fbpx
ಸಮಾಚಾರ

ಆರ್ಚರ್‌ ವಿರುದ್ಧ ಜನಾಂಗೀಯ ನಿಂದನೆ ಮಾಡಿದ್ದ ವ್ಯಕ್ತಿಗೆ ಪಾಠ ಕಲಿಸಿದ ಕಿವೀಸ್‌ ಕ್ರಿಕೆಟ್‌ ಮಂಡಳಿ!

ಇಂಗ್ಲೆಂಡ್‌ ಕ್ರಿಕೆಟ್‌ ತಂಡ ನ್ಯೂಜಿಲೆಂಡ್‌ಗೆ ಪ್ರವಾಸ ಕೈಗೊಂಡಿದ್ದಾಗ ನಡೆದಿದ್ದ ಇತ್ತಂಡಗಳ ಟೆಸ್ಟ್ ವೇಳೆ ಇಂಗ್ಲೆಂಡ್ ಬೌಲರ್ ಜೋಫ್ರಾ ಆರ್ಚರ್ ಅವರನ್ನು ನಿಂದಿಸಿದ್ದ ವ್ಯಕ್ತಿಯನ್ನು ನ್ಯೂಜಿಲೆಂಡ್‌ನಲ್ಲಿ ನಡೆಯುವ ಎಲ್ಲಾ ಅಂತಾರಾಷ್ಟ್ರೀಯ ಮತ್ತು ದೇಸಿ ಪಂದ್ಯಗಳಿಂದ ಎರಡು ವರ್ಷಗಳ ಅವಧಿಯವರೆಗೆ ನಿಷೇಧಿಸಲಾಗಿದೆ.

2019ರ ನವೆಂಬರ್‌ನಲ್ಲಿ ನಡೆದ ಆತಿಥೇಯ ನ್ಯೂಜಿಲೆಂಡ್‌ ಮತ್ತು ಇಂಗ್ಲೆಂಡ್‌ ನಡುವಣ ಮೊದಲ ಟೆಸ್ಟ್‌ ಪಂದ್ಯದ 5ನೇ ಹಾಗೂ ಅಂತಿಮ ದಿನದಾಟದ ವೇಳೆ ಜೋಫ್ರಾ ಆರ್ಚರ್‌ ಅವರನ್ನು ಗುರಿಯಾಗಿಸಿ ವ್ಯಕ್ತಿಯೊಬ್ಬ ಜನಾಂಗೀಯ ನಿಂದನೆಗೈದಿದ್ದನು. ಈ ಬಗ್ಗೆ ತನಿಖೆ ನಡೆಸಿ ಆ ವ್ಯಕ್ತಿ ಯಾರೆಂದು ಪತ್ತೆ ಮಾಡಿ, ಆತ ಮುಂದಿನ 2 ವರ್ಷಗಳ ಕಾಲ ನ್ಯೂಜಿಲೆಂಡ್‌ನಲ್ಲಿ ಯಾವುದೇ ಅಂತಾರಾಷ್ಟ್ರೀಯ ಮತ್ತು ದೇಶಿ ಪಂದ್ಯಗಳನ್ನು ಕ್ರೀಡಾಂಗಣಕ್ಕೆ ಬಂದು ವೀಕ್ಷಿಸದಂತೆ ನಿಷೇಧ ಹೇರಿದೆ.

ಈ ಘಟನೆಯ ಬಳಿಕ ಕಿವೀಸ್ ನಾಯಕ ಕೇನ್ ವಿಲಿಯಮ್ಸ್ ಅವರು ಆರ್ಚರ್ ಬಳಿ ಕ್ಷಮೆ ಕೇಳಿದ್ದರು. ನಂತರ ಪೊಲೀಸರು ವಿಚಾರಣೆ ನಡೆಸಿ ಆಕ್ಲಂಡ್ ಮೂಲದ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದರು. 28ರ ಹರೆಯದ ಆ ವ್ಯಕ್ತಿಯು ಘಟನೆಗೆ ಕ್ಷಮೆ ಕೇಳಿದ್ದು, ಪೊಲೀಸರು ಎಚ್ಚರಿಕೆಯನ್ನೂ ನೀಡಿದ್ದಾರೆ. ಮುಂದಿನ ಎರಡು ವರ್ಷಗಳ ಕಾಲ ಯಾವುದೇ ಅಂತಾರಾಷ್ಟ್ರೀಯ ಮತ್ತು ದೇಶೀಯ ಕೂಟಗಳಲ್ಲಿ ಭಾಗವಹಿಸಲು ನಿಷೇಧ ಹೇರಲಾಗಿದೆ. ಒಂದು ವೇಳೆ ಆತ ನಿಷೇಧ ಶಿಕ್ಷೆಯನ್ನು ಪಾಲಿಸದೇ ಇದ್ದಲ್ಲಿ ಪೊಲೀಸರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎಂದು ವರದಿಯಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top