fbpx
ಸಮಾಚಾರ

2020ರಲ್ಲಿ ಯುವರಾಜ್ ಕುಮಾರ್ ಚಿತ್ರರಂಗಕ್ಕೆ ಎಂಟ್ರಿ ಖಚಿತ?

ಡಾ. ರಾಜ್‌ಕುಮಾರ್ ಕುಟುಂಬವೇ ಒಂದು ಕಲಾವಿದರ ಕುಟುಂಬ. ಡಾ.ರಾಜ್ ಬಳಿಕ ಅವರ ಮಕ್ಕಳು ನಂತರ ಈಗ ಮೊಮ್ಮಕ್ಕಳು ಚಿತ್ರರಂಗದಲ್ಲಿ ಮೆರೆಯುತ್ತಿದ್ದಾರೆ. ಈಗಾಗಲೇ ರಾಘವೇಂದ್ರ ರಾಜಕುಮಾರ್ ಅವರ ಹಿರಿಯ ಪುತ್ರ ವಿನಯ್​ ರಾಘವೇಂದ್ರ ರಾಜ್​ ಕುಮಾರ್​ ಬೆಳ್ಳಿತೆರೆಯಲ್ಲಿ ಮಿಂಚುತ್ತಿದ್ದು ಇದೀಗ ರಾಘಣ್ಣನ ಎರಡನೇ ಪುತ್ರ ಕೂಡ ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ.

ಕೆಜಿಎಫ್ ಸಹ ನಿರ್ದೇಶಕ ಪುನೀತ್ ನಿರ್ದೇಶಿಸುತ್ತಿರುವ ಚಿತ್ರವೊಂದರಲ್ಲಿ ರಾಘವೇಂದ್ರ ರಾಜ್ ಕುಮಾರ್ ಅವರ ಪುತ್ರ ಯುವರಾಜ್ ಕುಮಾರ್ ಅವರು ಅಭಿನಯಿಸುತ್ತಿದ್ದಾರೆಂದು ತಿಳಿದುಬಂದಿದೆ. ಕೆಜಿಎಪ್ ಚಿತ್ರದಲ್ಲಿ ಸಹ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದ ಪುನೀತ್ ಅವರು, ಯುವರಾಜ್ ಕುಮಾರ್ ಜೊತೆಗೆ ಚಿತ್ರವನ್ನು ಮಾಡುವ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಹೊರಹೊಮ್ಮಲಿದ್ದಾರೆ.

‘ಕೆ.ಜಿ.ಎಫ್​’ ಚಿತ್ರದಲ್ಲಿ ಪ್ರಶಾಂತ್​ ನೀಲ್​ ಅವರ ಬಳಿ ಸಹ ನಿರ್ದೇಶಕನಾಗಿ ಕೆಲಸ ಮಾಡಿದ ಅನುಭವ ಇರುವ ಪುನೀತ್​ ಈ ಹೊಸ ಸಿನಿಮಾಗೆ ಈಗಾಗಲೇ ಸ್ಟೋರಿ ಬೋರ್ಡ್​ ಸಿದ್ಧತೆಯಲ್ಲಿ ತೊಡಗಿದ್ದಾರಂತೆ​. ಎಲ್ಲ ಸರಿಹೋದರೆ ಮುಂದಿನ ವರ್ಷ ಸಿನಿಮಾ ಸೆಟ್ಟೇರಲಿದೆ ಎನ್ನಲಾಗುತ್ತಿದೆ.

​ಯುವರಾಜ್​ ಕುಮಾರ್​ ಸಖತ್​ ಆಗಿ ಡಾನ್ಸ್​ ಮಾಡ್ತಾರೆ, ಫುಟ್ಬಾಲ್​ ಹಿಡಿದು ಮಾಡುವ ಸ್ಟಂಟ್​ ಹಾಗೂ ಹಲವಾರು ರೀತಿಯ ಆ್ಯಕ್ಷನ್​ಗಳನ್ನು ಮಾಡುವ ಮೂಲಕ ಈಗಾಗಲೇ ಅಭಿಮಾನಿಗಳನ್ನು ಸಂಪಾಸಿಕೊಂಡಿದ್ದಾರೆ ಯುವರಾಜ್​. ನಟನೆಗಾಗಿ ಸಾಕಷ್ಟು ತರಬೇತಿಯನ್ನು ಪಡೆದುಕೊಂಡಿರುವ ಯುವರಾಜ್ ಇದಕ್ಕಾಗಿ ಮಾರ್ಷಲ್ ಆರ್ಟ್ಸ್, ಜಿಮ್ನಾಸ್ಟಿಕ್, ಡ್ಯಾನ್ಸ್, ಫಿಟ್ನೆಸ್ ಕಡೆ ಗಮನ ಹರಿಸುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top