fbpx
ಸಮಾಚಾರ

‘ಅಂದು ನಾನೇಕೆ ಡೈವ್ ಮಾಡಲಿಲ್ಲ?’- ವಿಶ್ವಕಪ್ ರನೌಟ್ ಕುರಿತು ಕೊನೆಗೂ ಮೌನ ಮುರಿದ ಧೋನಿ!

2019 ಏಕದಿನ ವಿಶ್ವಕಪ್ ಕ್ರಿಕೆಟಿನಲ್ಲಿ ಟೀಂ ಇಂಡಿಯಾ ಸೆಮಿಫೈನಲ್‍ನಲ್ಲಿ ಸೋತು ಹಿಂದಿರುಗಿತ್ತು. ನ್ಯೂಜಿಲೆಂಡ್ ವಿರುದ್ಧದ ಸೆಮಿಸ್‍ನಲ್ಲಿ ನಡೆದ ಪಂದ್ಯದಲ್ಲಿ ಧೋನಿ ರನೌಟ್ ಆಗುವ ಮೂಲಕ ಹೊರ ನಡೆದಿದ್ದರು. ಧೋನಿಯವರ ರನೌಟ್ ತಂಡವನ್ನು ಜಯದಿಂದ ದೂರ ಮಾಡಿತ್ತು. ಈ ರನೌಟ್ ಕುರಿತು ಇತ್ತೀಚೆಗಷ್ಟೇ ಧೋನಿ ಪ್ರತಿಕ್ರಿಯೆ ನೀಡಿದ್ದು, ತಮ್ಮ ವೃತ್ತಿ ಜೀವನ ಮೊದಲ ಮ್ಯಾಚ್‍ನಲ್ಲಿ ರನೌಟ್ ಆದ ರೀತಿಯಲ್ಲೇ ಸೆಮಿಸ್‍ನಲ್ಲೂ ರನೌಟ್ ಆಗಿರುವುದಾಗಿ ನೆನಪಿಸಿಕೊಂಡಿದ್ದಾರೆ.

“ನನ್ನ ಮೊದಲ ಪಂದ್ಯದಲ್ಲಿ ರನೌಟ್ ಆಗಿದ್ದೆ. ಈ ಆಟದಲ್ಲಿ ಮತ್ತೆ ರನೌಟ್ ಆದೆ. ನಾನು ಏಕೆ ಡೈವ್ ಹೊಡೆಯಲಿಲ್ಲ ಎಂದು ನನ್ನ ಬಳಿಯೇ ಹೇಳುತ್ತಿರುತ್ತೇನೆ. ಆ ಎರಡು ಇಂಚುಗಳು ಪದೇ ಪದೇ ನಾನು ಡೈವ್‌ಗೆ ಧುಮುಕಬೇಕಿತ್ತು ಎಂದು ಹೇಳುತ್ತಿರುತ್ತದೆ ಎಂದು 38ರ ಹರೆಯದ ಧೋನಿ ತಿಳಿಸಿದರು.

ಅಂದಹಾಗೆ ಸೆಮಿಫೈನಲ್ ಪಂದ್ಯದಲ್ಲಿ 72 ಎಸೆತಗಳನ್ನು ಎದುರಿಸಿದ ಧೋನಿ ತಲಾ ಒಂದು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 50 ರನ್ ಗಳಿಸಿದರು. ನಿಧಾನಗತಿಯ ಇನ್ನಿಂಗ್ಸ್‌ಗಾಗಿ ಟೀಕೆಗೆ ಗುರಿಯಾಗಿರುವ ಧೋನಿ ನಿರ್ಣಾಯಕ ಹಂತದಲ್ಲಿ ಮಾರ್ಟಿನ್ ಗಪ್ಟಿಲ್ ಥ್ರೋದಲ್ಲಿ ರನೌಟ್ ಆಗುವ ಮೂಲಕ ನಿರಾಸೆ ಮೂಡಿಸಿದರು. ಪರಿಣಾಮ ಭಾರತ 49.3 ಓವರ್‌ಗಳಲ್ಲಿ 221 ರನ್‌ಗಳಿಗೆ ತನ್ನೆಲ್ಲ ವಿಕೆಟುಗಳನ್ನು ಕಳೆದುಕೊಂಡಿತು. ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top