fbpx
ಸಮಾಚಾರ

ಸುರಕ್ಷಿತ ಬೆಂಗಳೂರಿಗೆ ಕೈಜೋಡಿಸಿದ ರಾಕಿಂಗ್ ಸ್ಟಾರ್: ನ್ಯೂ ಇಯರ್ ಅಂತ ಎಣ್ಣೆ ಏಟಲ್ಲಿ ಗಾಡಿ ಓಡಿಸುವವರಿಗೆ ಯಶ್ ಕೊಟ್ಟ ಸಂದೇಶವಿದು!

ರಾಕಿಂಗ್ ಸ್ಟಾರ್ ಯಶ್ ಹೊಸ ವರ್ಷಕ್ಕೆ ವಿಡಿಯೋ ಮೂಲಕ ತಮ್ಮ ಅಭಿಮಾನಿಗಳಿಗೆ ಸಂದೇಶವೊಂದನ್ನು ನೀಡಿದ್ದಾರೆ. ಯಶ್ ಹೊಸ ವರ್ಷಕ್ಕೆ ಪೊಲೀಸರ ಜೊತೆಗೂಡಿ ಮದ್ಯಪಾನ ಮಾಡಿ ವಾಹನ ಓಡಿಸುವವರ ವಿರುದ್ಧ ಅಭಿಯಾನ ಶುರು ಮಾಡಿದ್ದಾರೆ. ಮದ್ಯಪಾನ ಮಾಡಿ ವಾಹನ ಓಡಿಸಬಾರದು, ತಮ್ಮ ಕುಟುಂಬದವರು ಪ್ರೀತಿ ಪಾತ್ರರು ನಿಮಗೊಸ್ಕರ ಕಾಯುತ್ತಿರುತ್ತಾರೆ ಎಂದು ಯಶ್ ಸಂದೇಶ ನೀಡಿದ್ದಾರೆ.

ಹೊಸವರ್ಷ ಪ್ರತಿ ವರ್ಷ ಬರುತ್ತದೆ. ಹೊಸ ವರ್ಷದ ಸಂಭ್ರಮದಲ್ಲಿ ಎಲ್ಲರೂ ಹೊಸ ಗುರಿ, ಕನಸುಗಳೊಂದಿಗೆ ಹೊಸ ಜೀವನವನ್ನು ಆರಂಭಿಸುವ ಉತ್ಸಾಹದಲ್ಲಿರುತ್ತಾರೆ. ಹಾಗಂತ ನೀವೇನಾದರೂ ಯಾಮಾರಿ ಹೊಸ ವರ್ಷದ ಪಾರ್ಟಿಯಲ್ಲಿ ಕುಡಿದು ಗಾಡಿ ಓಡಿಸಿದರೆ ನೀವು ಪಡೆದುಕೊಳ್ಳುವುದಕ್ಕಿಂತ ಕಳೆದುಕೊಳ್ಳೋದೇ ಹೆಚ್ಚು. ಒಂದು ದಿನ ಪಾರ್ಟಿ ಮಾಡಿ ಖುಷಿಯಾಗಿರುವ ಜೋಷ್​ನಲ್ಲಿ ನೀವು ಕುಡಿದು ಗಾಡಿ ಓಡಿಸಿದರೆ ಅನಾಹುತವಾಗುತ್ತದೆ. ನಿಮಗೇನಾದರೂ ಹೆಚ್ಚು ಕಡಿಮೆ ಆದರೆ ನಿಮ್ಮನ್ನು ನಂಬಿಕೊಂಡಿರುವ ಜೀವಗಳು ಅನಾಥವಾಗುತ್ತವೆ ಎಂದು ನಟ ಯಶ್ ಹೇಳಿದ್ದಾರೆ.

ಪ್ರತಿವರ್ಷದ ಮುನ್ನ ದಿನದ ಸಂಭ್ರಮಾಚರಣೆ ಪೊಲೀಸ್ ಇಲಾಖೆಗೆ ಸವಾಲೇ ಆಗಿದೆ. ಸಂಭ್ರಮಾಚರಣೆ ಅಹಿಕತರ ಆಗಬಾರದೆಂಬ ಉದ್ದೇಶದಿಂದ ಮದ್ಯಪಾನ ಮಾಡಿ ವಾಹನ ಚಲಾಯಿಸದಂತೆ ನಗರ ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಮನವಿ ಮಾಡಿದೆ. ಇವರೊಂದಿಗೆ ಚಿತ್ರನಟ ಯಶ್ ಕೂಡ ಕೈ ಜೋಡಿಸಿರುವುದು ವಿಶೇಷವಾಗಿದೆ. ಸಾರ್ವಜನಿಕ ವಾಹನ, ಟ್ಯಾಕ್ಸಿ ಬಳಸಬೇಕು. ವೈಯಕ್ತಿಕ ವಾಹನ ಬಳಸುವುದು ಬೇಡ ಎಂದು ಕಿವಿ ಮಾತು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top