fbpx
ಸಮಾಚಾರ

ಕಾಡ್ಗಿಚ್ಚಿನ ಸಂತ್ರಸ್ತರಿಗಾಗಿ ವಾರ್ನ್​ ಟೋಪಿ ಹರಾಜು: ದಾಖಲೆ ಬೆಲೆಗೆ ಮಾರಾಟ, ಧೋನಿ ಹಿಂದಿಕ್ಕಿದ ವಾರ್ನ್.

ಆಸ್ಟ್ರೇಲಿಯಾ ತಂಡದ ಮಾಜಿ ಲೆಗ್‌ ಸ್ಪಿನ್ನರ್‌ ಶೇನ್‌ ವಾರ್ನ್‌ ಅವರ ‘ಬ್ಯಾಗಿ ಗ್ರೀನ್‌’ ಟೆಸ್ಟ್‌ ಕ್ಯಾಪ್‌, ಕ್ರಿಕೆಟ್‌ ಜಗತ್ತಿನ ಅತ್ಯಂತ ದುಬಾರಿ ಸ್ಮರಣಿಕೆ ಎಂದೆನಿಸಿಕೊಂಡಿದೆ. ಆಸ್ಟ್ರೇಲಿಯಾದಲ್ಲಿ ಹರಡಿರುವ ಕಾಳ್ಗಿಚ್ಚಿಗೆ ಸಿಲುಕಿ ಎಲ್ಲವನ್ನೂ ಕಳೆದುಕೊಂಡಿರುವವರಿಗೆ ನೆರವಾಗಲು ವಾರ್ನ್‌ ತಮ್ಮ ಟೆಸ್ಟ್‌ ಕ್ರಿಕೆಟ್‌ ಕ್ಯಾಪ್‌ (ಬ್ಯಾಗಿ ಗ್ರೀನ್‌) ಹರಾಜಿಗೆ ಇಟ್ಟಿದ್ದರು.

ಶುಕ್ರವಾರ (ಜನವರಿ 10) ಬೆಳಗ್ಗೆ ಬಿಡ್ಡಿಂಗ್ ಕೊನೆಗೊಳ್ಳುವ ಹೊತ್ತಿಗೆ 50ರ ಹರೆಯದ ಶೇನ್ ವಾರ್ನ್ ಅವರ ಜನಪ್ರಿಯ ಬ್ಯಾಗಿ ಗ್ರೀನ್‌ ಕ್ಯಾಪ್‌ $1,007,500 (7,15,97,483 ರೂ.)ಗೆ ಹರಾಜಾಗಿ ದಾಖಲೆ ನಿರ್ಮಿಸಿದೆ. ‘M.C. from Sydney’ಗೆ ವಾರ್ನ್ ಕ್ಯಾಪ್‌ ಮಾರಾಟವಾಗಿದೆ.

Thankyou so much to everyone that placed a bid & a huge Thankyou / congrats to the successful bidder – you have blown me away with your generosity and this was way beyond my expectations ! The money will go direct to the Red Cross bushfire appeal. Thankyou, Thankyou, Thankyou ❤️ pic.twitter.com/vyVcA7NfGs— Shane Warne (@ShaneWarne) January 9, 2020

ವಾರ್ನ್ ಫೇಮಸ್ ಕ್ಯಾಪ್ ಖರೀದಿಸಿದ ಈ ‘ಎಂಸಿ’ ಅಂದರೆ ಯಾರೆಂದು ಇನ್ನಷ್ಟೇ ಗೊತ್ತಾಗಬೇಕಿದೆ. ಹರಾಜಿನ ವೇಳೆ M.C. from Sydney ಮತ್ತು W.C. from Gordon ನಡುವೆ ತೀವ್ರ ಪೈಪೋಟಿ ನಡೆದಿತ್ತು. ಕೊನೆಗೆ ಎಂಸಿ ಬಿಡ್‌ ಗೆದ್ದರು. ಹರಾಜಿನಿಂದ ಬರುವ ಹಣ ಆಸ್ಟ್ರೇಲಿಯಾದ ರೆಡ್‌ಕ್ರಾಸ್ ಬುಷ್‌ಫೈರ್ ಪರಿಹಾರ ನಿಧಿಗೆ ಹೋಗಲಿದೆ.

ಬ್ಯಾಗಿ ಗ್ರೀನ್ ಕ್ಯಾಪ್ ಟೆಸ್ಟ್ ಗೆ ಪಾದಾರ್ಪಣೆ ಮಾಡುವಾಗ ನೀಡುವ ಕ್ಯಾಪ್ ಆಗಿದ್ದು, ಇದನ್ನು ವಾರ್ನ್ ಆಸ್ಟ್ರೇಲಿಯಾ ಕಾಡ್ಗಿಚ್ಚಿಗೆ ಹಣ ಸಂಗ್ರಹಿಸಲು ಹರಾಜಿಗಿಟ್ಟಿದ್ದಾರೆ. ಕಾಡ್ಗಿಚ್ಚಿನಿಂದ ಉಂಟಾಗಿರುವ ನಷ್ಟಕ್ಕೆ ಪರಿಹಾರ ಹಣ ಸಂಗ್ರಹಿಸುವ ಪ್ರಯತ್ನದಲ್ಲಿರುವ ವಾರ್ನ್ ತಮ್ಮ ಟೆಸ್ಟ್ ಕ್ಯಾಪ್ ಅನ್ನು ಹರಾಜಿಗಿಟ್ಟಿದ್ದಾರೆ.

ಅಂದಹಾಗೆ ಈ ಹಿಂದೆ 2011ರ ಏಕದಿನ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಭಾರತ ತಂಡದ ನಾಯಕ ಮಹೇಂದ್ರ ಸಿಂಗ್‌ ಧೋನಿ ಬಳಸಿದ್ದ ಬ್ಯಾಟ್‌ ₹ 1.1 ಕೋಟಿಗೆ ಮಾರಾಟವಾಗಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top