fbpx
ಸಮಾಚಾರ

‘ಛಪಾಕ್ ಸಿನಿಮಾ ವಿರುದ್ಧ ಕೋರ್ಟ್ ಮೊರೆ ಹೋದ ಲಕ್ಷ್ಮಿ ಪರ ಹೋರಾಟ ನಡೆಸಿದ್ದ ವಕೀಲೆ!

ಆಸಿಡ್ ದಾಳಿ ಸಂತ್ರಸ್ತೆ ಲಕ್ಷ್ಮಿ ಅಗರ್ವಾಲ್ ಪರ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದ ವಕೀಲೆ ಅಪರ್ಣಾ ಭಟ್ ದೀಪಿಕಾ ಪಡುಕೋಣೆ ಅಭಿನಯದ ನಾಳೆ ಬಿಡುಗಡೆಯಾಗುತ್ತಿರುವ ಛಪಾಕ್ ಚಿತ್ರತಂಡದ ವಿರುದ್ಧ ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ನಲ್ಲಿ ಕೇಸು ದಾಖಲಿಸಿದ್ದಾರೆ.

ಅರ್ಜಿದಾರರಾದ ಅಪರ್ಣಾ ಭಟ್ ಅವರು, ತಾವು ಹಲವು ವರ್ಷಗಳ ಕಾಲ ಆಸಿಡ್ ದಾಳಿಯ ಸಂತ್ರಸ್ತೆ ಲಕ್ಷ್ಮೀ ಅಗರ್ ವಾಲ್ ಪರ ವಾದ ಮಂಡಿಸಿದ್ದೆ. ಆದರೆ, ನಿರ್ದೇಶಕರು ಚಿತ್ರದಲ್ಲಿ ತಮಗೆ ಯಾವುದೇ ಕ್ರೆಡಿಟ್ ನೀಡಿಲ್ಲ ಎಂದು ಆಕ್ಷೇಪಿಸಿದ್ದಾರೆ. ಇದಕ್ಕೆ ಪರಿಹಾರವಾಗಿ ತಮಗೆ ಯಾವುದೇ ಹಣ ಬೇಕಿಲ್ಲ. ಬದಲಿಗೆ ಚಿತ್ರದಲ್ಲಿ ತಮಗೆ ಹೆಸರು ಉಲ್ಲೇಖಿಸುವಂತೆ ನಿರ್ದೇಶಕರಿಗೆ ಸೂಚನೆ ನೀಡಬೇಕು ಎಂದು ಅವರು ಕೋರಿದ್ದಾರೆ.

ಛಪಾಕ್ ಸಿನಿಮಾದ ಪ್ರೀಮಿಯರ್ ಶೋ ವೀಕ್ಷಿಸಿದ್ದು, ಅದರಲ್ಲಿ ನನ್ನ ಹೆಸರನ್ನೇ ನಮೂದಿಸಿಲ್ಲ. ಲಕ್ಷ್ಮೀ ಅಗರ್ವಾಲ್ ಗೆ ಕಾನೂನು ಹೋರಾಟದಲ್ಲಿನ ನನ್ನ ಶ್ರಮವನ್ನೇ ಸಿನಿಮಾ ತಂಡ ಗುರುತಿಸಿಲ್ಲ. ನನಗೆ ಹಣ ಬೇಕಾಗಿಲ್ಲ, ಕ್ರೆಡಿಟ್ ಬೇಕಾಗಿದೆ ಎಂದು ಅಪರ್ಣಾ ಭಟ್ ಫೇಸ್ ಬುಕ್ ಪೋಸ್ಟ್ ನಲ್ಲಿ ತಿಳಿಸಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top