fbpx
ಸಮಾಚಾರ

JNU ಪ್ರತಿಭಟನೆಗೆ ಬೆಂಬಲ ಕೊಡಲು ಕಾರಣ ಏನೆಂದು ಬಿಚ್ಚಿಟ್ಟ ದೀಪಿಕಾ ಪಡುಕೋಣೆ

ದೆಹಲಿ ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ನಡೆದ ಮಾರಣಾಂತಿಕ ಹಲ್ಲೆ ದೇಶದಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗುತ್ತಿದೆ. ಘಟನೆಯನ್ನು ವಿರೋಧಿಸಿ ದೇಶದ ವಿವಿಧ ಭಾಗಗಳಲ್ಲಿ ಪ್ರತಿಭಟನೆ ನಡೆಯುತ್ತಿದ್ದು ಇದೀಗ ಖ್ಯಾತ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಹಲ್ಲೆಗೊಳಗಾದ ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತಿರುವುದು ಹೊಸತೊಂದು ಚರ್ಚೆಯನ್ನು ಹುಟ್ಟುಹಾಕಿದೆ.

ದೆಹಲಿಯ ಜೆಎನ್‌ಯು ವಿವಿ ಆವರಣದಲ್ಲಿ ನಡೆದಿದ್ದ ಪ್ರತಿಭಟನೆಯಲ್ಲಿ ಮಂಗಳವಾರ ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದರು. ಕ್ಯಾಂಪಸ್‌ನಲ್ಲಿ ದುಷ್ಕರ್ಮಿಗಳಿಂದ ಹಲ್ಲೆಗೊಳಗಾದ ವಿದ್ಯಾರ್ಥಿನಿ ನಾಯಕಿ ಆಯಿಷಿ ಘೋಷ್‌ ಅವರನ್ನು ಭೇಟಿ ಮಾಡಿ ಕೈ ಮುಗಿದು ನಮಸ್ಕರಿಸಿದ ಫೋಟೋ ವೈರಲ್ ಆಗುತ್ತಿದೆ. ದೀಪಿಕಾ ನಡೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧ ಚರ್ಚೆಗಳು ಚಾಲ್ತಿಯಲ್ಲಿವೆ.

ಈ ನಡುವೆ ತಾವೇಕೆ ಜೆಎನ್‌ಯು ವಿದ್ಯಾರ್ಥಿಗಳನ್ನು ಬೆಂಬಲಿಸಿ ಅವರ ಪ್ರತಿಭಟನೆಗೆ ಹೋದೆ ಎಂಬ ಬಗ್ಗೆ ಸ್ವತಃ ದೀಪಿಕಾ ಪಡುಕೋಣೆ ಕಾರಣ ಬಿಚ್ಚಿಟ್ಟಿದ್ದಾರೆ. ಖಾಸಗಿ ವಾಹಿನಿಯೊಂದರೊಂದಿಗೆ ಮಾತನಾಡಿದ ದೀಪಿಕಾ ಪಡುಕೋಣೆ, ‘ನಾನು ಏನು ಹೇಳಬೇಕೆಂದುಕೊಂಡಿದ್ದೇನೆಯೋ ಅದನ್ನು ಎರಡು ವರ್ಷದ ಹಿಂದೆಯೇ ಹೇಳಿದ್ದೇನೆ, ಪದ್ಮಾವತ್ ಬಿಡುಗಡೆ ಸಂದರ್ಭದಲ್ಲಿಯೇ ನಾನು ಮಾತನಾಡಿದ್ದೇನೆ’ ಎಂದಿದ್ದಾರೆ.

‘ಇಂದು ಏನನ್ನು ನಾನು ನೋಡುತ್ತಿದ್ದೇನೆಯೋ (ಹಿಂಸಾಚಾರ) ಅದು ನನ್ನನ್ನು ನೋವಿಗೆ ಈಡು ಮಾಡಿದೆ. ಈ ಹಿಂಸಾಚಾರ ಸಾಮಾನ್ಯ ಆಗದೇ ಇರಲಿ ಎಂದು ನಾನು ಪ್ರತಿಭಟಿಸಿದೆ’ ಎಂದು ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top