fbpx
ಸಮಾಚಾರ

ಟೀಂ ಇಂಡಿಯಾ ವೇಗಿ ಜಸ್‍ಪ್ರೀತ್ ಬುಮ್ರಾಗೆ ಪ್ರತಿಷ್ಠಿತ ಪ್ರಶಸ್ತಿ!

ಅದ್ಭುತ ಬೌಲಿಂಗ್ ಪ್ರದರ್ಶನದಿಂದ ಮಿಂಚುತ್ತಿರುವ ಟೀಂ ಇಂಡಿಯಾ ವೇಗಿ ಜಸ್‍ಪ್ರೀತ್ ಬುಮ್ರಾ ಅವರು ಮತ್ತೊಂದು ಹಿರಿಮೆಗೆ ಪಾತ್ರರಾಗಿದ್ದಾರೆ. 2018-19 ವರ್ಷದ ಬಿಸಿಸಿಐ ಪ್ರಶಸ್ತಿ ಪಟ್ಟಿ ಬಿಡುಗಡೆಯಾಗಿದ್ದು, ಪಾಲಿ ಉಮ್ರಿಗರ್ ಪ್ರಶಸ್ತಿಗೆ ಬುಮ್ರಾ ಭಾಜನರಾಗಿದ್ದಾರೆ. ಮಹಿಳಾ ವಿಭಾಗದಲ್ಲಿ ಪೂನಂ ಯಾದವ್ ಅತ್ಯುತ್ತಮ ಆಟಗಾರ್ತಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಲೆಗ್ ಸ್ಪಿನ್ನರ್ ಪೂನಂ ಯಾದವ್ ಇತ್ತೀಚೆಗಷ್ಟೇ ಪ್ರತಿಷ್ಠಿತ ಅರ್ಜುನ ಪ್ರಶಸ್ತಿಗೂ ಭಾಜನರಾಗಿದ್ದರು.

ಈ ಋತುವಿನಲ್ಲಿ ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಆಡಿದ ಆರು ಟೆಸ್ಟ್ ಪಂದ್ಯಗಳಿಂದ ಬುಮ್ರಾ 34 ವಿಕೆಟ್ ಪಡೆದಿದ್ದು . ಏಕದಿನ ಪಂದ್ಯಗಳಲ್ಲಿ ಅವರು 17 ಪಂದ್ಯಗಳಿಂದ 31 ವಿಕೆಟ್‌, ಇನ್ನು ಕಡಿಮೆ ಆವೃತ್ತಿಯ ಕ್ರಿಕೆಟ್ ನಲ್ಲಿ 7 ಪಂದ್ಯಗಳಿಂದ 8 ವಿಕೆಟ್‌ಗಳನ್ನು ಪಡೆದಿದ್ದಾರೆ.

ಬಿಸಿಸಿಐ ಪ್ರಶಸ್ತಿ ಪುರಸ್ಕೃತರು: 2018-19

 1. ಕರ್ನಲ್‌ ಸಿ.ಕೆ. ನಾಯ್ಡು ಪ್ರಶಸ್ತಿ, ಜೀವಮಾನದ ಸಾಧನೆ: ಕೆ. ಶ್ರೀಕಾಂತ್‌
 2. ಬಿಸಿಸಿಐ ಜೀವಮಾನದ ಸಾಧನೆ: ಅಂಜುಮ್‌ ಚೋಪ್ರಾ
 3. ಬಿಸಿಸಿಐ ವಿಶೇಷ ಪ್ರಶಸ್ತಿ: ದಿಲೀಪ್‌ ದೋಶಿ
 4. ದಿಲೀಪ್‌ ಸರ್ದೇಸಾಯಿ ಪ್ರಶಸ್ತಿ (ಅತ್ಯಧಿಕ ಟೆಸ್ಟ್‌ ರನ್‌): ಚೇತೇಶ್ವರ್‌ ಪೂಜಾರ
 5. ದಿಲೀಪ್‌ ಸರ್ದೇಸಾಯಿ ಪ್ರಶಸ್ತಿ (ಅತ್ಯಧಿಕ ಟೆಸ್ಟ್‌ ವಿಕೆಟ್‌): ಜಸ್‌ಪ್ರೀತ್‌ ಬುಮ್ರಾ
 6. ಏಕದಿನದ ಬ್ಯಾಟಿಂಗ್‌ ಸಾಧಕಿ: ಸ್ಮತಿ ಮಂಧನಾ
 7. ಏಕದಿನದ ಬೌಲಿಂಗ್‌ ಸಾಧಕಿ: ಜೂಲನ್‌ ಗೋಸ್ವಾಮಿ
 8. ಪಾಲಿ ಉಮ್ರಿಗರ್‌ ಪ್ರಶಸ್ತಿ (ಶ್ರೇಷ್ಠ ಅಂತಾರಾಷ್ಟ್ರೀಯ ಕ್ರಿಕೆಟಿಗ): ಜಸ್‌ಪ್ರೀತ್‌ ಬುಮ್ರಾ
 9. ಶ್ರೇಷ್ಠ ಅಂತಾರಾಷ್ಟ್ರೀಯ ಆಟಗಾರ್ತಿ: ಪೂನಂ ಯಾದವ್‌
 10. ಶ್ರೇಷ್ಠ ಅಂತಾರಾಷ್ಟ್ರೀಯ ಡೆಬ್ಯು: ಮಾಯಾಂಕ್‌ ಅಗರ್ವಾಲ್‌
 11. ಶ್ರೇಷ್ಠ ಅಂತಾರಾಷ್ಟ್ರೀಯ ಡೆಬ್ಯು: ಶಫಾಲಿ ವರ್ಮ
 12. ಲಾಲಾ ಅಮರನಾಥ್‌ ಪ್ರಶಸ್ತಿ (ಶ್ರೇಷ್ಠ ರಣಜಿ ಆಲ್‌ರೌಂಡರ್‌): ಶಿವಂ ದುಬೆ
 13. ಲಾಲಾ ಅಮರನಾಥ್‌ ಪ್ರಶಸ್ತಿ (ದೇಶಿ ಏಕದಿನದ ಶ್ರೇಷ್ಠ ಆಲ್‌ರೌಂಡರ್‌): ನಿತೀಶ್‌ ರಾಣಾ
 14. ಮಾಧವ ರಾವ್‌ ಸಿಂಧಿಯಾ ಪ್ರಶಸ್ತಿ (ರಣಜಿಯಲ್ಲಿ ಅತ್ಯಧಿಕ ರನ್‌): ಮಿಲಿಂದ್‌ ಕುಮಾರ್‌
 15. ಮಾಧವ ರಾವ್‌ ಸಿಂಧಿಯಾ ಪ್ರಶಸ್ತಿ (ರಣಜಿಯಲ್ಲಿ ಅತ್ಯಧಿಕ ವಿಕೆಟ್‌): ಅಶುತೋಷ್‌ ಅಮಾನ್‌
 16. ದೇಶಿ ಕ್ರಿಕೆಟಿನ ಶ್ರೇಷ್ಠ ಅಂಪಾಯರ್‌: ವೀರೇಂದರ್‌ ಶರ್ಮ
 17. ದೇಶಿ ಕ್ರಿಕೆಟಿನ ಶ್ರೇಷ್ಠ ತಂಡ: ವಿದರ್ಭ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top