fbpx
ಸಮಾಚಾರ

“ಶೇಕ್‍ಹ್ಯಾಂಡ್ ಮಾಡಿದರೇ ಅವರ ದರಿದ್ರತನಗಳು ನಮಗೆ ಬರುತ್ತವೆ” ನಟ ಜಗ್ಗೇಶ್

ನಾವು ಶೇಕ್ ಹ್ಯಾಂಡ್ ಮಾಡುವುದರಿಂದ ಅವರ ದರಿದ್ರತನಗಳು ನಮಗೆ ಬರುತ್ತವೆ ಎಂದು ನಟ ಜಗ್ಗೇಶ್ ಹೇಳಿದ್ದಾರೆ.. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಹೊಸಯಳನಾಡು ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್ ಏರ್ಪಡಿಸಿದ್ದ ಶಾಲಾ ವಾರ್ಷಿಕೊತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತಾನಾಡಿದ ಅವರು ಹೀಗೆ ಹೇಳಿದ್ದಾರೆ.

“ಎರಡು ಕೈಗಳನ್ನು ಜೋಡಿಸಿ ನಮಸ್ಕಾರ ಮಾಡುವುದು ನಮ್ಮ ಸಂಪ್ರದಾಯ. ಆದರೆ ಈಗ ನಮ್ಮಲ್ಲಿ ನಿಮ್ಮಲ್ಲಿ ಆ ಸಂಸ್ಕೃತಿ ಇದಿಯಾ ಎಂದು ಆತ್ಮಸಾಕ್ಷಿಗೆ ಪ್ರಶ್ನೆ ಮಾಡಿಕೊಳ್ಳಬೇಕು. ಇವತ್ತು ನಮ್ಮ ಸಂಸ್ಕೃತಿ ಬಿಟ್ಟು ವಿದೇಶಿಯರ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿದ್ದೀವಿ. ನಾವು ಎಲ್ಲದರೂ ಹೋದರೆ ಶೇಕ್ ಹ್ಯಾಂಡ್ ಮಾಡುತ್ತೇವೆ. ನಾವು ಎರಡು ಕೈಗಳನ್ನು ಮುಗಿಯುವುದರಿಂದ ನಮ್ಮ ದೇಹದಲ್ಲಿರುವ ಶಕ್ತಿ ನಮ್ಮಲ್ಲೇ ಇರುತ್ತದೆ. ನಾವು ಶೇಕ್ ಹ್ಯಾಂಡ್ ಮಾಡುವುದರಿಂದ ಅವರ ದರಿದ್ರತನಗಳು ನಮಗೆ ಬರುತ್ತವೆ ಎಂದರು.

ನಾವು ಶೇಕ್ ಹ್ಯಾಂಡ್ ಮಾಡುವುದಿಂದ ಅವರ ಕೈ ಕೂಲುಕುವುದರಿಂದ ಅವರ ದರಿದ್ರ ತನಗಳು ನಮಗೆ ಬರುತ್ತವೆ ಎಂದು ಜಗ್ಗೇಶ್ ತಿಳಿಸಿದರು. ಸನಾತನ ಧರ್ಮದಲ್ಲಿ ಪರಸ್ಪರ ಭೇಟಿ ಮಾಡಿದಾಗ ಎರಡು ಕೈಗಳನ್ನು ನಮಸ್ಕಾರ ಮಾಡುವುದು ಇದೆ. ಆದರೆ ಈಗ ನಮ್ಮಲ್ಲಿ ಹಳೇ ಸಂಪ್ರಾದಾಯ ಹೋಗಿ ಶೆಕ್ ಹ್ಯಾಂಡ್ ಹಂತಕ್ಕೆ ತಲುಪಿದ್ದೀವಿ ಎಂದು ವ್ಯಂಗ್ಯವಾಡಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top