fbpx
ಸಮಾಚಾರ

“ಶೀಘ್ರದಲ್ಲೇ ಧೋನಿ ಕ್ರಿಕೆಟ್‌ ಜೀವನ ಅಂತ್ಯ” ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ

ಭಾರತಕ್ಕೆ ಟಿ20 ಮತ್ತು ಏಕದಿನ ವಿಶ್ವಕಪ್‌ಗಳನ್ನು ಗೆದ್ದುಕೊಟ್ಟ ಯಶಸ್ವಿ ನಾಯಕ ಎಂಎಸ್‌ ಧೋನಿ ಅವರ ಏಕ ದಿನ ಕ್ರಿಕೆಟ್ ಜೀವನವೂ ‘ಶೀಘ್ರವೇ ಅಂತ್ಯಗೊಳ್ಳಲಿದೆ’ ಎಂದು ಭಾರತ ತಂಡದ ಮುಖ್ಯ ಕೋಚ್‌ ರವಿಶಾಸ್ತ್ರಿ ಬಹಿರಂಗಪಡಿಸಿದ್ದಾರೆ.

ಶೀಘ್ರದಲ್ಲಿ ಧೋನಿ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಹೇಳುವ ಸಾಧ್ಯತೆ ಇದೆ. ಸಂದರ್ಶನ ಒಂದರಲ್ಲಿ ನಾಲ್ಕು ದಿನದ ಟೆಸ್ಟ್‌ ಕ್ರಿಕೆಟ್‌ ಆಯೋಜಿಸುವ ಕುರಿತಾಗಿ ಐಸಿಸಿ ಪ್ರಸ್ತಾವನೆ ಬಗ್ಗೆ ಮಾತನಾಡಿದ ರವಿ ಶಾಸ್ತ್ರಿ, ಈ ಸಂದರ್ಭದಲ್ಲಿ ಧೋನಿ ನಿವೃತ್ತಿ ವಿಚಾರವನ್ನು ಬಾಯ್ಬಿಟ್ಟಿದ್ದಾರೆ.

“ಧೋನಿ ಏಕದಿನ ಕ್ರಿಕೆಟ್ ಗೆ ಶೀಘ್ರದಲ್ಲಿ ಗುಡ್ ಬೈ ಹೇಳಬಹುದು. ಬಳಿಕ, ಟಿ-20 ಕ್ರಿಕೆಟ್ ಆಡಬಲ್ಲರು. ಧೋನಿ ಅವರು ಟೆಸ್ಟ್ ಕ್ರಿಕೆಟ್ ಗೆ ಮೊದಲೇ ವಿದಾಯ ಹೇಳಿದ್ದರು. ಧೋನಿ ಅವರ ಟಿ-20 ಕ್ರಿಕೆಟ್ ಬದುಕು ಇನ್ನು ಹಸಿರಾಗಿದೆ” ಎಂದು ಶಾಸ್ತ್ರಿ ತಿಳಿಸಿದ್ದಾರೆ. ಕೋಚ್ ಅವರ ಈ ಮಾತಿನ ಅರ್ಥ ಆಸೀಸ್ ನಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ನಲ್ಲಿ ಆಡುವ ಸಾಧ್ಯತೆ ಇದೆ ಎಂದು ಕಾಣುತ್ತಿದೆ.

ಧೋನಿ ಅವರು ತಂಡದ ಮೇಲೆ ಒತ್ತಡ ಹೇರಲಾರರು. ಒಂದು ವೇಳೆ ಮಾಹಿ ಅವರು ಆಟ ಆಡಲಾರೆ ಎಂದು ನಿರ್ಧರಿಸಿದ್ದರೆ, ಟೆಸ್ಟ್ ಕ್ರಿಕೆಟ್ ನಂತೆ ಹಿಂದೆ ಸರಿಯುತ್ತಾರೆ ಎಂಬ ನಂಬಿಕೆ ನಮ್ಮದು. ಐಪಿಎಲ್ ನಲ್ಲಿ ಅವರು ಉತ್ತಮ ಪ್ರದರ್ಶನ ನೀಡಿದ್ದೇ ಆದಲ್ಲಿ, ಚುಟುಕು ಕ್ರಿಕೆಟ್ ನಲ್ಲಿ ಭಾರತವನ್ನು ಪ್ರತಿನಿಧಿಸಬಲ್ಲರು” ಎಂದಿದ್ದಾರೆ.

“ಅವರ ವಯಸ್ಸಿಗೆ ಅನುಗುಣವಾಗಿ ಅವರು ಟಿ20 ಕ್ರಿಕೆಟ್‌ನಲ್ಲಿ ಮಾತ್ರವೇ ಮುಂದುವರಿಯಲು ಬಯಸುತ್ತಾರೆ. ಇದರರ್ಥ ಅವರು ಮರಳಿ ಆಟ ಆರಂಭಿಸಬೇಕಿದೆ. ಹೀಗಾಗಿ ಐಪಿಎಲ್‌ನಲ್ಲಿ ಆಡುವ ಮೂಲಕ ಅವರ ದೇಹಸ್ಥಿತಿ ಹೇಗಿದೆ ಎಂಬುದನ್ನು ಪರಿಶೀಲಿಸಲಿದ್ದಾರೆ,” ಎಂದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top