fbpx
ಸಮಾಚಾರ

ಗೌರವ ಡಾಕ್ಟರೇಟ್ ಪಡೆದ ಕನ್ನಡ ಬಿಗ್ ಬಾಸ್ ಸೀಸನ್ 6ರ ಸ್ಪರ್ಧಿ

ಬಿಗ್‌ ಬಾಸ್‌ ಸ್ಫರ್ಧಿಯಾಗಿದ್ದ ಹಾಗೂ ಚಂದನವನದಲ್ಲಿ ಜಿಮ್ ರವಿ ಎಂದೇ ಖ್ಯಾತವಾಗಿರುವ ಎ.ವಿ ರವಿ ಅವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ದೊರೆತಿದೆ. international global peace university ರವಿ ಅವರಿಗೆ ಡಾಕ್ಟರೇಟ್ ನೀಡಿ ಗೌರವಿಸಿದೆ. ಬಾಡಿ ಬಿಲ್ಡಿಂಗ್ ಕ್ಷೇತ್ರದಲ್ಲಿ ರವಿ ಅವರು ಮಾಡಿರುವ ಸಾಧನೆಗಾಗಿ ಡಾಕ್ಟರೇಟ್ ನೀಡಲಾಗಿದೆ ಎನ್ನಲಾಗಿದೆ.

ಜಿಮ್ ರವಿ ಮೂಲತಃ ಕೋಲಾರದವರು. ಅಂತಾರಾಷ್ಟ್ರೀಯ ದೇಹದಾರ್ಢ್ಯ ಪಟು. ಪ್ರೋಟೀನ್ ಇಂಜೆಕ್ಷನ್ ಗಳನ್ನು ಪಡೆಯದೆ, ಮನೆ ಊಟ ಮಾಡಿ ನ್ಯಾಚುರಲ್ ಆಗಿ ಬಾಡಿ ಬಿಲ್ಡ್ ಮಾಡಿ ಖ್ಯಾತಿ ಗಳಿಸಿರುವವರು. 38 ವರ್ಷಗಳಿಂದ ಜಿಮ್, ವರ್ಕೌಟ್ ಮಾಡುತ್ತಿರುವ ಎ.ವಿ.ರವಿ ಅವರಿಗೆ ಸದ್ಯ 53 ವರ್ಷ ವಯಸ್ಸು.

ಇನ್ನು ಸುಮಾರು 30 ವರ್ಷಗಳ ಕಾಲ ಸಿನಿಮಾ ಮತ್ತು ಬಾಡಿ ಬಿಲ್ಟರ್ ಆಗಿರುವ ಎ.ವಿ ರವಿಯವರು ಈಗಾಗಲೇ 100ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿರುವ ಇವರು ಸದ್ಯಕ್ಕೆ ‘ತಾಜ್ ಮಹಲ್ 2’, ‘ನಾನು ಮತ್ತು ಗುಂಡ’ ಹಾಗೂ ‘ಮಾಸ್ಟರ್’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top