fbpx
ಸಮಾಚಾರ

ಹೊಸ ಸಂಸತ್ ಭವನ ನಿರ್ಮಾಣಕ್ಕೆ ಕೇಂದ್ರ ಚಿಂತನೆ: 75ನೇ ಸ್ವಾತಂತ್ರ್ಯ ದಿನಕ್ಕೆ ಉಡುಗೊರೆ!

ನವದೆಹಲಿಯ ಸಂಸತ್‌ ಭವನ ಮತ್ತು ಅದನ್ನು ಒಳಗೊಂಡಿರುವ ಸೆಂಟ್ರಲ್‌ ವಿಸ್ತಾ ಪ್ರದೇಶಕ್ಕೆ ಹೊಸ ರೂಪ ಕೊಡುವ ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆಯ ಯೋಜನೆಯ ಒಂದಿಷ್ಟುಮಾಹಿತಿಗಳು ಹೊರಬಿದ್ದಿವೆ. 75ನೇ ಸ್ವಾತಂತ್ರ್ಯ ದಿನಾಚರಣೆಗೆ ಜನತೆಗೆ ಭರ್ಜರಿ ಉಡುಗೊರೆ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದ್ದರು. ಈ ಹಿನ್ನೆಲೆಯಲ್ಲಿ ತ್ರಿಕೋನಾಕಾರದ ಮೂರು ಗೋಪುರಗಳ ಹೊಸ ಸಂಸತ್ ಭವನ ನಿರ್ಮಾಣಕ್ಕೆ ಚಿಂತನೆ ನಡೆಸಿದೆ ಎಂದು ವರದಿಗಳು ತಿಳಿಸಿವೆ.

ಲೋಕಸಭೆಯಲ್ಲಿ 1000 ಜನಕ್ಕೆ ಸ್ಥಳಾವಕಾಶ ಸೃಷ್ಟಿಸಲಾಗುತ್ತದೆ. ರಾಜ್ಯಸಭೆ, ಸೆಂಟ್ರಲ್ ಹಾಲ್ ಇರಲಿವೆ. ಇದರ ಜೊತೆಗೆ ಪ್ರಧಾನಮಂತ್ರಿಗಳಿಗೆ ಹೊಸ ನಿವಾಸ, ಭೂಗತ ರಸ್ತೆ, ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷವಾಗುವ ಹಿನ್ನೆಲೆಯಲ್ಲಿ ಒಂದು ಐತಿಹಾಸಿಕ ಸ್ಮಾರಕ ಕೂಡ 2024ರ ವೇಳೆಗೆ ನಿರ್ಮಾಣವಾಗಲಿವೆ. ಹಳೆ ಸಂಸತ್ ಕಟ್ಟಡ ಹಾಗೆಯೇ ಇರಲಿದೆ ಎಂದು ಹೇಳಲಾಗುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆ ಇದಾಗಿದ್ದು, ಕಳೆದ ಸೆ.13ರಂದೇ ಇದಕ್ಕೆ ಅನುಮೋದನೆ ದೊರಕಿತ್ತು. ಈ ಯೋಜನೆಯ ಕುತೂಹಲಕರ ಮಾಹಿತಿಗಳು ಈಗ ಲಭಿಸಿವೆ. ಗುಜರಾತ್‌ನ ಎಚ್‌ಸಿಪಿ ಡಿಸೈನ್‌ ಕಂಪನಿಗೆ ಈ ಯೋಜನೆಯ ವಿನ್ಯಾಸದ ಟೆಂಡರ್‌ ಲಭಿಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top