fbpx
ಸಮಾಚಾರ

ಯಶ್ ಕಟೌಟ್ ನಿಲ್ಲಿಸುವಾಗ ನಡೆಯಿತು ಅವಘಡ; ವಿಶ್ವದಾಖಲೆ ಕನಸು ಭಗ್ನ

ರಾಕಿಂಗ್​ ಸ್ಟಾರ್​ ಯಶ್​ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳು ನಗರದ ನಾಯಂಡಹಳ್ಳಿಯ ನಂದಿಗ್ರೌಡ್ಸ್​​ನಲ್ಲಿ 216 ಅಡಿ ಎತ್ತರದ ಯಶ್​ ಕಟೌಟ್ ನಿಲ್ಲಿಸಲು ಸಿದ್ಧತೆ ನಡೆಸಿದ್ದರು. ಆದರೆ ಈ ಪ್ರಯತ್ನ ವಿಫಲವಾಗಿದೆ. ಯಶ್ ಕಟೌಟ್​​ಗೆ ಮುಖ ಜೋಡಿಸಲು ಅಭಿಮಾನಿಗಳು ಪರದಾಡುತ್ತಿದ್ದಾರೆ.

ನಿನ್ನೆ ರಾತ್ರಿ ಕಟೌಟ್ ಕಟ್ಟುವಾಗ ಮುಖದ ಭಾಗ ಜೋರು ಗಾಳಿಯಿಂದ ಮುರಿದು ಬಿದ್ದಿದೆ. ಆದರೆ ಅದೃಷ್ಟವಶಾತ್ ಯಾರಿಗೂ ಗಾಯವಾಗಿಲ್ಲ. ಆದರೆ ಈ ಮೂಲಕ ಯಶ್ ಅವರ 216 ಅಡಿ ಕಟೌಟ್ ಅರ್ಧಕ್ಕೆ ನಿಂತಿದೆ. ಅಲ್ಲದೆ, ಅಭಿಮಾನಿಗಳ ಕನಸು ಭಗ್ನವಾಗಿದೆ.

ಇನ್ನು, ಕಟೌಟ್ ಮುಖ ಜೋಡಿಸಲು ಪೊಲೀಸರ ಕೂಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜಾಗದ ಕೊರತೆ ಇರುವುದರಿಂದ ಕಟೌಟ್ ನಿಲ್ಲಿಸುವಾಗ ಏನಾದರೂ ಹೆಚ್ಚು ಕಡಿಮೆಯಾದ್ರೆ ಯಾರು ಹೊಣೆ ಎಂದು ಪೊಲೀಸರು ಪ್ರಶ್ನೆ ಮಾಡಿದ್ದಾರೆ. ಹೀಗಾಗಿ ಈಗಾಗ್ಲೇ ನಿಲ್ಲಿಸಿರುವ ಕಟೌಟನ್ನು ಪೊಲೀಸರು ಕೆಳಗಿಳಿಸುವಂತೆ ಹೇಳಿದ್ದಾರೆ ಎನ್ನಲಾಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top