fbpx
ಸಮಾಚಾರ

ಫೆಬ್ರವರಿಯಲ್ಲಿ ನಟ ಚೇತನ್ ಮದುವೆ: ಪ್ರೀತಿಸಿದ ಹುಡುಗಿ ಜೊತೆ ಅನಾಥಾಶ್ರಮದಲ್ಲಿ ಸರಳ ವಿವಾಹ!

2007 ರಲ್ಲಿ ‘ಆ ದಿನಗಳು’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಭರವಸೆ ಮೂಡಿಸಿದ ನಟ ಚೇತನ್ ಕುಮಾರ್. ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗುತ್ತಿದ್ದಾರೆ. ಎರಡು ವರ್ಷಗಳಿಂದ ಪ್ರೀತಿಸುತ್ತಿರುವ ಹುಡುಗಿಯನ್ನು ಶಾಸ್ತ್ರೋಕ್ತವಾಗಿ ಮದುವೆಯಾಗಲು ಚೇತನ್ ಅವರು ಸಿದ್ಧತೆ ನಡೆಸುತ್ತಿದ್ದಾರೆ. ಅಸ್ಸಾಂ ಮೂಲದ ಯುವತಿಗೆ ಫ್ಲಾಟ್ ಆಗಿರುವ ಚೇತನ್ ಮುಂದಿನ ವರ್ಷ ಫೆಬ್ರವರಿ 2 ರಂದು ಸರಳವಾಗಿ, ಅನಾಥಾಶ್ರಮದಲ್ಲಿ ಮದುವೆಯಾಗಲು ರೆಡಿಯಾಗಿದ್ದಾರೆ.

ಈ ಬಗ್ಗೆ ಸ್ವತಃ ಚೇತನ್ ಅವರೇ ಖಾಸಗಿ ವಾಹಿನಿಯೊಂದಕ್ಕೆ ಪ್ರತಿಕ್ರಿಯೆ ನೀಡಿದ್ದು ತಾವು ಮದುವೆ ಆಗುತ್ತಿರುವ ನಿಜ ಎಂದು ಹೇಳಿದ್ದಾರೆ. ಮದುವೆ ವಿಚಾರದ ಬಗ್ಗೆ ಮಾತನಾಡಿರುವ ಚೇತನ್ “ಹೌದು ನಾನು ಮದುವೆಯಾಗುತ್ತಿರುವುದು ನಿಜ, ನಮ್ಮದು ಲವ್ ಮ್ಯಾರೇಜ್, ನಾನು ಮದುವೆ ಆಗುತ್ತಿರುವ ಹುಡುಗಿಗೆ ಕನ್ನಡ ಬರೊಲ್ಲಾ.. ನಾನೇ ಕನ್ನಡ ಕಲಿಸಿದ್ದೇನೆ.. ನನಗೆ ಕನ್ನಡ ಭಾಷೆಯ ಮೇಲೆ ಅಪಾರವಾದ ಪ್ರೀತಿ ಹಾಗೆಯೆ ಅವರಿಗೂ ಕೂಡ ಸಮಾಜದ ಮೇಲೆ ಬಹಳಷ್ಟು ಕಾಳಜಿ ಇದೆ. ಸಾಮಾಜಿಕ ವಿಚಾರಗಳ ಬಗ್ಗೆ ಅವರು ಕೂಡ ಹೋರಾಡ್ತಾರೆ. ಅದಕ್ಕೆ ಅವರು ಇಷ್ಟವಾಗಿದ್ದಾರೆ.

“ಸದ್ಯದಲ್ಲಿಯೇ ಹುಡುಗಿ ಯಾರು ಎಂಬ ವಿಚಾರವನ್ನು ಹೇಳುತ್ತೇನೆ. ಇನ್ನು ನಾವು ಮದುವೆಯಾದರೆ ತುಂಬಾ ಸರಳವಾಗಿ ಇನ್ನೊಬ್ಬರಿಗೆ ಮಾದರಿಯಾಗೋ ರೀತಿ ಮದುವೆ ಆಗ್ತೀವಿ. ಅದ್ಧೂರಿಯಾಗಿ ಆಡಂಬರದಿಂದ ಮದುವೆ ಮಾಡಿಕೊಳ್ಳುವುದಿಲ್ಲ” ಎಂದು ಚೇತನ್ ಅವರು ಹೇಳಿದ್ದಾರೆ. ಆದರೆ ತಾವು ಮದುಇವೆಯಾಗುತ್ತಿರುವ ಹುಡುಗಿ ಯಾರು ಎಂಬ ವಿಚಾರವನ್ನು ಮಾತ್ರ ಚೇತನ್ ಹೇಳಲಿಲ್ಲ. ಇನ್ನು ಕೆಲವೇ ದಿನಗಳಲ್ಲಿ ಹುಡುಗಿಯ ಬಗ್ಗೆ ತಿಳಿಸುತ್ತೇನೆ ಎಂದು ಹೇಳಿದರು‌.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top