fbpx
ಸಮಾಚಾರ

1500 ಸಂಚಿಕೆ ಪೂರೈಸಿ ಕೊನೆಗೂ ಮುಕ್ತಾಯಗೊಂಡ ಅಗ್ನಿಸಾಕ್ಷಿ!

ಕೊನೆಗೂ ‘ಅಗ್ನಿಸಾಕ್ಷಿ’ ಮುಕ್ತಾಯಗೊಂಡಿದೆ. ಅಪಾರ ಪ್ರಮಾಣದಲ್ಲಿ ಜನಪ್ರಿಯತೆ ಗಳಿಸಿದೆ ಈ ಧಾರಾವಾಹಿಯ ಸನ್ನಿಧಿ- ಸಿದ್ಧಾರ್ಥ್ ಜೋಡಿ ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. 1500 ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಿ ಮುಕ್ತಾಯಗೊಂಡಿದೆ. ಧಾರಾವಾಹಿಯ ಅಂತಿಮ ಸಂಚಿಕೆ ಜನವರಿ 03ರಂದು ಪ್ರಸಾರವಾಗಿದೆ.

ಸನ್ನಿಧಿ- ಸಿದ್ದಾರ್ಥ್ ನವಿರಾದ ಪ್ರೇಮ ಕಥೆ, ಚಂದ್ರಿಕಾ ಕುತಂತ್ರ, ಸಿದ್ದಾರ್ಥ್- ಅಖಿಲ್ ಬಾಂಧವ್ಯ, ಅಂಜಲಿ ತುಂಟಾಟ, ಮುಖ್ಯಮಂತ್ರಿ ಚಂದ್ರು ಪ್ರಬುದ್ಧತೆ ಇವೆಲ್ಲವೂ ನಮ್ಮ ಮನೆಯಲ್ಲಿ ನಡೆಯುವ ಕಥೆಯೇನೋ ಅನ್ನುವಷ್ಟು ಆತ್ಮೀಯತೆ ನೀಡುತ್ತಿದ್ದವು. ಅಲ್ಲಲ್ಲಿ ಸ್ವಲ್ಪ ಎಳೆದಂತೆ ಭಾಸವಾದರೂ ಜನ ಮಾತ್ರ ನೋಡುವುದನ್ನು ಬಿಟ್ಟಿರಲಿಲ್ಲ.

ವಿಜಯ್ ಸೂರ್ಯ ‘ಅಗ್ನಿಸಾಕ್ಷಿ’ಯಿಂದ ಹೊರಬಂದು ಪ್ರೇಮಲೋಕ ಧಾರಾವಾಹಿಯನ್ನು ಬ್ಯುಸಿಯಾದರು. ವಿಜಯ್ ಸೂರ್ಯ ಹೊರ ಬಂದಾಗ ಧಾರಾವಾಹಿ ಬೋರ್ ಹೊಡೆಸುತ್ತದೆ. ವೀಕ್ಷಕರ ಸಂಖ್ಯೆ ಕಡಿಮೆಯಾಗುತ್ತದೆ ಎಂದು ಭಾವಿಸಲಾಗಿತ್ತು. ಇನ್ನು ಕೆಲವೇ ದಿನಗಳಲ್ಲಿ ಮುಗಿದು ಹೋಗುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಉಳಿದ ಪಾತ್ರಗಳು ಅದನ್ನು ಸರಿದೂಗಿಸಿಕೊಂಡು ಹೋದವು. ‘ಪ್ರೇಮಲೋಕ’ ಸೀರಿಯಲ್ ಕೂಡಾ ಸಿದ್ಧಾರ್ಥ್‌ಗೆ ಒಳ್ಳೆಯ ಇಮೇಜನ್ನು ತಂದು ಕೊಟ್ಟಿತು.

ಇನ್ನು ವಿಲನ್ ಚಂದ್ರಿಕಾ ಪಾತ್ರವನ್ನು ಇವರನ್ನು ಬಿಟ್ಟರೆ ಬೇರೆ ಯಾರೂ ಮಾಡಲು ಸಾಧ್ಯವಿಲ್ಲ ಎನ್ನುವಷ್ಟು ಬೆಸೆದುಕೊಂಡಿದ್ದ ಚಂದ್ರಕಾ ಅಲಿಯಾಸ್ ಪ್ರಿಯಾಂಕ ಗೌಡ ಬಿಗ್‌ಬಾಸ್‌ಗೆ ತೆರಳಿದರು. ಇದೀಗ ಅಗ್ನಿಸಾಕ್ಷಿ ಮುಕ್ತಾಯಗೊಂಡಿದೆ. ಪ್ರೇಕ್ಷಕರ ಜೊತೆ ಬೆಸೆದುಕೊಂಡಿದ್ದ ಈ ಧಾರಾವಾಹಿ ಮುಗಿದಿರುವುದು ಕೆಲವರಿಗೆ ಬೇಸರ ತಂದಿದ್ದರೆ ಇನ್ನು ಕೆಲವರು ಟ್ರೋಲ್ ಮಾಡ್ತಾ ಇದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top