fbpx
ಸಮಾಚಾರ

ಟಾಲಿವುಡ್‌ನ ಈ ‘ಸ್ಟಾರ್’ ನಟನ ಮಗಳಿಗೆ ನಿಖಿಲ್‌ರ ಶೂಗಳು ಬೇಕಂತೆ!

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಅವರ ಹೊಸ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಸಖತ್ ಟ್ರೆಂಡ್ ಆಗಿವೆ. ಇತ್ತೀಚಿಗೆ ಅವರ ಒಂದು ಫೋಟೋ ನೋಡಿ, ಅದರಲ್ಲಿ ಅವರು ಧರಿಸಿದ್ದ ಶೂಗಳು ನನಗೆ ಬೇಕು ಎಂದು ಟಾಲಿವುಡ್‌ ನಟಿಯೊಬ್ಬರು ಕಾಮೆಂಟ್ ಹಾಕಿದ್ದಾರೆ!

ಟಾಲಿವುಡ್ ಸ್ಟಾರ್ ನಟ ಮೋಹನ್ ಬಾಬು ಅವರ ಮಗಳು ಲಕ್ಷ್ಮೀ ಮಂಚು ನಿಖಿಲ್ ಕುಮಾರಸ್ವಾಮಿ ಅವರ ಫೋಟೋಗೆ ಕಾಮೆಂಟ್ ಬರೆದಿದ್ದು, ಕಾಮೆಂಟ್​ನಲ್ಲಿ ನನಗೆ ಈ ಶೂ ಬೇಕು ಎಂದಿದ್ದಾರೆ. ಆದರೆ, ಅದಕ್ಕೆ ನಿಖಿಲ್ ರಿಪ್ಲೆ ಮಾಡಿಲ್ಲ. ಇನ್ನು ಫೋಟೊದಲ್ಲಿ ನಿಖಿಲ್ ಬಿಳಿಯ ಬಣ್ಣದ ಶೂಗಳನ್ನು ಧರಿಸಿದ್ದಾರೆ.

ಅಸಲಿಗೆ, ನಿಖಿಲ್ ಕುಮಾರಸ್ವಾಮಿ ಮತ್ತು ಲಕ್ಷ್ಮೀ ಮಂಚು ಆತ್ಮೀಯ ಸ್ನೇಹಿತರು. ಲಕ್ಷ್ಮೀ ಮಂಚು ಆಯೋಜಿಸಿದ್ದ ಕೆಲವು ಕಾರ್ಯಕ್ರಮಗಳಿಗೆ ಮುಖ್ಯ ಅತಿಥಿಯಾಗಿ ನಿಖಿಲ್ ಕುಮಾರಸ್ವಾಮಿ ಭಾಗವಹಿಸಿದ್ದಾರೆ. ಲಕ್ಷ್ಮೀ ಮಂಚು ಮತ್ತು ನಿಖಿಲ್ ಕುಟುಂಬದ ನಡುವೆ ಉತ್ತಮ ಒಡನಾಟವಿದೆ. ಮಕ್ಕಳಿಗೆ ಶಿಕ್ಷಣ ನೀಡುವ ಸಲುವಾಗಿ ಇತ್ತೀಚಿಗೆ ಫಂಡ್‌ ರೈಸ್ ಮಾಡುವಂತಹ ಕಾರ್ಯಕ್ರಮವೊಂದನ್ನು ಲಕ್ಷ್ಮೀ ಮಂಚು ಹಮ್ಮಿಕೊಂಡಿದ್ದರು. ಆ ಕಾರ್ಯಕ್ರಮಕ್ಕೆ ನಿಖಿಲ್‌ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top