fbpx
ಸಮಾಚಾರ

ಸೂರ್ಯ ‘ಓಂ’ ಎಂದು ಶಬ್ದ ಮಾಡುತ್ತಾನೆ ಎಂದು ಹೇಳಿ ಹಿಗ್ಗಾ ಮುಗ್ಗಾ ಟ್ರೊಲ್ ಆದ ಕಿರಣ್ ಬೇಡಿ!

ಪುದುಚೆರಿಯ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ, ಹಲವು ವರ್ಷಗಳಿಂದ ವಾಟ್ಸಾಪ್‌ನಲ್ಲಿ ಹರಿದಾಡುತ್ತಿದ್ದ ನಕಲಿ ವಿಡಿಯೋವೊಂದನ್ನು ನಂಬಿ ನಗೆಪಾಟಲಿಗೆ ಈಡಾಗಿದ್ದಾರೆ. ಸೂರ್ಯ ‘ಓಂ’ ಎಂಬ ಸದ್ದು ಹೊರಡಿಸುತ್ತಿದೆ ಎಂಬ ವಿಡಿಯೋ ಹಂಚಿಕೊಂಡಿರುವ ಕಿರಣ್ ಬೇಡಿ ಅವರನ್ನು ನೆಟ್ಟಿಗರು ಟ್ರಾಲ್ ಮಾಡುತ್ತಿದ್ದಾರೆ.

pic.twitter.com/ArRwljjDVE— Kiran Bedi (@thekiranbedi) January 4, 2020

ಟ್ವಿಟ್ಟರ್ ನಲ್ಲಿ ಯಾವುದೇ ಆಧಾರವಿಲ್ಲದ ವಿಡಿಯೋವನ್ನು ಶೇರ್ ಮಾಡಿರುವ ಕಿರಣ್ ಬೇಡಿ “ನಾಸಾ ಸೂರ್ಯನ ಧ್ವನಿ ರೆಕಾರ್ಡ್ ಮಾಡಿದ್ದರಲ್ಲಿ ಸೂರ್ಯ ಓಂ ಎಂದು ಪಠಿಸುತ್ತಾನೆ” ಎಂದು ಬರೆದುಕೊಂಡಿದ್ದಾರೆ.ಈಗ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿ ಟ್ರೋಲ್ ಆಗಿದೆ.

ನಾಸಾ ಸೂರ್ಯನ ಶಬ್ದದ ಬಗ್ಗೆ ಅಧ್ಯಯನ ನಡೆಸಿ ವಿಡಿಯೋಗಳನ್ನು ಈ ಹಿಂದೆ ಬಿಡುಗಡೆ ಮಾಡಿತ್ತು. ಆದರೆ ನಿಜವಾದ ವಿಡಿಯೋದಲ್ಲಿ ಎಲ್ಲಿಯೂ ‘ಓಂ’ ಧ್ವನಿ ಕೇಳಿಸುವುದಿಲ್ಲ. ಹೀಗಾಗಿ ಕಿರಣ್ ಬೇಡಿಯವರನ್ನು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಜನರಿಗೆ ಮಾದರಿಯಾಗಿರುವವರು ಈ ರೀತಿ ಟ್ವೀಟ್ ಮಾಡುವ ಮುನ್ನ ಪರಿಶೀಲಿಸಬೇಕು ಎಂದು ಬುದ್ಧಿಮಾತು ಹೇಳಿದ್ದಾರೆ.

.ಅದೇನೇ ಇರಲಿ ಒಬ್ಬ ಖ್ಯಾತ ಪೊಲೀಸ್​ ಅಧಿಕಾರಿಯಾಗಿಯಾಗಿದ್ದ ಕಿರಣ್​ ಬೇಡಿರವರು , ಸತ್ಯ ಯಾವುದು ಸುಳ್ಳು ಯಾವುದು ಅನ್ನೋದನ್ನ ತಿಳಿಯದೇ ಇಂತಹ ವಿಡಿಯೋವನ್ನ ಶೇರ್​ ಮಾಡಿ ನಗೆಪಾಟಲಿಗೀಡಾಗಿರೋದಂತೂ ಸತ್ಯ.

The Sun is not silent. The low, pulsing hum of our star’s heartbeat allows scientists to peer inside, revealing huge rivers of solar material flowing, along with waves, loops and eruptions. This helps scientists study what can’t be seen. Listen in: https://t.co/J4ZC3hUwtL pic.twitter.com/lw30NIEob2— NASA (@NASA) July 25, 2018

ಇನ್ನು ಸೂರ್ಯನ ವಾತಾವರಣದಲ್ಲಿ ಉಂಟಾಗುತ್ತಿರುವ ಶಬ್ದಕ್ಕೆ ಸಂಬಂಧಿಸಿದಂತೆ ಒಂದು ಆಡಿಯೊ–ವಿಡಿಯೊ ರೆಕಾರ್ಡ್‌ನ್ನು ನಾಸಾ 2018ರಲ್ಲಿ ಹಂಚಿಕೊಂಡಿತ್ತು. ‘ಸೂರ್ಯ ನಿಶ್ಯಬ್ದಿಯಾಗಿಲ್ಲ. ತರಂಗಗಳಿಂದ ಹೊರಡುತ್ತಿರುವ ಸದ್ದು ಸೌರ ದ್ರವ್ಯದ ಸಂಚಾರವನ್ನು ತಿಳಿಸುತ್ತದೆ. ಇದು ಸೂರ್ಯನ ಒಳಭಾಗದ ಅಧ್ಯಯನ ಮಾಡಲು ವಿಜ್ಞಾನಿಗಳಿಗೆ ಸಹಕಾರಿಯಾಗುತ್ತದೆ’ ಎಂದು ಟ್ವೀಟ್‌ನೊಂದಿಗೆ ಹಂಚಿಕೊಳ್ಳಲಾಗಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top