fbpx
ಸಮಾಚಾರ

ಬಾಹುಬಲಿಯಾಗಿ ಚಂದನವನಕ್ಕೆ ಎಂಟ್ರಿಕೊಟ್ಟ ನಟ ಚರಣ್ ರಾಜ್ ಪುತ್ರ!

ನಟ ಚರಣ್‌ ರಾಜ್‌ ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲಿ ನಟಿಸಿ, ಮೆಚ್ಚುಗೆ ಪಡೆದಿದ್ದಾರೆ. ಈಗ ಅವರ ಪುತ್ರ ಕನ್ನಡ ಚಿತ್ರರಂಗಕ್ಕೆ ಎಂಟ್ರಿಯಾಗಿದ್ದಾರೆ. ಅದು “ಶ್ರೀ ಭರತ ಬಾಹುಬಲಿ’ ಚಿತ್ರದ ಮೂಲಕ. ಹೌದು, ಮಂಜು ಮಾಂಡವ್ಯ ನಿರ್ದೇಶನದ “ಶ್ರೀ ಭರತ ಬಾಹುಬಲಿ’ ಚಿತ್ರದಲ್ಲಿ ಚರಣ್‌ ರಾಜ್‌ ಪುತ್ರ ತೇಜ್‌ ನಟಿಸಿದ್ದಾರೆ. ಹಾಗಂತ ಹೀರೋ ಆಗಿಯಲ್ಲ, ಬದಲಾಗಿ ಇಡೀ ಸಿನಿಮಾದಲ್ಲಿ ಹೈಲೈಟ್‌ ಆಗುವಂತಹ ಪಾತ್ರವೊಂದರಲ್ಲಿ.

ಚಿತ್ರದಲ್ಲಿ ಭರತ-ಬಾಹುಬಲಿಯ ಪೌರಾಣಿಕ ಪಾತ್ರಗಳೂ ಇವೆ. ಅದರಲ್ಲಿ ಪುರಾಣದ ಬಾಹುಬಲಿ ಪಾತ್ರವನ್ನು ತೇಜ್ ಮಾಡಿದ್ದಾರೆ. ತೇಜ್ ಇಲ್ಲಿ ಬಾಹುಬಲಿ ಆಗಿ ಮಲ್ಲಯುದ್ಧ ಮಾಡಿದ್ದಾರೆ. ಈ ಎಪಿಸೋಡ್​ಗೆ 90 ಲಕ್ಷ ರೂ. ವೆಚ್ಚವಾಗಿದೆ. ಸುಮಾರು 90 ಲಕ್ಷ ರೂ ವೆಚ್ಚದಲ್ಲಿ ಯುದ್ಧದ ದೃಶ್ಯವನ್ನು ಚಿತ್ರೀಕರಿಸಿಕೊಂಡಿದ್ದು, ಜಾನ್‌ ಕೋಕೇನ್‌ ಭರತನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ತೇಜ್‌ ನಟಿಸುತ್ತಿರುವುದಕ್ಕೆ ಅವರ ತಂದೆ ಚರಣ್‌ ರಾಜ್‌ ಸಖತ್‌ ಖುಷಿಯಾಗಿದ್ದಾರೆ. ತಮಗೆ ಕನ್ನಡಿಗರಿಂದ ಸಿಕ್ಕ ಬೆಂಬಲ ತಮ್ಮ ಮಗನಿಗೂ ಸಿಗಲಿದೆ ಎಂಬ ಭರವಸೆಯಲ್ಲಿ ಅವರಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top