fbpx
ಸಮಾಚಾರ

ಬರ್ತಡೇಯಲ್ಲಿ ದಾಖಲೆ ಬರೆದ ಯಶ್ ಫ್ಯಾನ್ಸ್: ವರ್ಲ್ಡ್ ರೆಕಾರ್ಡ್ಸ್ ಇಂಡಿಯಾದಿಂದ ಸಿಕ್ತು ಸರ್ಟಿಫಿಕೇಟ್

ರಾಕಿಂಗ್ ಸ್ಟಾರ್ ಯಶ್ ಇಂದು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಯಶ್ ಅವರ 34ನೇ ಹುಟ್ಟುಹಬ್ಬ ವಿಶ್ವ ದಾಖಲೆ ಪಟ್ಟಿಗೆ ಸೇರಿದೆ. ಸಾವಿರಾರು ಅಭಿಮಾನಿಗಳ ಮುಂದೆ ಯಶ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಈ ಸಮಯದಲ್ಲಿ ನಟಿ ರಾಧಿಕಾ ಪಂಡಿತ್ ಕೂಡ ಸಾಥ್ ನೀಡಿದ್ದಾರೆ.

ಬೆಂಗಳೂರಿನ ನಾಯಂಡಹಳ್ಳಿ ಸಿಗ್ನಲ್ ಬಳಿ ನಂದಿ ಲಿಂಕ್ ಗ್ರೌಂಡ್‍ನಲ್ಲಿ ನಡೆದ ಯಶ್ ಬರ್ತ್ ಡೇಗೆ 5000 ಸಾವಿರ ಕೆ.ಜಿ ಕೇಕ್ ತಯಾರು ಮಾಡಲಾಗಿತ್ತು. ಪತ್ನಿ ರಾಧಿಕಾ ಪಂಡಿತ್ ಜೊತೆಗೆ ಆಗಮಿಸಿದ ನಟ ಯಶ್ 5000 ಕೆ.ಜಿ ಕೇಕ್ ಕಟ್ ಮಾಡಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

ಅಲಹಬಾದ್‍ನಿಂದ ಆಗಮಿಸಿದ ವರ್ಲ್ಡ್ ರೆಕಾರ್ಡ್ ಕಮಿಟಿ ಅಧ್ಯಕ್ಷ ಪವನ್ ಸಾಲಂಗಿ ಐದು ಸಾವಿರ ಕೆಜಿ ಕೇಕ್ ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ಮಾತಾಡಿದ ಅಧ್ಯಕ್ಷ ಪವನ್ ಸಾಲಂಗಿ, ಇದು ಸೌತ್ ಇಂಡಿಯಾದಲ್ಲೇ ಮೊದಲು ಮತ್ತು ಇಲ್ಲಿಯವರೆಗೆ ಯಾವುದೇ ಸೆಲೆಬ್ರಿಟಿ ಐದು ಸಾವಿರ ಕೆಜಿ ಕೇಕ್ ಕಟ್ ಮಾಡಿ ಬರ್ತ್ ಡೇ ಆಚರಿಸಿಕೊಂಡಿಲ್ಲ. ಹಾಗಾಗಿ ಇದು ವಿಶ್ವ ದಾಖಲೆ ಪಟ್ಟಿಗೆ ಸೇರಲಿದೆ ಎಂದರು.

ಇನ್ನು ಹುಟ್ಟುಹಬ್ಬದ ಸ್ಥಳದಲ್ಲಿ ‘ಕೆಜಿಎಫ್ 2’ ಸಿನಿಮಾದ ಯಶ್ ಕಟ್ ಔಟ್ ಹಾಕಲಾಗಿದೆ. 216 ಅಡಿ ಎತ್ತರದ ಕಟ್ ಔಟ್ ಇದಾಗಿದೆ. ವಿಶ್ವದ ಯಾವ ನಟನಿಗೆ ಇಷ್ಟೊಂದು ಎತ್ತರದ ಕಟ್ ಔಟ್ ಹಾಕಿರಲಿಲ್ಲ. ಹೀಗಾಗಿ ಇದು ಕೂಡ ವಿಶ್ವ ದಾಖಲೆಯಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top