fbpx
ಸಮಾಚಾರ

ಮತ್ತೆ ಸಿನಿಮಾ ನಿರ್ದೇಶನಕ್ಕಿಳಿದ ನಟ ಸುದೀಪ್

ನಟ ಕಿಚ್ಚ ಸುದೀಪ್ ಹೊಸ ವರ್ಷಕ್ಕೆ ಹೊಸ ಸುದ್ದಿಯೊಂದನ್ನು ಅಭಿಮಾನಿಗಳೆದುರು ಬಿಚ್ಚಿಟ್ಟಿದ್ದಾರೆ. 2019ರಲ್ಲಿ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ನಟಿಸುವ ಮೂಲಕ ಸದ್ದು ಮಾಡಿದ್ದ ಕಿಚ್ಚ ಸುದೀಪ್ ನೂತನ ವರ್ಷಕ್ಕೂ ಮುಂಚೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಏನದು ಅಂತೀರಾ? ಮುಂದೆ ಓದಿ.

Wil be announcing th details of my direction n th Tec team soon.
Happy to be doin what I always have luved to do ,,after 7 years gap.
I’m sure all u frnzz r wth me on this… wil not disappoint u.
🤗🤗🥂— Kichcha Sudeepa (@KicchaSudeep) December 29, 2019

ಕೆಲವು ದಿನಗಳಿಂದ ಸುದೀಪ್ ಮತ್ತೆ ಡೈರೆಕ್ಟರ್ ಕ್ಯಾಪ್ ಧರಿಸಿಕೊಂಡು ಸಿನಿಮಾ ನಿರ್ದೇಶನ ಮಾಡಲಿದ್ದಾರೆ ಎಂಬ ಮಾತು ಗಾಂಧಿನಗರದಲ್ಲಿ ಕೇಳಿ ಬರುತ್ತಿತ್ತು. ಇದೀಗ ಈ ಬಗ್ಗೆ ಸ್ವತಃ ಸುದೀಪ್ ಅವರೇ ಟ್ವೀಟ್ ಮಾಡುವ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ.

ಕೊನೆಯ ಬಾರಿ ಸೂಪರ್ ಹಿಟ್ ‘ಮಾಣಿಕ್ಯ’ ನಿರ್ದೇಶನ ಮಾಡಿದ್ದ ಸುದೀಪ್ ಆ ನಂತರ ನಿರ್ದೇಶನಕ್ಕೆ ಸುದೀಪ್‌ ಬ್ರೇಕ್ ನೀಡಿದ್ದರು. ಆನಂತರ ನಟನೆಗೆ ಅವರು ಹೆಚ್ಚಿನ ಒತ್ತು ನೀಡಿದ್ದರು. ಹಾಗಾಗಿ, ಅವರ ನಿರ್ದೇಶನದ ಸಿನಿಮಾಗಳನ್ನು ಅಭಿಮಾನಿಗಳು ಮಿಸ್ ಮಾಡಿಕೊಂಡಿದ್ದರು. ಏಳು ವರ್ಷಗಳ ನಂತರ ಚಿತ್ರ ನಿರ್ದೇಶನಕ್ಕೆ ಇಳಿದಿರುವ ಬಗ್ಗೆ ಸುದೀಪ್ ಟ್ವಿಟ್ಟರ್ ನಲ್ಲಿ ಖಚಿತ ಪಡಿಸಿದ್ದಾರೆ.

ಭಾನುವಾರ ಟ್ವೀಟ್ ಮಾಡಿರುವ ಅವರು, ‘ಶೀಘ್ರದಲ್ಲೇ ನಾನು ನಿರ್ದೇಶನ ಮಾಡಲಿರುವ ಸಿನಿಮಾ ಕುರಿತು ಮತ್ತು ತಾಂತ್ರಿಕ ತಂಡದ ಬಗ್ಗೆ ಮಾಹಿತಿ ನೀಡಲಿದ್ದೇನೆ. ನಿರ್ದೇಶನವನ್ನು ಯಾವಾಗಲೂ ಪ್ರೀತಿಯಿಂದ ಮಾಡುತ್ತೇನೆ. ಅದನ್ನು ಮಾಡುತ್ತಿರುವುದಕ್ಕೆ ಖುಷಿಯಿದೆ. ಏಳು ವರ್ಷದ ಗ್ಯಾಪ್‌ ನಂತರ ಮಾಡುತ್ತಿದ್ದೇನೆ. ನೀವೆಲ್ಲರೂ ನನ್ನೊಂದಿಗೆ ಇದ್ದೀರಿ ಎಂದುಕೊಂಡಿದ್ದೇನೆ. ಯಾರನ್ನೂ ನಿರಾಸೆ ಮಾಡುವುದಿಲ್ಲ’ ಎಂದಿದ್ದಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top