fbpx
ಸಮಾಚಾರ

ಸಿಕ್ಕಾಪಟ್ಟೆ ಹರಿದಾಡಿದ್ದ ‘ಆ ಸುದ್ದಿ’ ಸುಳ್ಳು ಎಂದ್ರು ಕಿಚ್ಚ ಸುದೀಪ್! ಏನದು?

ಸ್ಯಾಂಡಲ್​ವುಡ್​ ನಟ ಕಿಚ್ಚ ಸುದೀಪ್​ ತಮಿಳು ಚಿತ್ರವೊಂದರಲ್ಲಿ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಈ ಸುದ್ದಿ ವೈರಲ್​​ ಆಗುತ್ತಿದ್ದಂತೆ ನಟ ಕಿಚ್ಚ ಸುದೀಪ್​​ ಸ್ಪಷ್ಟನೆ ನೀಡಿದ್ದಾರೆ.

ತಮಿಳಿನ ‘ಮಾನಾಡು‘ ಸಿನಿಮಾದಲ್ಲಿ ವಿಲನ್​ ರೋಲ್​ಗಾಗಿ ಸುದೀಪ್​ರನ್ನು ಅಪ್ರೋಚ್​ ಮಾಡಲಾಗಿದೆ ಎಂದು ಸುದ್ದಿ ಹರಿದಾಡಿತ್ತು. ಆದರೆ ಈ ಸುದ್ದಿ ಸ್ಯಾಂಡಲ್​ವುಡ್​ನಲ್ಲಿ ಕೇಳಿ ಬರುತ್ತಿದ್ದಂತೆ, ಇದು ಸುಳ್ಳು ಸುದ್ದಿಯೆಂದು ಕಿಚ್ಚ ಟ್ವೀಟ್​ ಮೂಲಕ ಸ್ಪಷ್ಟಪಡಿಸಿದ್ದಾರೆ.

Wrong news…. https://t.co/hgNHGinPUV— Kichcha Sudeepa (@KicchaSudeep) December 27, 2019

ಸಿಂಬು ಎದುರು ಸುದೀಪ್‌ ವಿಲನ್‌ ಆಗಿ ನಟಿಸಿದರೆ ಸೂಕ್ತ ಎಂಬ ಅಭಿಪ್ರಾಯ ‘ಮಾನಾಡು’ ಚಿತ್ರತಂಡದವರ ಅಭಿಪ್ರಾಯವಾಗಿತ್ತಂತೆ. ಹಾಗಾಗಿ ಕಿಚ್ಚನ ಜತೆ ಒಂದು ಸುತ್ತಿನ ಮಾತುಕತೆ ನಡೆದಿದ್ದು, ಗ್ರೀನ್‌ ಸಿಗ್ನಲ್‌ ಕೂಡ ಸಿಕ್ಕಿದೆ ಎಂಬ ಸುದ್ದಿ ಹರಡುತ್ತಿದ್ದಂತೆಯೇ ಅಭಿಮಾನಿಗಳೂ ಖುಷಿಯಾದರು. ಸಾಮಾಜಿಕ ಜಾಲತಾಣಗಳಲ್ಲಿ ಇದರ ಬಗ್ಗೆ ಚರ್ಚೆ ಶುರುವಾಯಿತು. ಇದನ್ನು ಕಂಡ ಸುದೀಪ್‌ ‘ಇದೆಲ್ಲ ಸುಳ್ಳು ಸುದ್ದಿ’ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಈ ಬಗ್ಗೆ ಸಿಂಬು ಅಥವಾ ‘ಮಾನಾಡು’ ತಂಡದ ಯಾರೊಬ್ಬರೂ ಸ್ಪಷ್ಟನೆ ನೀಡಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top