fbpx
ಸಮಾಚಾರ

ಧಾರ್ಮಿಕ ಭಾವನೆಗಳಿಗೆ ಧಕ್ಕೆ: ಉಪೇಂದ್ರ ನಟಿ ರವೀನಾ ಟಂಡನ್ ವಿರುದ್ಧ ಎಫ್ಐಆರ್ ದಾಖಲು!

ಖ್ಯಾತ ಬಾಲಿವುಡ್ ನಟಿ ರವೀನಾ ಟಂಡನ್, ಭಾರತಿ ಸಿಂಗ್ ಹಾಗೂ ಫರಾಹ್ ಖಾನ್ ನಡೆಸಿರುವ ಒಂದು ಕೃತ್ಯದಿಂದ ಪಂಜಾಬ್ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂಡ ಆರೋಪ ಇವರ ಮೇಲಿದೆ. ಇದೆಲ್ಲ ಆರಂಭವಾಗಿದ್ದು ಕಾರ್ಯಕ್ರಮದಿಂದ ಹೊರಹೊಮ್ಮಿದ ವಿಡಿಯೋವೊಂದರಿಂದ ಎನ್ನಲಾಗಿದೆ. ಈ ವಿಡಿಯೋವನ್ನು ತನಿಖೆಗೆ ಒಳಪಡಿಸಲಾಗಿದ್ದು ಬಳಿಕ ಈ ಮೂವರ ಮೇಲೂ FIR ದಾಖಲಿಸಲಾಗಿದೆ.

ಈ ಮೂವರು ಕಲಾವಿದರು ಕ್ರಿಶ್ಚಿಯನ್ ಧರ್ಮದ ಶಬ್ದವೊಂದನ್ನು ಬಳಸಿ ಗೇಲಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಕ್ರಿಶ್ಚಿಯನ್ ಧರ್ಮಕ್ಕೆ ಸಂಭಂದಿಸಿದ ‘ಹಲ್ಲೆಲುಜಾ’ ಪದಕ್ಕೆ ಅವಹೇಳನಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಕ್ರಿಸ್ಮಸ್ ಮುನ್ನಾ ದಿನ ಈ ಕಾರ್ಯಕ್ರಮ ಪ್ರಸಾರವಾಗಿದೆಯಂತೆ. ನಂತರ ಈ ವಿಡಿಯೋ ನೋಡಿ ಕ್ರಿಶ್ಚಿಯನ್ ಫ್ರಂಟ್ ಆಫ್ ಅಜ್ನಾಲಾ ಬ್ಲಾಕ್‌ನ ಅಧ್ಯಕ್ಷ ಸೋನು ಜಾಫರ್ ದೂರು ಧಾಖಲಿಸಿದ್ದಾರೆ. ಜೊತೆಗೆ ವಿಡಿಯೋ ಫೂಟೇಜ್ ಅನ್ನು ನೀಡಿದ್ದಾರೆ.

ಕಾಂಬೊಜ್ ನಗರದ ನಿವಾಸಿಗಳು ನೀಡಿದ ದೂರಿನ ಆಧಾರದ ಮೇಲೆ ಐಪಿಸಿ ಸೆಕ್ಷನ್ 295-ಎ ( ಧಾರ್ಮಿಕ ನಂಬಿಕೆ , ಧರ್ಮವನ್ನು ಪ್ರಚೋದಿಸುವ ಉದ್ದೇಶದ ದುರದ್ದೇಶಪೂರ್ವಕ ಹೀನ ಕೃತ್ಯ ) ಅಡಿಯಲ್ಲಿ ಈ ಸೆಲೆಬ್ರಿಟಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಫಿರೊಜ್ ಪುರ್ ಎಸ್ ಎಸ್ ಪಿ ವಿವೇಕ್ ಶೀಲ್ ಸೊನಿ ಹೇಳಿದ್ದಾರೆ.

ಕ್ರಿಶ್ಚಿಯನ್ ಸಮುದಾಯವನ್ನು ಅವಮಾನಿಸುವ ಮೂಲಕ ಧಾರ್ಮಿಕ ಭಾವನೆಗಳಿಗೆ ದಕ್ಕೆ ತರಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಇದೇ ಪ್ರಕರಣದಲ್ಲಿ ಟಂಡನ್, ಫರ್ಹಾನ್ ಖಾನ್ ಹಾಗೂ ಭಾರ್ತಿ ಸಿಂಗ್ ವಿರುದ್ಧ ಬುಧವಾರ ಅಮೃತಸರ ಠಾಣೆಯಲ್ಲೂ ಪ್ರಕರಣ ದಾಖಲಾಗಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top