fbpx
ಸಮಾಚಾರ

ಸ್ನೇಹಕ್ಕಾಗಿ ವರ್ಷಗಳ ನಂತರ ನಿರ್ಧಾರ ಬದಲಿಸಿದ ನಟ ಕಿಚ್ಚ ಸುದೀಪ್

ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಎಂದು ಕೇಳಿದ್ರೆ ಸಾಕು ಒಂದು ಮೈಲಿ ದೂರ ಅಂತರ ಕಾಯ್ದುಕೊಳ್ಳುತ್ತಾರೆ. ಹೀಗಿರುವಾಗ ತಮಿಳಿನ ಪ್ರತಿಷ್ಠಿತ ಜೀ ಸಿನಿ ಅವಾರ್ಡ್ಸ್‌ಗೆ ಹೋಗಿರುವುದು ಅವ್ರ ಅಭಿಮಾನಿಗಳಿಗೆ ಅಚ್ಚರಿ ಹುಟ್ಟಿಸಿದೆ.

‘ ನಾನು ಪ್ರಶಸ್ತಿಗೆ ಬೆಲೆ ಕೊಡುವುದಿಲ್ಲ. ನಾನು ಯಾವ ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದಿಲ್ಲ. ಇದರಿಂದ ನನಗೆ ಯಾವ ನೋವು ಆಗಿಲ್ಲ. ದೂರ ಇರುವುದರಿಂದ ಬಹಳ ಖುಷಿ ಸಿಕ್ಕಿದೆ ಎಂದು ಹೇಳಿ 15 ವರ್ಷಗಳಿಂದ ದೂರ ಉಳಿದರು. ಆದರೆ ಈಗ ಜೀ ತಮಿಳು ವಾಹಿನಿಯ ‘ಕನ್ನಡ ಚಿತ್ರರಂಗದ ಹೆಮ್ಮೆ’ ಎಂಬ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.

Attendeding an event to receive an award after years was a weird feeling. Felt happy too. Wired cz I’m used to life wthout awards n here iam altering my decisions for a friend of mine. Felt happy cz my presence made a few very happy. Thank u @ZeeKannada @vishvamukhi For th honour pic.twitter.com/vzSE7McGRp — Kichcha Sudeepa (@KicchaSudeep) January 5, 2020

ಇತ್ತೀಚೆಗೆ ಚೆನ್ನೈನಲ್ಲಿ ನಡೆದ ‘ಜೀ ತಮಿಳು ಅವಾರ್ಡ್ಸ್’ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಭಾಗವಹಿಸಿದ್ದರು. ಈ ವೇಳೆ ಅವರಿಗೆ ‘ಕನ್ನಡ ಚಿತ್ರರಂಗದ ಹೆಮ್ಮೆ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಸೌತ್ ನಟಿ ನಯನತಾರ ಸುದೀಪ್ ಅವರಿಗೆ ಈ ಪ್ರಶಸ್ತಿ ಪ್ರದಾನ ಮಾಡಿದರು.

ಸಾಮಾನ್ಯವಾಗಿ ಸುದೀಪ್ ಪ್ರಶಸ್ತಿ ಕಾರ್ಯಕ್ರಮಗಳಲ್ಲಿ ಭಾಗವಹಿಸದ ಸುದೀಪ್ ಆದರೆ ಈಗ ತಮಿಳಿನ ಅವಾರ್ಡ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಯಾಕೆ ಅಂತೀರಾ? ಅದಕ್ಕೆ ಕಾರಣ ಸ್ನೇಹ! ಹೌದು ಸ್ನೇಹಕ್ಕೆ ಬೆಲೆ ಕೊಟ್ಟು ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ಸುದೀಪ್ ಪಾಲ್ಗೊಂಡಿದ್ದಾರೆ. ಪ್ರಶಸ್ತಿಗಳ ಕುರಿತು ತಮ್ಮ ನಿರ್ಧಾರವನ್ನು ಬದಲಿಸಿಕೊಂಡು ‘ಕನ್ನಡ ಚಿತ್ರರಂಗದ ಹೆಮ್ಮೆ’ ಎಂಬ ಪ್ರಶಸ್ತಿಯನ್ನು ಸುದೀಪ್ ಸ್ವೀಕರಿಸಿದ್ದಾರೆ.

ಹಲವು ವರ್ಷಗಳ ನಂತರ ಅವಾರ್ಡ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಸ್ವಲ್ಪ ವಿಚಿತ್ರ ಎನಿಸಿತು. ಜೊತೆಗೆ ಖುಷಿ ಕೂಡ ಆಯಿತು. ನಾನು ನನ್ನ ಸ್ನೇಹಿತನಿಗಾಗಿ ಈ ನಿರ್ಧಾರವನ್ನು ಬದಲಾಯಿಸಿದ್ದೇನೆ. ನಾನು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಕೆಲವರಿಗೆ ಖುಷಿಯಾಗಿದೆ. ಜೊತೆಗೆ ನನಗೂ ಖುಷಿ ಆಯ್ತು” ಎಂದು ಟ್ವೀಟ್ ಮಾಡಿದ್ದಾರೆ. ಝೀ ಕನ್ನಡ ವಾಹಿನಿಯ ರಾಘವೇಂದ್ರ ಹುಣಸೂರು ಅವರನ್ನು ಟ್ಯಾಗ್ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top