fbpx
ಸಮಾಚಾರ

ರಾಕಿ ಭಾಯ್ ಯಶ್ ಅಭಿಮಾನಿಗಳಿಗೆ ಭಾರೀ ನಿರಾಸೆ!

ಸ್ಟಾರ್ ನಟರ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಉಡುಗೊರೆಯಾಗಿ ಸಿನಿಮಾಗಳ ಟೀಸರ್ ಅಥವಾ ಟ್ರೈಲರ್ ಬಿಡುಗಡೆ ಆಗುವುದು ಸಾಮಾನ್ಯ. ಅದರಂತೆ, ‘ಕೆ.ಜಿ.ಎಫ್-2’ ಚಿತ್ರದ ಟೀಸರ್ ಜನವರಿ 8 ರಂದು ಅಂದ್ರೆ ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆ ಆಗಲಿದೆ ಎಂದು ಸುದ್ದಿ ಆಗಿತ್ತು. ಆದ್ರೀಗ, ಯಶ್ ಬರ್ತಡೇ ದಿನ ‘ಕೆ.ಜಿ.ಎಫ್-2’ ಟೀಸರ್ ಬಿಡುಗಡೆ ಆಗುತ್ತಿಲ್ಲ.

@TheNameIsYash @SrinidhiShetty7@hombalefilms @VKiragandur@Karthik1423 pic.twitter.com/GgwWxNXjzS— Prashanth Neel (@prashanth_neel) January 5, 2020

ಯಶ್​ ಹುಟ್ಟು ಹಬ್ಬದಂದು ಕೆ.ಜಿ.ಎಪ್​-2 ಟೀಸರ್​ ಅನ್ನು ಬಿಡುವುದಿಲ್ಲ ನಿರ್ದೇಶಕ ಪ್ರಶಾಂತ್ ನೀಲ್ ಹೇಳಿದ್ದಾರೆ. ಬದಲಾಗಿ ಚಿತ್ರದ ಎರಡನೇ ಲುಕ್​​​ ಅನ್ನು ಬಿಡಲು ನಿರ್ಧರಿಸಿದ್ದಾರೆ. ಜನವರಿ 8 ರಂದು ಬೆಳಗ್ಗೆ 10 ಗಂಟೆಗೆ ಕೆ.ಜಿ.ಎಫ್​-2 ಎರಡನೆ ಲಕ್​ ಬಿಡುಗಡೆಯಾಗಲಿದೆ. ಈ ಬಗ್ಗೆ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಟ್ವೀಟ್ ಮಾಡಿದ್ದಾರೆ.

‘ಚಿತ್ರದ ಶೂಟಿಂಗ್​​ ಜನವರಿ 6ರ ವರೆಗೆ ನಡೆಯಲಿದೆ, ಹಾಗಾಗಿ ಚಿತ್ರತಂಡ ಜನವರಿ 7ರಂದು ಬೆಂಗಳೂರಿಗೆ ಮರಳುತ್ತಿದೆ. ಹೀಗಾಗಿ ಟೀಸರ್ ಬಿಡುಗಡೆ ಮಾಡುತ್ತಿಲ್ಲ. ಈ ವಿಚಾರದಲ್ಲಿ ನಿಮಗೆ ನಿರಾಸೆ ಮೂಡಿಸುತ್ತಿರುವುದಕ್ಕೆ ಬೇಸರವಾಗುತ್ತಿದೆ ಕ್ಷಮಿಸಿ. ನಿಮ್ಮ ಪ್ರೀತಿ ಹೀಗೆ ಇರಲಿ‘ ಎಂದು ಬರೆದುಕೊಂಡಿದ್ದಾರೆ.

‘ಕೆ.ಜಿ.ಎಫ್​-2 ಚಿತ್ರದ ಮೇಲೆನೀವೆಲ್ಲ ಅಪಾರವಾದ ನಿರೀಕ್ಷೆ ಇಟ್ಟುಕೊಂಡಿದ್ದೀರಿ. ಹೀಗಾಗಿ ಚಿತ್ರದ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಟೀಸರ್ ಬಿಡುಗಡೆ ಮಾಡದಿರುವುದಕ್ಕೆ ಸಂಪೂರ್ಣ ಜವಾಬ್ದಾರಿ ನಾನೇ ಹೊತ್ತು ಕ್ಷಮೆ ಕೇಳುತ್ತೇನೆ. ನಮ್ಮ ಬೆನ್ನಿಗೆ ನಿಂತಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು‘ ಎಂದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top