fbpx
ಸಮಾಚಾರ

ಐಪಿಎಲ್ 2020 ಟೂರ್ನಿ ಯಾವಾಗ ಆರಂಭ ಅನ್ನೋ ಕುತೂಹಲಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಉತ್ತರ!

ಇಂಡಿಯನ್ ಪ್ರೀಮಿಯರ್ ಲೀಗ್‌ 13ನೇ ಆವೃತ್ತಿಯು ಮುಂದಿನ ವರ್ಷ ಮಾರ್ಚ್ 29 ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಶುರುವಾಗಲಿದ್ದು, ಆತಿಥೇಯ ಹಾಗೂ ನಾಲ್ಕು ಬಾರಿಯ ಚಾಂಪಿಯನ್ಸ್‌ ಮುಂಬೈ ಇಂಡಿಯನ್ಸ್ ತನ್ನ ತವರು ನೆಲದಲ್ಲಿ ಅಭಿಯಾನ ಆರಂಭಿಸಲಿದೆ.

ಐಪಿಎಲ್‌ 2020 ಟೂರ್ನಿಯ ಆರಂಭಿಕ ದಿನಾಂಕವನ್ನು ಮಾರ್ಚ್ 29ಕ್ಕೆ ನಿಗದಿಪಡಿಸಲಾಗಿದ್ದು ಹಾಲಿ ಚಾಂಪಿಯನ್ಸ್‌ ಮುಂಬೈ ತಂಡಕ್ಕೆ ವಾಂಖೆಡೆಯಲ್ಲಿ ತನ್ನ ಮೊದಲ ಪಂದ್ಯವನ್ನಾಡುವ ಅವಕಾಶ ಲಭ್ಯವಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿರುವ ಡೆಲ್ಲಿ ಕ್ಯಾಪಿಟಲ್ಸ್ ಅಧಿಕಾರಿಯೊಬ್ಬರು ಐಪಿಎಲ್‌ 2020 ಟೂರ್ನಿಯ ಆರಂಭಿಕ ದಿನಾಂಕವನ್ನು ಮಾರ್ಚ್ 29ಕ್ಕೆ ನಿಗದಿಪಡಿಸಲಾಗಿದ್ದು ಹಾಲಿ ಚಾಂಪಿಯನ್ಸ್‌ ಮುಂಬೈ ತಂಡಕ್ಕೆ ವಾಂಖೆಡೆನಲ್ಲಿ ತನ್ನ ಮೊದಲ ಪಂದ್ಯವನ್ನಾಡುವ ಅವಕಾಶ ಲಭ್ಯವಾಗಿದೆ ಎಂದಿದ್ದಾರೆ. “ಐಪಿಎಲ್‌ನ 2020 ಆವೃತ್ತಿಯು ಮಾರ್ಚ್ 29 ರಂದು ವಾಂಖೆಡೆದಲ್ಲಿ ಪ್ರಾರಂಭವಾಗಲಿದೆ ಎಂದು ನಮಗೆ ತಿಳಿಸಲಾಗಿದೆ,” ಎಂದು ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಅಧಿಕಾರಿ ಹೇಳಿದ್ದಾರೆ.

ಈಗಾಗಲೇ ಐಪಿಎಲ್ ಗರ್ವನಿಂಗ್ ಕೌನ್ಸಿಲ್ ಈ ಎರಡು ಸರಣಿಗಳ ಕುರಿತು ಗಮನ ಹರಿಸಿದೆ. ಹೀಗಾಗಿ ಎಪ್ರಿಲಿಲ್ 1 ರಿಂದ ಐಪಿಎಲ್ ಟೂರ್ನಿ ಆಯೋಜಿಸಲು ಪ್ಲಾನ್ ರೆಡಿ ಮಾಡಿದೆ. ಇದುವರೆಗೂ ಐಪಿಎಲ್ ಗವರ್ನಿಂಗ್ ಗೌನ್ಸಿಲ್ ಅಥವಾ ಬಿಸಿಸಿಐ ಅಧೀಕೃತ ದಿನಾಂಕ ಪ್ರಕಟಿಸಿಲ್ಲ. ಆದರೆ ಡೆಲ್ಲಿ ಕ್ಯಾಪಿಟಲ್ಸ್ ಮಾರ್ಚ್ 29 ಎಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top