fbpx
ಸಮಾಚಾರ

“ಭಾರತದಲ್ಲಿ ವಿದ್ಯಾರ್ಥಿಗಳಿಗಿಂತ ಗೋವುಗಳೇ ಹೆಚ್ಚು ಸುರಕ್ಷಿತ” ಅಕ್ಷಯ್ ಕುಮಾರ್ ಪತ್ನಿ

JNU ಹಿಂಸಾಚಾರವನ್ನು ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಪತ್ನಿ ನಟಿ ಟ್ವಿಂಕಲ್ ಖನ್ನಾ ಈ ಘಟನೆಯನ್ನು ಖಂಡಿಸಿದ್ದಾರೆ. ಭಾರತದಲ್ಲಿ ವಿದ್ಯಾರ್ಥಿಗಳಿಗಿಂತ ಹೆಚ್ಚಾಗಿ ಹಸುಗಳಿಗೆ ರಕ್ಷಣೆ ಇದೆ. ಜನರ ಪ್ರತಿಭಟನೆಯನ್ನು ಹತ್ತಿಕ್ಕಲು ಸಾಧ್ಯವೇ ಇಲ್ಲ. ಇನ್ನಷ್ಟು ಪ್ರತಿಭಟನೆಗಳಾಗುತ್ತವೆ. ಜನ ರಸ್ತೆಗಿಳಿಯುತ್ತಾರೆ. ಈ ಹೆಡ್‌ಲೈನ್ ಅದನ್ನೇ ಹೇಳುತ್ತೆ ಎಂದು ಪತ್ರಿಕೆಯೊಂದರ ಸುದ್ದಿಯನ್ನು ಶೇರ್ ಮಾಡಿಕೊಂಡಿದ್ದಾರೆ.

India,where cows seem to receive more protection than students, is also a country that now refuses to be cowed down. You can’t oppress people with violence-there will be more protests,more strikes,more people on the street. This headline says it all. pic.twitter.com/yIiTYUjxKR— Twinkle Khanna (@mrsfunnybones) January 6, 2020

“ಭಾರತ, ಇಲ್ಲಿ ವಿದ್ಯಾರ್ಥಿಗಳಿಗಿಂತ ಗೋವುಗಳಿಗೆ ಹೆಚ್ಚು ರಕ್ಷಣೆ ಸಿಗುತ್ತದೆ. ಆದರೆ ಈ ದೇಶದಲ್ಲಿ ಭಯ ಬೀಳುತ್ತಾ ಯಾರೂ ಬದಕಬೇಕು ಎಂದುಕೊಳ್ಳುತ್ತಿಲ್ಲ. ನೀವು ಹಿಂಸೆ ಮೂಲಕ ಜನರನ್ನು ತುಳಿಯಲು ಸಾಧ್ಯವಿಲ್ಲ. ಆ ರೀತಿ ಮಾಡಿದರೆ ಹೆಚ್ಚು ಪ್ರತಿಭಟನೆ, ಮುಷ್ಕರಗಳು ನಡೆಯುತ್ತವೆ. ಜನ ರಸ್ತೆಗೆ ಇಳಿಯುತ್ತಾರೆ. ಈ ಶಿರೋನಾಮೆ ಇದೆಲ್ಲವನ್ನೂ ಹೇಳುತ್ತದೆ” ಎಂದು ಟ್ವಿಂಕಲ್ ಟ್ವೀಟ್ ಮಾಡಿದ್ದಾರೆ.

ಏನಿದು ಘಟನೆ?
ಭಾನುವಾರ ಸಂಜೆ 6.30ರ ಸುಮಾರಿಗೆ ಮುಖ ಮುಚ್ಚಿಕೊಂಡಿದ್ದ ಅಂದಾಜು 50 ಜನರ ಗುಂಪು ವಿವಿ ಆವರಣಕ್ಕೆ ನುಗ್ಗಿತು. ಈ ಗುಂಪು ಹಾಸ್ಟೆಲ್​ಗೆ ನುಗ್ಗಿ ಜೆಎನ್ ಯು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಐಷೆ ಘೋಷ್ ಹಾಗೂ ಉಪನ್ಯಾಸಕರು ಸೇರಿದಂತೆ ಹಲವು ವಿದ್ಯಾರ್ಥಿಗಳ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top