fbpx
ಸಮಾಚಾರ

ಅವಧಿಗಿಂತ ಮೊದಲೇ ಬಾಕಿ ಹಣ ಪಾವತಿಸಿದ ಭಾರತಕ್ಕೆ ವಿಶ್ವಸಂಸ್ಥೆ ಶ್ಲಾಘನೆ!

ನಿಗಧಿತ ಅವಧಿಗಿಂತ ಮೊದಲೇ ನೀಡಬೇಕಾದ ಬಾಕಿ ಹಣವನ್ನು ನೀಡಿದ ಕಾರಣಕ್ಕಾಗಿ ವಿಶ್ವಸಂಸ್ಥೆ ಭಾರತ ಸರ್ಕಾರಕ್ಕೆ ಧನ್ಯವಾದ ಹೇಳಿದೆ. “ನೀವೂ ಸೇರಿದಂತೆ ಹಲವು ರಾಷ್ಟ್ರಗಳು ಮಾತ್ರ ಬಜೆಟ್‌ ನಿರೀಕ್ಷಣಾ ಮೊತ್ತವನ್ನು ಮುಂಚಿತ ವಾಗಿಯೇ ಶುಲ್ಕ ಪಾವತಿ ಮಾಡಿವೆ. ವಿಶ್ವಸಂಸ್ಥೆಯ ಮೇಲೆ ಭಾರತ ಹೊಂದಿರುವ ಕಾಳಜಿಗೆ ಧನ್ಯವಾದಗಳು’ ಎಂದು ವಿಶ್ವಸಂಸ್ಥೆ ಹೇಳಿದೆ.

ವಿಶ್ವಸಂಸ್ಥೆಗೆ ಸದಸ್ಯ ರಾಷ್ಟ್ರಗಳು ನೀಡಬೇಕಾದ ಪೂರ್ಣ ಪ್ರಮಾಣದ ಮೊತ್ತವನ್ನು ಭಾರತ ನಿಗದಿತ ಸಮಯಕ್ಕೂ ಮೊದಲೇ ಪಾವತಿಸಿದೆ. ಈ ಮೂಲಕ ಭಾರತ 193 ಸದಸ್ಯ ರಾಷ್ಟ್ರಗಳ ಪೈಕಿ ನಿಗದಿತ ಅವಧಿಗೂ ಮುನ್ನವೇ ಪೂರ್ಣ ಹಣ ಪಾವತಿಸಿದ ನಾಲ್ಕನೇ ರಾಷ್ಟ್ರವಾಗಿದ್ದು, ವಿಶ್ವಸಂಸ್ಥೆ ಭಾರತಕ್ಕೆ ಧನ್ಯವಾದ ತಿಳಿಸಿದೆ. ಫೆ.1ರವರೆಗೆ ಸಮಯ ನೀಡಲಾಗಿತ್ತು.

‘ಭಾರತವು ಜನವರಿ 10ರಂದು ₹ 166 ಕೋಟಿ ಪಾವತಿಸಿದೆ. ಈ ಹಣ ಪಾವತಿಗೆ ವಿಶ್ವಸಂಸ್ಥೆಯು ಫೆ. 1ರ ತನಕ ಕಾಲಾವಕಾಶ ನೀಡಿತ್ತು’ ಎಂದು ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿಯ ವಕ್ತಾರ ಸ್ಟೀಫನ್ ದುಜಾರಿಕ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಒಂದು ತಿಂಗಳ ಮೊದಲೇ ಬಾಕಿ ಹಣ ನೀಡಿದ್ದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top