ಕಿಡಿಗೇಡಿಗೆ ಮುಖಕ್ಕೆ ಹೊಡೆದ ಹಾಗೆ ಉತ್ತರ ನೀಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top