fbpx
ಸಮಾಚಾರ

“ವಿದೇಶ ಪ್ರವಾಸಕ್ಕೆ ಹೋಗಲ್ಲ” ಸಿಎಂ ಬಿಎಸ್ ಯಡಿಯೂರಪ್ಪ

ಸ್ವಿಟ್ಜರ್ಲೆಂಡ್‌ನ ದಾವೋಸ್‌ನಲ್ಲಿ ಜ. 20ರಿಂದ ನಡೆಯಲಿರುವ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತೆರಳುವುದು ಅನುಮಾನವಾಗಿದೆ. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಗುರುವಾರ ಮಾತನಾಡಿದ ಬಿಎಸ್ ಯಡಿಯೂರಪ್ಪ, ದಾವೋಸ್ ಶೃಂಗಸಭೆಯಲ್ಲಿ ಭಾಗವಹಿಸುವ ಸಾಧ್ಯತೆ ಕಡಿಮೆ. ನಿಮ್ಮ ಜತೆಯೇ ಇರೋಣ ಎಂದುಕೊಂಡಿದ್ದೇನೆ ಎಂದು ಹೇಳಿದ್ದಾರೆ.

ದಾವೋಸ್‌ನಲ್ಲಿ ಇದೀಗ ನಾಲ್ಕು ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶವಿದ್ದು, ಈ ಚಳಿಗೆ ಒಗ್ಗಿಕೊಳ್ಳಲು ಆಗುವುದಿಲ್ಲ ಸ್ವಿಜರ್ಲೆಂಡ್‌ನಲ್ಲಿ ಅತ್ಯಧಿಕ ಶೀತದ ವಾತಾವರಣ ಇರುವುದರಿಂದ ಆರೋಗ್ಯದ ದೃಷ್ಟಿಯಿಂದಲೂ ಪ್ರವಾಸ ಸರಿಯಲ್ಲ ಎಂಬ ಕಾರಣಕ್ಕಾಗಿ ಪ್ರವಾಸ ರದ್ದುಪಡಿಸಲು ಯಡಿಯೂರಪ್ಪ ಬಯಸಿದ್ದಾರೆ ಎಂದೂ ಮೂಲಗಳು ತಿಳಿಸಿವೆ.

ಸಿಎಂ ವಿದೇಶ ಪ್ರವಾಸ ರದ್ದತಿ ಹಿಂದೆ ‘ರಾಜಕಾರಣ’ವೂ ಇದೆ ಎನ್ನಲಾಗುತ್ತಿದೆ. ಜನವರಿ 17 ಇಲ್ಲವೇ 18ರಂದು ಸಂಪುಟ ವಿಸ್ತರಣೆ ನಡೆಯಲಿದ್ದು, ಆ ಬಳಿಕ ಸ್ಥಾನ ವಂಚಿತರು ಅಸಮಾಧಾನಗೊಳ್ಳುವ ಭೀತಿ ಇದೆ. ಒಂದೊಮ್ಮೆ ಈ ಹಂತದಲ್ಲಿ ತಾವು ವಿದೇಶ ಪ್ರವಾಸಕ್ಕೆ ಹೋದರೆ ಪರಿಸ್ಥಿತಿ ಬಿಗಡಾಯಿಸುವ ಸಾಧ್ಯತೆ ಇದೆ ಎಂಬ ಕಾರಣಕ್ಕಾಗಿಯೂ ಬಿಎಸ್‌ವೈ ವಿದೇಶ ಪ್ರವಾಸ ರದ್ದು ಮಾಡಿದರು ಎಂಬ ಮಾತು ಕೇಳಿಬರುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top