fbpx
ಸಮಾಚಾರ

“ಬೆಳಗಾವಿ ಗ್ರಾಮೀಣ ಮರಾಠಿಗರ ಸ್ವತ್ತು, ಇಲ್ಲಿ ಮರಾಠಿಗರೇ ಗೆಲ್ಲಬೇಕು” ರಮೇಶ್ ಜಾರಕಿಹೊಳಿ ವಿವಾದಾತ್ಮಕ ಹೇಳಿಕೆ!

ನೂತನ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅವರು ಮರಾಠರನ್ನು ಒಲೈಸುವ ಭರದಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರ ಮರಾಠಿಗರದ್ದು, ಇಲ್ಲಿ ಮರಾಠಿಗರು ನಿಂತರೆ ಮಾತ್ರ ನಾನು ಬೆಂಬಲಿಸುತ್ತೇನೆ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಲಕ್ಷ್ಮೀ ಹೆಬ್ಬಾಳಕರ್ ಅವರನ್ನ ಗೆಲ್ಲಿಸಿಕೊಂಡು ಬರುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಇದೀಗ್ ಲಕ್ಷ್ಮೀ ಹೆಬ್ಬಾಳಕರ್ ವಿರುದ್ದವೇ ತಿರುಗಿ ಬಿದ್ದಿದ್ದು ಲಕ್ಷ್ಮೀ ಕೋಟೆಯಲ್ಲಿಯೇ ನಿಂತು ಲಕ್ಷ್ಮೀಯನ್ನೆ ಸೋಲಿಸುವ ಶಪಥ ಮಾಡಿದ್ದಾರೆ.

“ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕರ ಬಗ್ಗೆ ಮಾತನಾಡುವುದು ಬೇಡ. ಆ ಶಾಸಕರು ಗೆಲ್ಲಲು ಕಾರಣ ನಾನು. ಗೆಲ್ಲಿಸಿದ್ದು ನನ್ನ ತಪ್ಪು. ಒಳ್ಳೆಯ ಸಂಸ್ಕೃತಿ ಹೆಣ್ಣುಮಗಳು ಎಂದು ಗೆಲ್ಲಿಸಿದ್ದೆ. ನಾನು ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನರಲ್ಲಿ ಕ್ಷಮೆ ಕೇಳುತ್ತೇನೆ,” ಎಂದರು.

“ಮುಂದಿನ ಚುನಾವಣೆಯಲ್ಲಿ ಕುಕ್ಕರ್, ಹಣದ ಆಮಿಷವೊಡ್ಡಿದವರಿಗೆ ಜನರು ಮತ ಹಾಕಬಾರದು. ಈ ಕ್ಷೇತ್ರ ಮರಾಠಾ ಸಮುದಾಯದ ಜನರ ಹಕ್ಕು. ಮರಾಠಿಗರು ಒಂದಾದರೆ ಇಲ್ಲಿ ಯಾವ ಶಕ್ತಿಯೂ ಕೆಲಸ ಮಾಡದು. ಮರಾಠರು ಆತ್ಮಾವಲೋಕನ ಮಾಡಿಕೊಳ್ಳಲಿ. ಮರಾಠ ಮುಖಂಡರೆಲ್ಲರೂ ಒಂದಾಗಿ ಮುಂಬರುವ ಚುನಾವಣೆಗೆ ನಿಲ್ಲಿ. ನಾನು ಎಲೆಕ್ಷನ್ ಫಂಡ್‌ಗೆ 5 ಕೋಟಿ‌ ಕೊಡ್ತೀನಿ. ಗ್ರಾಮೀಣ ಭಾಗದ ಮರಾಠರೆಲ್ಲರೂ ಒಂದಾಗಬೇಕು. ಉಳಿದ ಸಮುದಾಯದ ಜವಾಬ್ದಾರಿ ನನ್ನದು ಎಂದು ಹೇಳಿದರು” ಎಂದು ಹೇಳಿದ್ದಾರೆ.

ರಮೇಶ್ ಜಾರಕಿಹೊಳಿ ಅವರ ಮರಾಠ ಪರ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಹೀಗಿರುವಾಗ ಅದರಲ್ಲಿ ಈ ರಮೇಶ್ ಜಾರಕಿಹೊಳಿ ಬೆಳಗಾವಿಯನ್ನು ಮರಾಠಿಗರದು ಎನ್ನುವ ಮೂಲಕ ವಿಭಜನೆ ಮುಂದಾಗಿದ್ದಾರೆ ಎಂದು ಕನ್ನಡಿಗರು ಕಿಡಿಕಾರಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top