fbpx
ಸಮಾಚಾರ

ಇವರೇ ನೋಡಿ ಚೇತನ್ ಮದುವೆ ಆಗಲಿರುವ ಅಸ್ಸಾಂ ಮೂಲದ ಹುಡುಗಿ!

2007 ರಲ್ಲಿ ‘ಆ ದಿನಗಳು’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಭರವಸೆ ಮೂಡಿಸಿದ ನಟ ಚೇತನ್ ಕುಮಾರ್. ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗುತ್ತಿದ್ದಾರೆ. ಎರಡು ವರ್ಷಗಳಿಂದ ಪ್ರೀತಿಸುತ್ತಿರುವ ಹುಡುಗಿಯನ್ನು ಶಾಸ್ತ್ರೋಕ್ತವಾಗಿ ಮದುವೆಯಾಗಲು ಚೇತನ್ ಅವರು ಸಿದ್ಧತೆ ನಡೆಸುತ್ತಿದ್ದಾರೆ. ಅಸ್ಸಾಂ ಮೂಲದ ಯುವತಿಗೆ ಫ್ಲಾಟ್ ಆಗಿರುವ ಚೇತನ್ ಮುಂದಿನ ವರ್ಷ ಫೆಬ್ರವರಿ 2 ರಂದು ಸರಳವಾಗಿ, ಅನಾಥಾಶ್ರಮದಲ್ಲಿ ಮದುವೆಯಾಗಲು ರೆಡಿಯಾಗಿದ್ದಾರೆ.

ಕಲ್ಲರ್ಫುಲ್! Colourful!

ಈ ಸೃಷ್ಟಿ ಪ್ರೀತಿಯಿಂದ ಆವರಿಸಲ್ಪಟ್ಟ ಸುಂದರ ಹೂ ತೋಟ.

Love: it’s what makes the earth go round.

=)#love #lovestory #joy #meaning #equality pic.twitter.com/wRtWEXAMG4— Chetan Kumar (@ChetanAhimsa) January 9, 2020

ಇದೀಗ ಚೇತನ್ ತಮ್ಮ ಭಾವಿ ಪತ್ನಿಯನ್ನ ಪರಿಚಯಿಸಿದ್ದಾರೆ. ನಟ ಚೇತನ್ ಮದುವೆ ಆಗುತ್ತಿರುವ ಹುಡುಗಿ ಹೆಸರು ಮೇಘ ಎನ್ನಲಾಗಿದೆ. ಮೇಘ ಮೂಲತಃ ಅಸ್ಸಾಂ ನವರು. ಎರಡು ವರ್ಷಗಳಿಂದ ಚೇತನ್ ಮತ್ತು ಮೇಘ ಪ್ರೀತಿಸುತ್ತಿದ್ದಾರೆ. ಇಬ್ಬರ ಪ್ರೀತಿಗೆ ಮುಂದಿನ ತಿಂಗಳು (ಫೆಬ್ರವರಿ) ಅಧಿಕೃತ ಮುದ್ರೆ ಬೀಳಲಿದೆ.

ಇನ್ನು ತನ್ನ ಭಾವಿ ಪತ್ನಿ ಮೇಘ ಜೊತೆಗೆ ಫೋಟೋ ಕ್ಲಿಕ್ಕಿಸಿಕೊಂಡಿರುವ ಚೇತನ್ ಅವರು ಅದನ್ನ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ”ಕಲರ್ ಫುಲ್.! ಈ ಸೃಷ್ಟಿ ಪ್ರೀತಿಯಿಂದ ಆವರಿಸಲ್ಪಟ್ಟ ಸುಂದರ ಹೂ ತೋಟ” ಎಂದು ಚೇತನ್ ಬರೆದುಕೊಂಡಿದ್ದಾರೆ.

” ನಾವು ಮದುವೆಯಾದರೆ ತುಂಬಾ ಸರಳವಾಗಿ ಇನ್ನೊಬ್ಬರಿಗೆ ಮಾದರಿಯಾಗೋ ರೀತಿ ಮದುವೆ ಆಗ್ತೀವಿ. ಅದ್ಧೂರಿಯಾಗಿ ಆಡಂಬರದಿಂದ ಮದುವೆ ಮಾಡಿಕೊಳ್ಳುವುದಿಲ್ಲ, ಬದಲಾಗಿ ಅನ್ಯಾಶ್ರಮದಲ್ಲಿ ಮಕ್ಕಳ ಎದುರು ಮದುವೆ ಮಾಡಿಕೊಳ್ಳುತ್ತೇವೆ” ಎಂದು ಸ್ವತಃ ಚೇತನ್ ಅವರೇ ಇತ್ತೀಚಿಗೆ ಹೇಳಿಕೊಂಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top