fbpx
ಸಮಾಚಾರ

ಸಕತ್ ಟ್ರೆಂಡ್ ಆಗ್ತಿದೆ ‘ಸಲಗ’ ಚಿತ್ರದ ‘ಸೂರಿ ಅಣ್ಣ’ ಹಾಡು!

ಸ್ಯಾಂಡಲ್‍ವುಡ್ ನಲ್ಲಿ ಸಖತ್ ಕ್ರೇಜ್ ಹುಟ್ಟಿಸಿರೋ ಸಿನಿಮಾ ಸಲಗ. ದುನಿಯಾ ವಿಜಿ ನಿರ್ದೇಶಿಸಿ ನಟಿಸುತ್ತಿರುವ ಈ ಚಿತ್ರದ ಫಸ್ಟ್ ಲಿರಿಕಲ್ ಸಾಂಗ್ ರಿಲೀಸ್ ಆಗಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸಾಂಗ್ ರಿಲೀಸ್ ಮಾಡಿದ್ದಾರೆ. ಸದ್ಯ ‘ಸೂರಿ ಅಣ್ಣ’ ಹಾಡು ಸೆನ್ಸೇಷನಲ್ ಕ್ರಿಯೇಟ್ ಮಾಡಿದ್ದು ಸಖತ್ ಕಿಕ್ ಕೊಡುತ್ತಿದೆ.

ಎ2 ಆಡಿಯೋ ಮೂಲಕ ಈ ಹಾಡು ಲೋಕಾರ್ಪಣೆಗೊಂಡಿದೆ. ಇನ್ನು, ಯೂಟ್ಯೂಬ್​ನಲ್ಲಿ ‘ಸೂರಿ ಅಣ್ಣ…’ ಸಾಂಗ್ ರಿಲೀಸ್ ಆಗುತ್ತಿದ್ದಂತೆ ಯೂಟ್ಯೂಬ್​ನಲ್ಲಿ ಸೆನ್ಸೇಷನ್ ಶುರು ಆಗಿದೆ. ಚರಣ್ ರಾಜ್ ಸಂಗೀತ ಸಂಯೋಜನೆ, ದುನಿಯಾ ವಿಜಯ್ ಆ್ಯಂಡ್​ ಟೀಂ ಸಾಹಿತ್ಯ, ಆಂಟೋನಿ ದಾಸ್ ವಾಯ್ಸ್ ಕಾಂಬಿನೇಷನ್​ನಲ್ಲಿ ಸಾಂಗ್​ ಸಖತ್​ ಸೆನ್ಸೇಷನ್​ ಸೃಷ್ಟಿಸಿದೆ.

ಈ ಹಿಂದೆ ಟಗರು ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿ ಜನರ ಮನಗೆದ್ದಿದ್ದ ಚರಣ್ ರಾಜ್ ಸಲಗ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಟಗರು ಸಿನಿಮಾದ ಶೀರ್ಷಿಕೆ ಹಾಡಿನಂತೆ ಸೂರಿ ಅಣ್ಣ ಹಾಡನ್ನು ಕಂಪೋಸ್ ಮಾಡಿದ್ದು, ಈ ಹಾಡು ದೊಡ್ಡ ಹಿಟ್ ಆಗಲಿದೆ ಎಂದು ಶಿವಣ್ಣ ಭವಿಷ್ಯ ನುಡಿದಿದ್ದಾರೆ.

ಟಗರು ಖ್ಯಾತಿಯ ಕೆ.ಪಿ.ಶ್ರೀಕಾಂತ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಸಂಜನಾ ಆನಂದ್ ನಾಯಕಿಯಾಗಿ ವಿಜಿ ಜೊತೆ ಸ್ಕೀನ್ ಶೇರ್ ಮಾಡಿದ್ದಾರೆ.  ಸಂಗೀತ ನಿರ್ದೇಶಕ ಚರಣ್ ರಾಜ್ ಜೊತೆಗೆ ದುನಿಯಾ ವಿಜಯ್ ಮತ್ತು ಟಗರು ಚಿತ್ರದಿಂದ ಸ್ಟಾರ್ ಪಟ್ಟಕ್ಕೇರಿದ ಡಾಲಿ ಧನಂಜಯ ‘ಸಲಗ’ಕ್ಕಾಗಿ ಒಂದಾಗಿದ್ದಾರೆ. ವಿಜಿ ರಗಡ್​ ಪಾತ್ರದಲ್ಲಿ ಕಾಣಿಸಿಕೊಂಡರೆ, ಡಾಲಿ ಇದೇ ಮೊದಲ ಬಾರಿಗೆ ಪೊಲೀಸ್​ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಮಾಸ್ತಿ ಮಂಜು ಡೈಲಾಗ್ಸ್ ಸಲಗ ಚಿತ್ರಕ್ಕಿದ್ದು, ಶಿವಸೇನ ಛಾಯಾಗ್ರಹಣ, ದೀಪು ಎಸ್. ಕುಮಾರ್ ಸಂಕಲನ ಇದೆ. ಈ ಚಿತ್ರದಲ್ಲಿ ನಾಯಕಿಯಾಗಿ ನಟಿ ಸಂಜನಾ ಆನಂದ್ ಅಭಿನಯಿಸಿದ್ದು, ರಂಗಾಯಣ ರಘು, ಅಚ್ಯುತ್ ಕುಮಾರ್, ನಾಗಭೂಷಣ್, ಯಶ್ ಶೆಟ್ಟಿ ಮುಖ್ಯಭೂಮಿಕೆಯಲ್ಲಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top