fbpx
ಸಮಾಚಾರ

ಕರ್ನಾಟಕದ ಮಾಜಿ ರಾಜ್ಯಪಾಲ ಟಿ.ಎನ್.ಚತುರ್ವೇದಿ ನಿಧನ

ಕರ್ನಾಟಕದ ಮಾಜಿ ರಾಜ್ಯಪಾಲ ಟಿ.ಎನ್.ಚತುರ್ವೇದಿ ಅವರು ಅವರು ಕಳೆದ ರಾತ್ರಿ ಉತ್ತರ ಪ್ರದೇಶದ ನೋಯ್ಡದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.

ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ನೋಯ್ಡಾದ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ತಡರಾತ್ರಿ ನಿಧನರಾದರು ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ. ಅವರಿಗೆ 90 ವರ್ಷ ವಯಸ್ಸಾಗಿತ್ತು.

ಜನವರಿ 18, 1929ರಂದು ಜನಿಸಿದ ಚತುರ್ವೇದಿ ಅವರು ಆಗಸ್ಟ್ 2002ರಿಂದ 20 ಆಗಸ್ಟ್ 2007ವರೆಗೆ ರಾಜ್ಯಪಾಲರಾಗಿದ್ದರು. ನಿವೃತ್ತ ಐಎಎಸ್ ಆಧಿಕಾರಿಯಾಗಿದ್ದ ಟಿ.ಎನ್.ಚತುರ್ವೇದಿ ಅವರು 1991ರಲ್ಲಿ ಪದ್ಮ ವಿಭೂಷಣ ಗೌರವಕ್ಕೂ ಪಾತ್ರರಾಗಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top