fbpx
ಸಮಾಚಾರ

“ರಾಜಕೀಯ ರ‍್ಯಾಲಿಯಲ್ಲಿ ಸರ್ಕಾರೀ ನೌಕರರೂ ಭಾಗವಹಿಸಬಹುದು” ತ್ರಿಪುರ ಹೈಕೋರ್ಟ್ ತೀರ್ಪು

ಸರ್ಕಾರದ ವಿರುದ್ದದ ರಾಜಕೀಯ ರ‍್ಯಾಲಿಯಲ್ಲಿ ಉಪಸ್ಥಿತರಿದ್ದುದಕ್ಕಾಗಿ ಸರಕಾರಿ ನೌಕರರ ವಿರುದ್ಧ ಯಾವುದೇ ದಂಡನಾತ್ಮಕ ಕ್ರಮವನ್ನು ಕೈಗೊಳ್ಳಬಾರದು” ಎಂದು ತ್ರಿಪುರಾ ಹೈಕೋರ್ಟ್ ಆದೇಶ ನೀಡಿದೆ.

2017ರ ಡಿಸೆಂಬರ್ 31ರಂದು ಎಡರಂಗ ಆಯೋಜಿಸಿದ್ದ ರ‍್ಯಾಲಿಯಲ್ಲಿ ಭಾಗವಹಿಸಿದ್ದಕ್ಕಾಗಿ ಬಿಜೆಪಿ-ಐಪಿಎಫ್‌ಟಿ ಸರಕಾರವು ತ್ರಿಪುರಾ ರಾಜ್ಯ ಸರಕಾರದ ಉದ್ಯೋಗಿ ಲಿಪಿಕಾ ಪೌಲ್ ಅವರನ್ನು, ಆಕೆ ನಿವೃತ್ತಿ ಯಾಗುವ ನಾಲ್ಕು ದಿನಗಳ ಮೊದಲು ಅಮಾನತುಗೊಳಿಸಿತ್ತು. ಇದನ್ನು ಪ್ರಶ್ನಿಸಿ ಲಿಪಿಕಾ ಹೈಕೋರ್ಟ್ ಮೆಟ್ಟಲೇರಿದ್ದರು. ಇದೀಗ ಲಿಪಿಕಾ ಪರ ತೀರ್ಪು ನೀಡಿರುವ ಕೋರ್ಟ್ “ರಾಜಕೀಯ ರ‍್ಯಾಲಿಯಲ್ಲಿ ಸರ್ಕಾರೀ ನೌಕರರೂ ಭಾಗವಹಿಸಬಹುದು” ಎಂದು ಹೇಳಿದೆ.

ರ‍್ಯಾಲಿಯಲ್ಲಿ ವ್ಯಕ್ತಿಯೊಬ್ಬರ ಉಪಸ್ಥಿತಿಯು ಆತನ ಅಥವಾ ಆಕೆಯ ರಾಜಕೀಯ ನಿಷ್ಠೆಯನ್ನು ದೃಢಪಡಿಸುವುದಿಲ್ಲವೆಂದು ನ್ಯಾಯಾಧೀಶರು ಅಭಿಪ್ರಾಯಿಸಿದ್ದಾರೆ. ರಾಜ್ಯ ಸರಕಾರವು ಅರ್ಜಿದಾರೆಗೆ ಎಲ್ಲಾ ರೀತಿಯ ನಿವೃತ್ತಿ ಆನಂತರದ ಸವಲತ್ತುಗಳನ್ನು ಬಿಡುಗಡೆಗೊಳಿಸುವಂತೆಯೂ ಸೂಚಿಸಿದೆ.

ಮೀನುಗಾರಿಕಾ ನಿರ್ದೇಶನಾಲಯದಲ್ಲಿ ಗುಮಾಸ್ತರಾಗಿ ಕಾರ್ಯ ನಿರ್ವಹಿಸಿದ್ದ ಲಿಪಿಕಾ ಪೌಲ್ ಅವರನ್ನು ಬಿಜೆಪಿ ನೇತೃತ್ವದ ರಾಜ್ಯ ಸರಕಾರವು ಆಕೆಯ ನಿವೃತ್ತಿಗೆ ನಾಲ್ಕು ದಿನಗಳ ಮೊದಲು ಅಮಾನತುಗೊಳಿಸಿತ್ತು. ಹಾಗೇಯೇ ಆಕೆಯ ವಿರುದ್ಧ ತನಿಖೆಗಳನ್ನು ಕೈಗೊಂಡಿತ್ತು. ಅಷ್ಟೇ ಅಲ್ಲದೆ ಕಳೆದ ಎರಡು ತಿಂಗಳುಗಳಿಂದ ಲಿಪಿಕಾ ಪೌಲ್ ಅವರಿಗೆ ಪಿಂಚಣಿ ಆನಂತರದ ಯಾವುದೇ ಸವಲತ್ತುಗಳನ್ನು ಬಿಡುಗಡೆಗೊಳಿಸಿರಲಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top