fbpx
ಸಮಾಚಾರ

“ಭಾಷೆ ಹೆಸರಲ್ಲಿ ಗಲಭೆ ಎಬ್ಬಿಸುವ ಸಂಘಟನೆಗಳು ತುಕಡೆ ಗ್ಯಾಂಗ್​ಗಳು” ಸಿಟಿ ರವಿ ವಿವಾದಾತ್ಮಕ ಹೇಳಿಕೆ.

ಭಾಷೆ ಹೆಸರಲ್ಲಿ ಗಲಭೆ ಎಬ್ಬಿಸುವ ಸಂಘಟನೆಗಳು ತುಕಡೆ ಗ್ಯಾಂಗ್​ಗಳು ಎಂದು ಸಚಿವ ಸಿ.ಟಿ.ರವಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕನ್ನಡಿಗರು ತಮ್ಮ ವಾಹನಗಳಿಗೆ ಕನ್ನಡ ವಾವುಟ ಹಾಕಿಕೊಂಡು ಶಬರಿ ಮಲೆಗೆ ಹೋಗುತ್ತಿದ್ದ ವೇಳೆ ತಮಿಳುನಾಡಿನಲ್ಲಿ ಕನ್ನಡಿಗರನ್ನು ತಡೆದಿದ್ದರು. ಇದಕ್ಕೆ ಪ್ರತಿಯಾಗಿ ಬೆಂಗಳೂರಿನಲ್ಲಿ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಘಟನೆಯ ಬಗ್ಗೆ ಸಿಟಿ ರವಿ ಅವರನ್ನು ಪ್ರತಿಕಿಯೆ ಕೇಳಿದಾಗ ಭಾನುವಾರ ಸುದ್ದಿಗಾರರೊಂದಿಗೆ ಈ ಹೇಳಿಕೆ ನೀಡಿದ್ದಾರೆ.

“ಭಾಷೆ ಹೆಸರಲ್ಲಿ ಗಲಭೆ ಎಬ್ಬಿಸುವ ಸಂಘಟನೆಗಳು ತುಕಡೆ ಗ್ಯಾಂಗ್​ಗಳು. ಈ ತುಕಡೆ ಗ್ಯಾಂಗ್​ಗಳು ಪ್ರತ್ಯೇಕವಾದಿಗಳು. ಕನ್ನಡಿಗರು ಮತ್ತು ತಮಿಳರು ಅನ್ಯೋನ್ಯವಾಗಿದ್ದಾರೆ. ಆದರೆ ಭಾಷೆಯ ಹೆಸರಲ್ಲಿ ಈ ತುಕಡೆ ಗ್ಯಾಂಗ್​​​ಗಳು ಗಲಭೆ ಮಾಡುತ್ತಾರೆ,” ಎಂದು ಕಿಡಿಕಾರಿದ್ದಾರೆ.

ಉಗ್ರಗಾಮಿ ಸಂಘಟನೆಗಳು ಎಲ್ಲಾ ಕಡೆ ಇರುತ್ತಾರೆ. ಅಭಿಮಾನಿಗಳೇ ಬೇರೆ ಉಗ್ರಗಾಮಿಗಳೇ ಬೇರೆ. ಅಭಿಮಾನಿಗಳ ಬಗ್ಗೆ ತಕರಾರು ಇಲ್ಲ. ಕನ್ನಡಿಗನಾಗಿ ಕನ್ನಡಕ್ಕೆ ಮೊದಲ ಆದ್ಯತೆ ಕೊಡಬೇಕು. ಗಲಾಟೆ ಹುಟ್ಟುಹಾಕಿ ಇಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ. ಆಗ ತುಕುಡೆ ಗ್ಯಾಂಗ್​​​​ಗಳಿಗೆ ಲಾಭವಾಗುತ್ತದೆ. ಗಲಭೆ ಹುಟ್ಟು ಹಾಕೋದಕ್ಕೆ ತುಕಡೆ ಗ್ಯಾಂಗ್​​ಗಳ ಸಂಚು ಹಾಕುತ್ತಿರುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ತುಕಡೆ ಗ್ಯಾಂಗ್​ಗಳು ಗಲಭೆ ಹುಟ್ಟುಹಾಕಲು ಸಹಾಯ ಮಾಡುತ್ತವೆ. ಸಮಾಜವನ್ನು ಒಡೆಯುವುದೇ ಅವರ ಉದ್ದೇಶ. ಶೇ. 99 ರಷ್ಟು ಕನ್ನಡಿಗರು-ತಮಿಳುಗರು, ಶೇ.99 ರಷ್ಟು ಕನ್ನಡಿಗರು-ಮರಾಠಿಗರು ಅನ್ಯೋನವಾಗಿದ್ದಾರೆ. ಸೌಹಾರ್ದ ಕೆಡಿಸುವ ಜನರನ್ನು ಹೊರಗಿಡಬೇಕು” ಎಂದು ಸಿಟಿ ರವಿ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top