fbpx
ಸಮಾಚಾರ

ಒಂದೇ ಓವರ್‌ನಲ್ಲಿ ಆರು ಸಿಕ್ಸರ್ ಸಿಡಿಸಿದ ಕಿವೀಸ್ ಆಟಗಾರ: ವಿಡಿಯೋ ವೈರಲ್

ಟೀಮ್​ ಇಂಡಿಯಾದ ಮಾಜಿ ಆಟಗಾರ ಯುವರಾಜ್​ ಸಿಂಗ್​, 2007ರ ಟಿ20 ವಿಶ್ವಕಪ್​ನಲ್ಲಿ ಇಂಗ್ಲೆಂಡ್​ ವಿರುದ್ಧ ಒಂದೇ ಓವರ್​ನಲ್ಲಿ 6 ಸಿಕ್ಸರ್​ ಬಾರಿಸಿದ್ದು ಇಂದಿಗೂ ಕ್ರೀಡಾಭಿಮಾನಿಗಳ ಮನದಲ್ಲಿ ಅಚ್ಚೊತ್ತಿದೆ. ಇದೀಗ ಯುವಿ ಮಾದರಿಯಲ್ಲೇ ನ್ಯೂಜಿಲೆಂಡ್​ ಕ್ರಿಕೆಟರ್ ಒಂದೇ ಓವರ್​ನಲ್ಲಿ 6 ಸಿಕ್ಸರ್​ ಸಿಡಿಸುವ ಮೂಲಕ ಮತ್ತೊಮ್ಮೆ ಯುವಿಯನ್ನು ನೆನೆಯುವಂತೆ ಮಾಡಿದ್ದಾರೆ.​

36 off an over! 😲

Leo Carter hit 6 sixes in a row and the @CanterburyCrick Kings have pulled off the huge chase of 220 with 7 balls to spare at Hagley Oval! 👏

Scorecard | https://t.co/uxeeDsd3QY#SuperSmashNZ #cricketnation
🎥 SKY Sport. pic.twitter.com/nuDXdp1muG— Dream11 Super Smash (@SuperSmashNZ) January 5, 2020

ನ್ಯೂಜಿಲೆಂಡ್‌ನ ದೇಶಿ ಟಿ20 ಕ್ರಿಕೆಟ್‌ ಟೂರ್ನಿಯಾದ ಸೂಪರ್‌ ಸ್ಮ್ಯಾಷ್‌ ಟಿ20 ಟೂರ್ನಮೆಂಟ್‌ನಲ್ಲಿ ಯುವ ಎಡಗೈ ಬ್ಯಾಟ್ಸ್‌ಮನ್‌ ಲಿಯೋ ಕಾರ್ಟರ್‌ ಈ ಸಾಧನೆ ಮಾಡಿದ್ದಾರೆ. ಭಾನುವಾರ ಸೂಪರ್‌ ಸ್ಮ್ಯಾಷ್‌ ಲೀಗ್‌ ಇತಿಹಾಸದಲ್ಲಿ ಓವರ್‌ ಒಂದರ 6 ಎಸೆತಗಳಲ್ಲಿ 6 ಸಿಕ್ಸರ್‌ ಸಿಡಿಸಿದ ಮೊತ್ತ ಮೊದಲ ಬ್ಯಾಟ್ಸ್‌ಮನ್‌ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

ಕ್ರೈಸ್ಟ್ ಚರ್ಚ್ ನ ಹ್ಯಾಗ್ಲಿ ಓವಲ್ ಮೈದಾನದಲ್ಲಿ ನಡೆದ ನ್ಯೂಜಿಲ್ಯಾಂಡ್‍ನ ದೇಶಿಯ ಟಿ20 ಟೂರ್ನಮೆಂಟ್‍ನಲ್ಲಿ ನಾರ್ಥನ್ ನೈಟ್ಸ್ ವಿರುದ್ಧದ ಪಂದ್ಯದಲ್ಲಿ ಲಿಯೋ ಕಾರ್ಟರ್ ಈ ಸಾಧನೆ ಮಾಡಿದ್ದಾರೆ. ಇನ್ನಿಂಗ್ಸ್ 16ನೇ ಓವರ್ ನಲ್ಲಿ ಎಡಗೈ ಬ್ಯಾಟ್ಸ್‌ಮನ್ ಲಿಯೋ ಕಾರ್ಟರ್ ಆರು ಎಸೆತಗಳನ್ನು ಸಿಕ್ಸರ್ ಸಿಡಿಸಿದ್ದಾರೆ. ಈ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದ ಲಿಯೋ ಕಾರ್ಟರ್ 29 ಎಸೆತಗಳಲ್ಲಿ 70 ರನ್ (7 ಸಿಕ್ಸರ್, 4 ಬೌಂಡರಿ) ಗಳಿಸಿದರು. ಲಿಯೋ ಕಾರ್ಟರ್ ಅವರ 70 ರನ್ ಸಹಾಯದಿಂದ ದಿ ಕಿಂಗ್ಸ್ 220 ರನ್ ಗಳಿಸಿತು.

ದೇಶಿ ಮತ್ತು ಅಂತಾರಾಷ್ಟ್ರೀಯ ಮಟ್ಟ ಒಳಗೊಂಡಂತೆ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಓವರ್‌ ಒಂದರಲ್ಲೇ 6 ಸಿಕ್ಸರ್‌ಗಳನ್ನು ಬಾರಿಸಿದವರ ಪೈಕಿ ಲಿಯೋ ಕಾರ್ಟರ್‌ ವಿಶ್ವದ 7ನೇ ಬ್ಯಾಟ್ಸ್‌ಮನ್‌ ಆಗಿದ್ದಾರೆ. ಈ ಮೂಲಕ ಗ್ಯಾರಿ ಸೋಬರ್ಸ್‌, ರವಿ ಶಾಸ್ತ್ರಿ, ಹರ್ಷಲ್‌ ಗಿಬ್ಸ್‌, ಯುವರಾಜ್‌ ಸಿಂಗ್‌, ರಾಸ್‌ ವೈಟ್ಲೀ ಹಾಗೂ ಅಫಘಾನಿಸ್ತಾನದ ಹಝರತುಲ್ಲಾ ಝಜಾಯ್‌ ಅವರನ್ನು ಹೊಂದಿರುವ ಎಲೈಟ್‌ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top