fbpx
ಸಮಾಚಾರ

ವಾಸುಕಿಗೆ ಸಾವಿನ ಸುದ್ದಿ ತಿಳಿಸಿದ ಬಿಗ್‍ಬಾಸ್! ಕಣ್ಣೀರು ಹಾಕಿದ ವಾಸುಕಿ!

ಬಿಗ್‌ಬಾಸ್ ಸೀಸನ್ 7ರ ಗ್ರಾಂಡ್ ಫಿನಾಲೆಗೆ ಇನ್ನು ಕೆಲವೇ ದಿನಗಳು ಬಾಕಿಯಿವೆ. ಈಗಾಗಲೇ 84 ದಿನಗಳು ಮುಕ್ತಾಯವಾಗಿದ್ದು, ಶೋ ಮುಕ್ತಾಯಕ್ಕೆ ಇನ್ನು 15 ದಿನಗಳಷ್ಟೇ ಬಾಕಿಯಿದೆ. ಈ ಮದ್ಯೆ ಸ್ಪರ್ಧಿ ವಾಸುಕಿ ವೈಭವ್ ಅವರ ಸಂಬಂಧಿಯೊಬ್ಬರು ನಿಧನರಾಗಿದ್ದು, ಈ ವಿಚಾರವನ್ನು ವಾಸುಕಿ ವೈಭವ್ ಅವರಿಗೆ ತಿಳಿಸಿದ್ದಾರೆ.

ವಾಸುಕಿ ವೈಭವ್ ಅವರ ಅಪ್ಪನ ಸಂಬಂಧಿ ಶ್ರೀವಸ್ತಾ ಅವರು ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಶುಕ್ರವಾರ ಬಿಗ್‍ಬಾಸ್ ವಾಸುಕಿಯನ್ನು ರೂಮಿಗೆ ಕರೆದಿದ್ದರು. ಆಗ ವಾಸುಕಿ ನಿಮ್ಮ ಮನೆಯವರಿಂದ ಒಂದು ಸುದ್ದಿ ಬಂದಿದೆ. ಇದು ಪ್ರಮುಖವಾದ ಸುದ್ದಿಯಾಗಿದೆ. ಹಾಗಾಗಿ ನಿಮಗೆ ತಿಳಿಸುತ್ತಿದ್ದೇವೆ. ನಿಮ್ಮ ಮಾವ ಶ್ರೀವಸ್ತಾ ಅವರು ತೀವ್ರ ಅನಾರೋಗ್ಯದ ಕಾರಣ ನಿಧನರಾಗಿದ್ದಾರೆ ಎಂದು ಬಿಗ್‍ಬಾಸ್ ತಿಳಿಸಿದ್ದಾರೆ.

ಸಾವಿನ ಸುದ್ದಿ ಕೇಳಿ ತೀವ್ರ ಆಘಾತಗೊಂಡ ವಾಸುಕಿ ವೈಭವ್‌ ನಾನು ಹೊರಡಬಹುದೆ ಎಂದು ಕೇಳಿದರು. ಆದ್ರೆ ಅಂತ್ಯಸಂಸ್ಕಾರದ ವಿಧಿವಿಧಾನಗಳು ಮುಗಿದಿವೆ ಎಂದು ಬಿಗ್‌ಬಾಸ್ ತಿಳಿಸಿದರು. ತಕ್ಷಣ ವಾಸುಕಿ ಜೋರಾಗಿ ಅಳಲು ಶುರು ಮಾಡಿದ್ದಾರೆ. ನೀವು ಇಚ್ಚಿಸುವುದಾದರೆ ಶೈನ್‌ ಶೆಟ್ಟಿಯನ್ನು ಕರೆಸುವುದಾಗಿ ಹೇಳಿದರು. ಅದರಂತೆ ಶೈನ್ ಸಹ ಕನ್ಫೆಷನ್ ರೂಮಿಗೆ ಬಂದು ವಾಸುಕಿಯನ್ನು ಸಮಾಧಾನಪಡಿಸಿದರು. ಬಳಿಕ ಅಲ್ಲಿಂದ ಹೊರಬಂದ ಮೇಲೆ ಮನೆಯ ಎಲ್ಲಾ ಸದಸ್ಯರಿಗೂ ವಿಷಯ ಗೊತ್ತಾಗಿ ಎಲ್ಲರೂ ವಾಸುಕಿಯನ್ನು ಸಮಾಧಾನಪಡಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top