fbpx
ಸಮಾಚಾರ

ಶಿವಕುಮಾರ ಸ್ವಾಮೀಜಿಯಿಂದ ಪೇಜಾವರ ಶ್ರೀವರೆಗೆ: 2019ರಲ್ಲಿ ನಮ್ಮನ್ನಗಲಿದ ಗಣ್ಯರಿವರು!

ಸಾವು ಭಾವನಾತ್ಮಕವಾಗಿ ಸಮಾಜವನ್ನು ಅಲ್ಲಾಡಿಸಿ ಬಿಡುತ್ತದೆ. ಈ ವರ್ಷವಂತೂ ಹಲವು ಗಣ್ಯರು, ಸಾಧಕರ ಅಕಾಲಿಕ ನಿಧನ ಆಘಾತವನ್ನೇ ತಂದಿತು. ಈ ವರ್ಷ ನಮ್ಮನ್ನು ಅಗಲಿದವರ ದೊಡ್ಡ ಪಟ್ಟಿಯೇ ಇದೆ. ಈ ವರ್ಷ ಇಹಲೋಕ ತ್ಯಜಿಸಿದವರು ಯಾರು? ಅವರ ಸಾಧನೆಗಳೇನು? ಸಂಕ್ಷಿಪ್ತ ವಿವರಗಳು ಇಲ್ಲಿವೆ.

ಡಾ.ಶಿವಕುಮಾರ ಸ್ವಾಮೀಜಿ:
ನಡೆದಾಡುವ ದೇವರು ಎಂದೇ ಪ್ರಸಿದ್ಧರಾಗಿದ್ದ ಶತಾಯುಷಿ, ತುಮಕೂರಿನ ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿಗಳನ್ನು ನಾವೆಲ್ಲಾ ಕಳೆದುಕೊಂಡಿದ್ದು ಇದೇ ವರ್ಷ. ಜನವರಿ 21, 2019ರಂದು ಅವರು ತಮ್ಮ ಇಹಲೋಕದ ಪಯಣ ಮುಗಿಸಿದರು.

ಮನೋಹರ ಪರಿಕ್ಕರ್- ಮಾರ್ಚ್ 17
ಬಿಜೆಪಿ ಯ ಪ್ರಮುಖ ನಾಯಕರಾಗಿದ್ದ ಮನೋಹರ ಪರಿಕ್ಕರ್ ಅವರು ಮಾರ್ಚ್‌ 17 ರಂದು ನಿಧನರಾದರು. ಅವರಿಗೆ 63 ವರ್ಷ ವಯಸ್ಸಾಗಿತ್ತು.

ಶೀಲಾ ದೀಕ್ಷಿತ್- ಜುಲೈ 20
ಕಾಂಗ್ರೆಸ್ ಹಿರಿಯ ನಾಯಕಿ ಮತ್ತು ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಜುಲೈ 20 ರಂದು ನಿಧನ ಹೊಂದಿದರು.

ವಿಜಿ ಸಿದ್ದಾರ್ಥ್- ಜುಲೈ 31
ಜುಲೈ 31ರಂದಿ ಕೆಫೆ ಕಾಫಿ ಡೇ ಮಾಲಿಕ ವಿಜಿ ಸಿದ್ಧಾರ್ಥ್‌ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾದರು.

ಮಾತೆ ಮಹಾದೇವಿ
ಕೂಡಲ ಸಂಗಮದ ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಮಾರ್ಚ್ 14ರಂದು ಲಿಂಗೈಕೈರಾದರು.

ಗಿರೀಶ್‌ ಕಾರ್ನಾಡ್‌
ಜ್ಞಾನಪೀಠ ಪುರಸ್ಕೃತ ಕನ್ನಡದ ಶ್ರೇಷ್ಠ ಸಾಹಿತಿ ಗಿರೀಶ್‌ ಕಾರ್ನಾಡ್‌ ಜೂನ್‌ 10ರಂದು ನಿಧನರಾದರು.

ಮಾಸ್ಟರ್​ ಹಿರಣ್ಣಯ್ಯ
ಹಿರಿಯ ರಂಗಕರ್ಮಿ ಮಾಸ್ಟರ್​ ಹಿರಣ್ಣಯ್ಯ ಅವರು 2 May 2019ರಂದು ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಬಿಜಿಎಸ್​​​ ಆಸ್ಪತ್ರೆಯಲ್ಲಿ ತಮ್ಮ 85 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.

ಸುಷ್ಮಾಸ್ವರಾಜ್- ಆಗಸ್ಟ್ 6
ಭಾರತ ಕಂಡ ದಿಟ್ಟ ಮಹಿಳಾ ರಾಜಕಾರಣಿಗರಲ್ಲಿ ಒಬ್ಬರಾದ ಸುಷ್ಮಾ ಸ್ವರಾಜ್ ಅವರು ಆಗಸ್ಟ್ 6 ರಂದು ಅನಾರೋಗ್ಯದಿಂದ ನಿಧನರಾದರು. ಅವರಿಗೆ 67 ವರ್ಷ ವಯಸ್ಸಾಗಿತ್ತು.

ಪೇಜಾವರ ಶ್ರೀ:
ತೀವ್ರ ಉಸಿರಾಟದ ಸಮಸ್ಯೆ ಮತ್ತು ನ್ಯುಮೋನಿಯಾದಿಂದ ಬಳಲುತ್ತಿದ್ದ ಪೇಜಾವರ ಅಧೋಕ್ಷಜ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಇತ್ತೀಚಿಗಷ್ಟೇ ನಮ್ಮನಗಲಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top