fbpx
ಸಮಾಚಾರ

ಯಶ್ ಬರ್ತಡೇಗಾಗಿ ತಲೆ ಎತ್ತುತ್ತಿದೆ ವಿಶ್ವದ ಅತಿ ಎತ್ತರದ ಕಟೌಟ್! ರೆಡಿಯಾಗ್ತಿದೆ 5,000 ಕೆಜಿ ಕೇಕ್!

ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬಕ್ಕೆ ಇನ್ನೊಂದು ದಿನ ಬಾಕಿ ಇದ್ದು, ಈಗಾಗಲೇ ಅಭಿಮಾನಿಗಳು ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಜನವರಿ 8ರಂದು ಯಶ್ ಅವರ ಹುಟ್ಟುಹಬ್ಬಕ್ಕೆ ನಂದಿ ಲಿಂಕ್ ಗ್ರೌಂಡ್ ನಲ್ಲಿ ಅದ್ಧೂರಿ ವೇದಿಕೆ ಸಜ್ಜಾಗುತ್ತಿದೆ. ಅಲ್ಲದೆ ಹುಟ್ಟಹಬ್ಬದಂದು ತಮ್ಮ ನೆಚ್ಚಿನ ನಟನ ಹೆಸರಿನಲ್ಲಿ ಹೊಸ ದಾಖಲೆಯನ್ನು ಸೃಷ್ಟಿ ಮಾಡಲು ಅಭಿಮಾನಿಗಳು ತಯಾರಿ ನಡೆಸುತ್ತಿದ್ದಾರೆ.

ವಿಶೇಷ ಅಂದ್ರೆ ಯಶ್ ಹುಟ್ಟುಹಬ್ಬದ ಪ್ರಯುಕ್ತ ವಿಶ್ವದ ಅತಿ ಎತ್ತರದ 216ಅಡಿ ಕಟೌಟ್ ತಯಾರಾಗ್ತಿದೆ. ನಾಯಂಡಹಳ್ಳಿಯ ನಂದಿ ಲಿಂಕ್ಸ್ ಗ್ರೌಂಡ್​ನಲ್ಲಿ ಕಟೌಟ್ ನಿರ್ಮಿಸಲಾಗ್ತಿದೆ. ಇದು ವಿಶ್ವದ ಅತೀ ಎತ್ತರದ ಕಟೌಟ್. ಇತ್ತೀಚೆಗೆ ತಮಿಳು ನಟ ಸೂರ್ಯ ಅವರ ಅತಿ ಎತ್ತರದ ಕಟೌಟ್ ನಿಲ್ಲಿಸಲಾಗಿತ್ತು. ಅಷ್ಟೇ ಅಲ್ಲದೆ ಅಲ್ಲದೆ 5 ಸಾವಿರ ಕೆ.ಜಿ ಕೇಕ್ ಮೂಲಕ ಯಶ್ ಹೆಸರಿನಲ್ಲಿ ಅಭಿಮಾನಿಗಳು ದಾಖಲೆ ಮಾಡಲು ಸಜ್ಜಾಗಿದ್ದಾರೆ.

ರಾಕಿಂಗ್​ ಸ್ಟಾರ್​ ಯಶ್​ ಕರ್ನಾಟಕ ಮಾತ್ರವಲ್ಲದೆ, ಬೇರೆ ರಾಜ್ಯಗಳಲ್ಲೂ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಹಾಗಾಗಿ ಯಶ್​ ಹುಟ್ಟು ಹಬ್ಬದಂದು ಬೇರೆ ರಾಜ್ಯದಿಂದಲೂ ಅಭಿಮಾನಿಗಳು ಬರಲಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top