fbpx
ಸಮಾಚಾರ

ಅಮೇಜಾನ್, ಫ್ಲಿಪ್‍ಕಾರ್ಟ್‍ಗೆ ಸೆಡ್ಡು: ಟೆಲಿಕಾಂ ಆಯ್ತು ಈಗ ಇ-ಕಾಮರ್ಸ್​ಗೂ ಲಗ್ಗೆ ಇಟ್ಟ ಜಿಯೋ, ಉಚಿತ ಡೆಲಿವರಿ

ಜಿಯೋ ಕಂಪನಿ ಆರಂಭಿಸಿ ಕೆಲವೇ ತಿಂಗಳುಗಳಲ್ಲಿ ಅನೇಕ ಗ್ರಾಹಕರನ್ನು ತನ್ನತ್ತ ಸೆಳೆದು ಟೆಲಿಕಾಂ ಕಂಪನಿಗಳಿಗೆ ಸೆಡ್ಡು ಹೊಡೆದಿದ್ದ ರಿಲಯನ್ಸ್​ ಇಂಡಸ್ಟ್ರಿ ಲಿಮಿಟೆಡ್​(ಆರ್​ಐಎಲ್​) ಇದೀಗ ತನ್ನ ಗಮನವನ್ನು ಇ-ಕಾಮರ್ಸ್​ ಕಡೆ ನೆಟ್ಟಿದ್ದು, ಅಮೆಜಾನ್​ ಮತ್ತು ಫ್ಲಿಫ್​ಕಾರ್ಟ್​ನಂತಹ ದೈತ್ಯ ಕಂಪನಿಗಳಿಗೆ ಸವಾಲೆಸೆಯಲು ಸಜ್ಜಾಗಿದೆ.

ಇ ಕಾಮರ್ಸ್ ಸಂಸ್ಥೆ ಆರಂಭಿಸಿ ಫ್ಲಿಪ್‍ಕಾರ್ಟ್ ಮತ್ತು ಅಮೇಜಾನ್ ಕಂಪನಿಗಳಿಗೆ ಸವಾಲೊಡ್ಡಲು ಜಿಯೋ ಸಿದ್ಧವಾಗಿದೆ. ಈಗಾಗಲೇ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿದ್ದು ಇಷ್ಟು ದಿನ ಟೆಲಿಕಾಂ ವಲಯದಲ್ಲಿ ಕ್ರಾಂತಿ ಮಾಡಿದ್ದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಕಂಪನಿ ಈಗ ಇ ಕಾಮರ್ಸ್ ವಲಯದಲ್ಲೂ ಆಫರ್ ಗಳನ್ನು ಬಿಡುವ ಮೂಲಕ ಹೊಸ ಇತಿಹಾಸ ಬರೆಯಬಹುದು ಎಂಬ ವಿಶ್ಲೇಷಣೆ ಕೇಳಿಬಂದಿದೆ.

ನೆನ್ನೆ ಮುಂಬೈ, ಥಾಣೆ ಹಾಗೂ ಕಲ್ಯಾಣದಲ್ಲಿ ಮೊದಲ ಇ-ಜಿಯೋ ಮಾರ್ಟ್ ವ್ಯವಸ್ಥೆಯನ್ನು ಉದ್ಘಾಟಿಸಲಾಗಿದ್ದು, ಮುಂದಿನ ದಿನಗಳಲ್ಲಿ ದೇಶಾದ್ಯಂತ ಜಿಯೋ ಮಾರ್ಟ್’ಗಳನ್ನು ತೆರೆಯಲಾಗುವುದು ಜಿಯೋ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಇ- ಕಾಮರ್ಸ್‌ ಕ್ಷೇತ್ರದಲ್ಲಿ ಪಾರುಪತ್ಯ ಮೆರೆಯುತ್ತಿರುವ ಫ್ಲಿಪ್‌ಕಾರ್ಟ್‌ ಮತ್ತು ಅಮೆಜಾನ್‌ಗೆ ಪೈಪೋಟಿಯಾಗಿ ಇ- ಕಾಮರ್ಸ್‌ನ ದೈತ್ಯ ಸಂಸ್ಥೆಯನ್ನು ನಿರ್ಮಿಸುವುದಾಗಿ ಮುಖೇಶ್ ಅಂಬಾನಿ ಈ ಹಿಂದೆಯೇ ಘೋಷಿಸಿದ್ದರು. ಅದರಂತೆ ಇಂದು ಮೂರು ಮಳಿಗೆಗಳನ್ನು ತೆರೆಯಲಾಗಿದೆ.

ಕನಿಷ್ಠ ಆರ್ಡರ್​ಗೂ ಉಚಿತ ಹೋಮ್​ ಡೆಲಿವರಿ, ಉತ್ಪನ್ನ ಹಿಂದಿರುಗಿಸಲು ಯಾವುದೇ ಪ್ರಶ್ನೆಯನ್ನು ಕೇಳದಿರುವುದು, ವೇಗದ ಡೆಲಿವರಿ ಭರವಸೆ ಸೇರಿದಂತೆ ಅನೇಕ ಆಫರ್​ಗಳನ್ನು ಜಿಯೋಮಾರ್ಟ್​ ಅಧಿಕೃತ ವೆಬ್​ಸೈಟ್​ನಲ್ಲಿ ಹೈಲೈಟ್ಸ್​ ಮಾಡಲಾಗಿದೆ. ಅಲ್ಲದೆ, ಇದು ದೇಶದ ಹೊಸ ಅಂಗಡಿ ಎಂದು ಹೇಳುವ ಮೂಲಕ ಅಮೆಜಾನ್​ ಮತ್ತು ಫ್ಲಿಫ್​ಕಾರ್ಟ್​ ಗ್ರಾಹಕರನ್ನು ತನ್ನತ್ತ ಸೆಳೆಯುವ ಅನೇಕ ಪ್ರಯತ್ನಗಳಿಗೆ ಕಂಪನಿ ಕೈಹಾಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top