fbpx
ಸಮಾಚಾರ

“JNU ಮೇಲೆ ದಾಳಿ ಮಾಡಿದ್ದು ನಾವೇ” JNU ಗುಂಪು ಹಲ್ಲೆಯ ಹೊಣೆಯನ್ನು ಹೊತ್ತುಕೊಂಡ ‘ಹಿಂದು ರಕ್ಷಾ ದಳ’

ಭಾನುವಾರ ಜೆಎನ್​ಯು ವಿಶ್ವವಿದ್ಯಾಲಯದಲ್ಲಿ ನಡೆದ ಗುಂಪು ಹಲ್ಲೆಯ ಹೊಣೆಯನ್ನು “ಹಿಂದು ರಕ್ಷಾ ದಳ” ಹೆಸರಿನ ಸಣ್ಣ ಸಂಘಟನೆಯೊಂದು ಹೊತ್ತುಕೊಂಡಿದ್ದು, ಪ್ರಮುಖ ವಿಶ್ವವಿದ್ಯಾಲಯವು ರಾಷ್ಟ್ರವಿರೋಧಿ ಚಟುವಟಿಕೆಯಂತಹ ಗೊಬ್ಬರ ಗುಂಡಿಯಾಗಿದೆ ಎಂದು ಆರೋಪಿಸಿದೆ. ಮುಖ್ಯಸ್ಥ ಪಿಂಕಿ ಚೌಧರಿ ಅವರು ಜೆಎನ್​ಯು ಹಿಂಸೆಯ ಹೊಣೆಯನ್ನು ಹೊತ್ತುಕೊಂಡಿರುವ ವಿಡಿಯೋವನ್ನು ಹಿಂದು ರಕ್ಷಾ ದಳ ಬಿಡುಗಡೆ ಮಾಡಿದೆ.

कल जेएनयू कांड की पूरी जिम्मेदारी ले ली है इसने। दिल्ली पुलिस के लिए केस आसान हो गया pic.twitter.com/528nk3YTR8— Narendra nath mishra (@iamnarendranath) January 6, 2020

ಜೆಎನ್​ಯು ಕಮ್ಯೂನಿಸ್ಟರ ತಾಣವಾಗಿದ್ದು, ಈ ರೀತಿಯ ವರ್ತನೆಯನ್ನು ನಾವು ಸಹಿಸುವುದಿಲ್ಲ. ಅವರು ನಮ್ಮ ದೇಶ ಮತ್ತು ಧರ್ಮವನ್ನು ಬೈಯ್ದರು. ನಮ್ಮ ಧರ್ಮದ ಬಗ್ಗೆ ಅವರ ವರ್ತನೆ ರಾಷ್ಟ್ರ ವಿರೋಧಿಯಾಗಿದೆ. ಭವಿಷ್ಯದಲ್ಲಿ ಬೇರೆ ವಿವಿಗಳು ಯಾವುದಾದರೂ ಈ ರೀತಿ ದೇಶ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾದರೆ ನಾವು ಕ್ರಮಕ್ಕೆ ಮುಂದಾಗುತ್ತೇವೆ ಎಂದು ವಿಡಿಯೋದಲ್ಲಿ ಎಚ್ಚರಿಕೆಯನ್ನು ನೀಡಿದ್ದಾರೆ.

ಸದ್ಯ ವಿಡಿಯೋ ಆಧಾರದ ಮೇಲೆ ತನಿಖೆಗೆ ಮುಂದಾಗಿರುವ ದೆಹಲಿ ಪೊಲೀಸರು ಪಿಂಕಿ ಚೌಧರಿಯನ್ನು ಬಂಧಿಸಿ ತನಿಖೆಗೆ ಒಳಪಡಿಸುವ ಸಾಧ್ಯತೆ ಇದ್ದು ಸಂಘಟನೆಯ ಅಸ್ತಿತ್ವ ಮತ್ತು ಅದರ ಅಧ್ಯಕ್ಷ ಸ್ಥಾನದ ಬಗ್ಗೆ ಮಾಹಿತಿ ಪಡೆಯಲಿದ್ದಾರೆ ಎನ್ನಲಾಗಿದೆ.

ದಾಳಿಯ ಜವಾಬ್ದಾರಿಯನ್ನು ವಹಿಸಿಕೊಂಡರುವ ಪಿಂಕಿ ಚೌಧರಿ ನಿಜವಾದ ಹೆಸರು ಭೂಪೇಂದ್ರ ತೋಮರ್, ಈ ವ್ಯಕ್ತಿ ಆಮ್ ಆದ್ಮಿ ಪಕ್ಷದ ಕಚೇರಿ ಮೇಲಿನ ದಾಳಿ ಸೇರಿದಂತೆ ಹಲವು ಪ್ರಕರಣಗಳಲ್ಲಿ ಜೈಲಿಗೆ ಹೋಗಿರುವ ವಿಚಾರ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top