fbpx
ಸಮಾಚಾರ

ಗುಡ್ ಫ್ರೈಡೇಗೆ ಆಗಮಿಸಲಿದ್ದಾನೆ ರಾಬರ್ಟ್!

‘ರಾಬರ್ಟ್’ ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಎಂದು ಅಭಿಮಾನಿಗಳು ಉಸಿರು ಬಿಡಿ ಹಿಡಿದು ಕಾಯುತ್ತಿದ್ದಾರೆ. ನಿರ್ದೇಶಕ ತರುಣ್ ಸುಧೀರ್ ರಿಲೀಸ್ ಡೇಟ್ ಫಿಕ್ಸ್ ಮಾಡಿದ್ದಾರೆ. ಬೇಸಿಗೆ ರಜೆ ಅಂದರೇ ಏಪ್ರಿಲ್ 9 ರಂದು ರಿಲೀಸ್ ಮಾಡಲಾಗುವುದು ಎಂದು ಹೇಳಿದ್ದಾರೆ

ರಾಬರ್ಟ್‌’ ಚಿತ್ರವನ್ನು ಏಪ್ರಿಲ್‌ 9ರ ಗುರುವಾರ ರಿಲೀಸ್ ಮಾಡಲು ನಿರ್ದೇಶಕ ತರುಣ್‌ ಮತ್ತು ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಪ್ಲಾನ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಏಪ್ರಿಲ್ 9ರಂದು ಸಿನಿಮಾ ಬಿಡುಗಡೆಯಾದರೆ, ಅದರ ಮಾರನೇ ದಿನ, ಅಂದರೆ ಏಪ್ರಿಲ್ 10 ಗುಡ್‌ ಫ್ರೈಡೇ ಇರಲಿದೆ. ಆ ರಜಾ ದಿನವು ಚಿತ್ರದ ಗಳಿಕೆಗೆ ಪ್ಲಸ್ ಪಾಯಿಂಟ್ ಆಗಲಿದೆ ಎಂಬುದು ಚಿತ್ರತಂಡದ ಆಲೋಚನೆ!

ಸದ್ಯ ಹಾಡಿನ ಚಿತ್ರೀಕರಣ ಬಾಕಿ ಉಳಿಸಿಕೊಂಡಿದೆ ಚಿತ್ರತಂಡ. ದರ್ಶನ್ ಮತ್ತು ನಟಿ ಆಶಾ ಭಟ್ ನಡುವಿನ ಡ್ಯುಯೆಟ್ ಹಾಡಿನ ಚಿತ್ರೀಕರಣ ಮಾಡಬೇಕಿದೆ ಚಿತ್ರತಂಡ. ಸಧ್ಯದಲ್ಲೇ ಹಾಡಿನ ಚಿತ್ರೀಕರಣ ಮುಗಿಸಿ ಪೊಸ್ಟ್ ಪ್ರೊಡಕ್ಷನ್ ಕೆಲಸ ಶುರು ಮಾಡಿಕೊಳ್ಳಲಿದೆ ಚಿತ್ರತಂಡ.

ರಾಬರ್ಟ್‌ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ನಟನೆಯ 53ನೇ ಚಿತ್ರ. ಇದಕ್ಕೆ ತರುಣ್‌ ಸುಧೀರ್‌ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ದರ್ಶನ್‌ಗೆ ನಾಯಕಿಯಾಗಿ ಭದ್ರಾವತಿ ಮೂಲದ ಕನ್ನಡತಿ ಆಶಾ ಭಟ್‌ ನಟಿಸಿದ್ದಾರೆ. ತೆಲುಗಿನ ಖ್ಯಾತ ಖಳನಟ ಜಗಪತಿಬಾಬು, ಚಂದನವನದ ವಿನೋದ್‌ ಪ್ರಭಾಕರ್‌ ಕೂಡ ಮುಖ್ಯಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ಉಮಾಪತಿ ಶ್ರೀನಿವಾಸ್‌ ಬಂಡವಾಳ ಹೂಡಿದ್ದು, ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top