fbpx
ಸಮಾಚಾರ

ಕಿಚ್ಚನಿಗೆ ದುಬಾರಿ ಉಡುಗೊರೆ ನೀಡಲು ಬೆಂಗಳೂರಿಗೆ ಬಂಡ ಸಲ್ಮಾನ್ ಖಾನ್!

ನಟ ‘ಕಿಚ್ಚ’ ಸುದೀಪ್ ಹಾಗೂ ಬಾಲಿವುಡ್‌ ‘ಸೂಪರ್ ಸ್ಟಾರ್‌’ ಸಲ್ಮಾನ್‌ ಖಾನ್‌ ನಡುವೆ ಉತ್ತಮ ಒಡನಾಟವಿದೆ. ಅದು ‘ದಬಾಂಗ್ 3’ ಚಿತ್ರದಲ್ಲಿ ನಟಿಸಿದ ಮೇಲಂತೂ ಇಬ್ಬರ ನಡುವೆ ಒಡನಾಟ ಇನ್ನಷ್ಟು ಗಟ್ಟಿಗೊಂಡಿದೆ. ‘ದಬಾಂಗ್ 3’ ಚಿತ್ರದಲ್ಲಿ ಹೀರೋ ವಿಲನ್ ಆಗಿ ಕಾಣಿಸಿಕೊಂಡಿದ್ದರೂ, ನಿಜಜೀವನದಲ್ಲಿ ಇಬ್ಬರು ಉತ್ತಮ ಗೆಳೆಯರು. ಈ ಗೆಳೆತನದ ಸಾಕ್ಷಿಯಾಗಿ ಸಲ್ಮಾನ್‌ ಅನೇಕ ಉಡುಗೊರೆಗಳನ್ನು ಸುದೀಪ್‌ಗೆ ನೀಡಿದ್ದಾರೆ.

Good always happens when u do good.@beingsalmankhan made me believe this line further with this surprise landing at home along with him.
BMW M5 🤗.
Thank u for the luv u have showered on me n my family sir.
It was an honour to have worked with u n to have had u vist us.🤗🤗🥂 pic.twitter.com/tavTR07M29— Kichcha Sudeepa (@KicchaSudeep) January 7, 2020

ಇತ್ತೀಚಿಗೆ ಸಲ್ಮಾನ್ ಖಾನ್ ಬೆಲೆಬಾಳುವ ಉಡುಗೊರೆಯೊಂದಿಗೆ ಸುದೀಪ್ ಮನೆಗೆ ಬಂದಿದ್ದರು. ಸಲ್ಲು ಜೊತೆ ಕಿಚ್ಚನ ಮನೆಗೆ ಬಂದ ಆ ಉಡುಗೊರೆ BMW M5 ಕಾರು. ದುಬಾರಿ ಉಡುಗೊರೆ ಜೊತೆಗೆ ಮನೆಗೆ ಬಂದ ಸಲ್ಮಾನ್ ನೋಡಿ ಸುದೀಪ್ ಮೂಕವಿಸ್ಮಿತರಾಗಿದ್ದಾರೆ. ಇದರಿಂದ ಖುಷಿಯಾಗಿರುವ ಕಿಚ್ಚ ತಮ್ಮ ಸಂತೋಷವನ್ನು ಟ್ವಿಟ್ಟರ್ ಮೂಲಕ ಹಂಚಿಕೊಂಡಿದ್ದಾರೆ.

“ನಾವು ಒಳ್ಳೆಯದನ್ನು ಮಾಡಿದರೆ ನಮಗೂ ಯಾವಾಗಲೂ ಒಳ್ಳೆಯದೇ ಆಗುತ್ತದೆ ಎಂಬ ಸಾಲನ್ನು ನಾನು ಇನ್ನಷ್ಟು ನಂಬುವಂತೆ ಮಾಡಿದ್ದು ನಟ ಸಲ್ಮಾನ್ ಖಾನ್! ಅವರು ಹೊಚ್ಚ ಹೊಸ ಬಿಎಂಡಬ್ಲ್ಯೂ ಎಂ5 ಕಾರಿನೊಡನೆ ನನ್ನ ಮನೆಗೆ ಆಗಮಿಸಿದಾಗ ನನಗೆ ನಿಜಕ್ಕೂ ಅಚ್ಚರಿಯಾಗಿತ್ತು.

“ನನ್ನ ಕುಟುಂಬದ ಮೇಲೆ ಸಲ್ಮಾನ್ ಖಾನ್ ಈ ಪರಿ ಪ್ರೀತಿ ತೋರಿಸುತ್ತಿರುವುದಕ್ಕೆ ಧನ್ಯವಾದಗಳು! ನಿಮ್ಮ ಜತೆಗೆ ಕೆಲಸ ಮಾಡಿರುವುದು ನನಗೊಂದು ಗೌರವ ಹಾಗೂ ನೀವು ನನ್ನ ಮನೆಗೆ ಭೇಟಿ ನೀಡಿರುವುದು ನನ್ನ ಪಾಲಿಗೆ ದೊಡ್ಡ ಉಡುಗೊರೆ” ಎಂದು ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top