fbpx
ಸಮಾಚಾರ

ಉಗ್ರರ ದಾಳಿಯಲ್ಲಿ ಹುತಾತ್ಮನಾದ ಮಾಗಡಿಯ ವೀರಯೋಧ!

ಉಗ್ರರೊಂದಿನ ಕಾದಾಟದಲ್ಲಿ ಕರ್ನಾಟಕದ ವೀರ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಜಮ್ಮುವಿನ ಉಧಂಪುರ ಕ್ಯಾಂಪ್ ಬಳಿ ನಡೆದ ಉಗ್ರರ ಗುಂಡಿನ ದಾಳಿಯಲ್ಲಿ ರಾಮನಗರ ಜಿಲ್ಲೆಯ ಮಾಗಡಿಯ ವೀರ ಯೋಧ ಹುತಾತ್ಮರಾಗಿದ್ದಾರೆ. ಮಾಗಡಿ ಪಟ್ಟಣದ ಹೊಂಬಾಳಮ್ಮನಪೇಟೆಯ ಪಾಪಣ್ಣ ಅವರ ಪುತ್ರ ವೆಂಕಟ ನರಸಿಂಹಮೂರ್ತಿ(29) ಉಗ್ರರ ಗುಂಡಿಗೆ ಹುತಾತ್ಮರಾದ ವೀರಯೋಧ.

ಜಮ್ಮುವಿನ ಉಧಂಪುರ ಕ್ಯಾಂಪ್ ಬಳಿ ನಡೆದ ಉಗ್ರರ ಗುಂಡಿನ ದಾಳಿಯಲ್ಲಿ ಮಾಗಡಿಯ ವೀರ ಯೋಧ ವೆಂಕಟ ನರಸಿಂಹಮೂರ್ತಿ ಹುತಾತ್ಮರಾಗಿದ್ದಾರೆ.ದೇಶಕ್ಕಾಗಿ ಪ್ರಾಣತೆತ್ತ ಇವರ ಆತ್ಮಕ್ಕೆ ಶಾಂತಿ ದೊರಕಲಿ pic.twitter.com/kEBxqlJAMf— GC ChandraShekhar (@GCC_MP) January 16, 2020

ಹುತಾತ್ಮ ಯೋಧ ಸೇನೆಯ ಸಿ.ಎಲ್.ಎಸ್.ಎಫ್ ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಯೋಧ ವೆಂಕಟ ನರಸಿಂಹಮೂರ್ತಿ ಅವರು ನಿನ್ನೆ ನಡೆದ ಉಗ್ರರೊಂದಿಗಿನ ಸೆಣಸಾಟದಲ್ಲಿ ಮೃತಪಟ್ಟ ವಿಷಯ ಸೇನೆಯಿಂದ ಮಾಗಡಿ ಪೊಲೀಸ್ ಠಾಣೆಗೆ ಬಂದಿದೆ. ಪೋಲೀಸರು ಹುತಾತ್ಮ ಯೋಧನ ಪೋಷಕರಿಗೆ ಮಾಹಿತಿ ನೀಡಿದ್ದಾರೆ.

ವೆಂಕಟ ನರಸಿಂಹಮೂರ್ತಿ ಅವರ ಪಾರ್ಥೀವ ಶರೀರ ಮಾಗಡಿಗೆ ಯಾವಾಗ ತಲುಪಲಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ತಿಳಿದು ಬಂದಿಲ್ಲ. ಇತ್ತೀಚೆಗಷ್ಟೇ ರಜೆ ಮೇಲೆ ಮಾಗಡಿಗೆ ಬಂದಿದ್ದ ಯೋಧ ವೆಂಕಟ ನರಸಿಂಹಮೂರ್ತಿ ರಜೆ ಮುಗಿದ ನಂತರ ಮರಳಿ ಜಮ್ಮು-ಕಾಶ್ಮೀರ ಗಡಿಯಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top