fbpx
ಸಮಾಚಾರ

ಐಸಿಸಿ ಟಿ20 ವಿಶ್ವಕಪ್: ಟೀಮ್ ಇಂಡಿಯಾ ತಂಡ ಪ್ರಕಟ: ಕರ್ನಾಟಕದ ಇಬ್ಬರಿಗೆ ಸ್ಥಾನ!

ಆಸ್ಟ್ರೇಲಿಯಾದಲ್ಲಿ ಫೆಬ್ರವರಿ 21 ರಿಂದ ಮಹಿಳಾ ಟಿ20 ವಿಶ್ವಕಪ್ ಟೂರ್ನಿ ಆರಂಭವಾಗಲಿದೆ. ಈ ಮಹತ್ವದ ಟೂರ್ನಿಗೆ ಟೀಮ್ ಇಂಡಿಯಾ ಮಹಿಳಾ ತಂಡವನ್ನು ನೆನ್ನೆ ಆಯ್ಕೆ ಮಾಡಲಾಗಿದೆ.15 ಆಟಗಾರ್ತಿಯರ ಟೀಮ್ ಇಂಡಿಯಾ ತಂಡವನ್ನು ಹರ್ಮನ್ ಪ್ರೀತ್‌ಕೌರ್ ವಿಶ್ವಕಪ್‌ನಲ್ಲಿ ಮುನ್ನಡೆಸಲಿದ್ದಾರೆ. ತಂಡದಲ್ಲಿ ಕರ್ನಾಟಕದ ವೇದ ಕೃಷ್ಣಮೂರ್ತಿ ಸ್ಥಾನ ಮತ್ತು ರಾಜೇಶ್ವರಿ ಗಾಯಕ್ವಾಡ್ ಸ್ಥಾನ ಪಡೆದಿದ್ದಾರೆ.

📢Squad Announcement📢@ImHarmanpreet will lead India’s charge at @T20WorldCup #T20WorldCup #TeamIndia pic.twitter.com/QkpyypyJKc— BCCI Women (@BCCIWomen) January 12, 2020

ವಿಶೇಷವೆಂದರೆ ಹರಿಯಾಣದ 15 ವರ್ಷದ ಬಾಲಕಿ ಶರ್ಫಿ ವರ್ಮಾ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಟ್ಟದ ಪಂದ್ಯದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಲ್ಲದೆ, ಪಶ್ಚಿಮ ಬಂಗಾಳದ ರೋಕಿ ಮತ್ತು ರಿಚಾ ಘೋಷ್ ತಂಡದಲ್ಲಿರುವುದು ಕೂಡ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ಟಿ 20 ವಿಶ್ವಕಪ್‌ಗೆ ಮುಂಚಿತವಾಗಿ ಆಸ್ಟ್ರೇಲಿಯಾದಲ್ಲಿ ತ್ರಿಕೋನ ಸರಣಿಗಾಗಿ 16 ಸದಸ್ಯರ ತಂಡವನ್ನು ಆಯ್ಕೆದಾರರು ಘೋಷಿಸಿದ್ದು, ನುಝತ್ ಪರ್ವೀನ್ ಅವರನ್ನು 16 ನೇ ಆಟಗಾರರನ್ನಾಗಿ ಸೇರ್ಪಡೆ ಮಾಡಲಾಗಿದೆ. ಆ ಪಂದ್ಯಾವಳಿ ಜನವರಿ 31 ರಂದು ಪ್ರಾರಂಭಗೊಳ್ಳುತ್ತಿದ್ದು ಇಂಗ್ಲೆಂಡ್ ಸಹ ಸ್ಪರ್ಧಿಸಲಿದೆ.

ಟಿ20 ವಿಶ್ವಕಪ್ ತಂಡ ಹೀಗಿದೆ-
ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನಾ, ಶಫಾಲಿ ವರ್ಮಾ, ಜೆಮಿಮಾ ರೊಡ್ರಿಗಸ್, ಹರ್ಲೀನ್ ಡಿಯೋಲ್, ದೀಪ್ತಿ ಶರ್ಮಾ, ವೇದ ಕೃಷ್ಣಮೂರ್ತಿ, ರಿಚಾ ಘೋಷ್, ತಾನಿಯಾ ಭಾಟಿಯಾ, ಪೂನಂ ಯಾದವ್, ರಾಧಾ ಯಾದವ್, ರಾಜೇಶ್ವರಿ ಗಾಯಕ್ವಾಡ್‌, ಶಿಖಾ ಪಾಂಡೆ, ಪೂಜಾ ವಸ್ತ್ರಕಾರ್‌, ಅರುಂಧತಿ ರೆಡ್ಡಿ.

ತ್ರಿಕೋನ ಸರಣಿಗೆ ಆಯ್ಕೆಯಾಗಿರುವ ತಂಡ ಹೀಗಿದೆ-
ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಜೆಮಿಮಾ ರೊಡ್ರಿಗಸ್, ಹರ್ಲೀನ್ ಡಿಯೋಲ್, ದೀಪ್ತಿ ಶರ್ಮಾ, ವೇದ ಕೃಷ್ಣಮೂರ್ತಿ, ರಿಚಾ ಘೋಷ್, ತಾನಿಯಾ ಭಾಟಿಯಾ, ಪೂನಂ ಯಾದವ್, ರಾಧಾ ಯಾದವ್‌, ರಾಜೇಶ್ವರಿ ಗಾಯಕ್ವಾಡ್‌, ಪೂಜಾ ವಸ್ತ್ರಕಾರ್, ಅರುಂಧತಿ ರೆಡ್ಡಿ, ನುಝಾಹತ್‌ ಪರ್ವೀನ್.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top