fbpx
ಸಮಾಚಾರ

‘ಹುಲಿ ಚರ್ಮ’ ವಿವಾದ: ಅವದೂತ ವಿನಯ್ ಗುರೂಜಿ ಹೇಳಿದ್ದೇನು?

ಖ್ಯಾತ ಸ್ವಯಂಘೋಷಿತ ದೇವಮಾನವ ವಿನಯ್ ಗುರೂಜಿಗೆ ಇದೀಗ ಕಾನೂನಿನ ಸಂಕಷ್ಟವೊಂದು ಎದುರಾಗುವ ಸಾಧ್ಯತೆ ಇದೆ. ಇದಕ್ಕೆ ಕಾರಣ ಹುಲಿಚರ್ಮ. ಹೌದು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಲಾಗಿದ್ದ ಫೋಟೋವೊಂದು ಸ್ವಯಂಘೋಷಿತ ದೇವಮಾನವ ವಿನಯ್ ಗುರೂಜಿ ಅವರಿಗೆ ಸಂಕಷ್ಟ ತಂದೊಡ್ಡಿದೆ.

ವಿನಯ್ ಗುರೂಜಿ ಅವರು ಇತ್ತೀಚೆಗೆ ಕನ್ನಡ ದಿನಪತ್ರಿಕೆ ಸಂಪಾದಕರೊಂದಿಗೆ ಸಂಭಾಷಣೆ ನಡೆಸಿದ್ದ ಫೋಟೋ ವೈರಲ್ ಆಗಿತ್ತು. ಈ ಫೋಟೋದಲ್ಲಿ ಅವರು, ಹುಲಿಯ ಚರ್ಮದ ಮೇಲೆ ಕುಳಿತಿದ್ದರು. ಇದರ ಬೆನ್ನಲ್ಲೇ ವಿನಯ್ ಗುರೂಜಿ ಆಶ್ರಮದಲ್ಲಿ ಅರಣ್ಯಾಧಿಕಾರಿಗಳು ಶೋಧ ನಡೆಸಿದ್ದಾರೆ. ಈ ವೇಳೆ ಅವರಿಗೆ ಹುಲಿ ಚರ್ಮ ದೊರೆತಿದ್ದು, ಈ ಕುರಿತಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಗುರೂಜಿ ಸ್ಪಷ್ಟನೆ:
ಇನ್ನು ಹುಲಿ ಚರ್ಮದ ಫೋಟೋ ವೈರಲ್ ಆದ ಬೆನ್ನಲ್ಲೇ ಈ ಕುರಿತಂತೆ ಮಾಹಿತಿ ನೀಡಿರುವ ವಿನಯ್ ಗುರೂಜಿ, ಹುಲಿ ಚರ್ಮ ಅಕ್ರಮದಲ್ಲ. ಆಶ್ರಮಕ್ಕೆ ಭಕ್ತರು ನೀಡಿದ್ದು. ಅದಕ್ಕೆ ಸೂಕ್ತ ಮಾಲೀಕತ್ವ ಪ್ರಮಾಣ ಪತ್ರಕೂಡ ಇದೆ. ಶೀಘ್ರದಲ್ಲೇ ಅದನ್ನು ಅರಣ್ಯಾಧಿಕಾರಿಗಳಿಗೆ ನೀಡುತ್ತೇವೆ ಎಂದು ಹೇಳಿದ್ದಾರೆ. ಈ ಉತ್ತರಕ್ಕೆ ಸಮಾಧಾನಗೊಳ್ಳದ ಅರಣ್ಯ ಇಲಾಖೆ, ಮೊದಲು ಅವರು ಪ್ರಮಾಣ ಪತ್ರ ನೀಡಲಿ. ಆ ಬಳಿಕ ಅದರ ಸತ್ಯಾಸತ್ಯತೆ ತಿಳಿದು ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಅಂದಹಾಗೆ 1972 ರ ವನ್ಯಜೀವಿ ಸಂರಕ್ಷಣಾ ಕಾಯಿದೆ, ವನ್ಯಪ್ರಾಣಿಗಳು ಅಂಗಾಂಗಳನ್ನು ಸಂಗ್ರಹಿಸುವುದು ಕಾನೂನು ರೀತಿಯ ಅಪರಾಧವಾಗಿರುತ್ತದೆ. ಒಂದು ವೇಳೆ, ಇಂತಹ ಸಂಗ್ರಹ ಕಂಡು ಬಂದಲ್ಲಿ ಅಂತವರ ವಿರುದ್ಧ ಕೇಸ್ ದಾಖಲಾಗುತ್ತದೆ. ಅಷ್ಟೆಅಲ್ಲದೆ 3-7 ವರ್ಷಗಳ ಕಾಲ ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ. ಜೊತೆಯಲ್ಲಿ 10 ಸಾವಿರ ರೂಪಾಯಿಯವರೆಗೂ ದಂಡ ವಿಧಿಸಬಹುದಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top