fbpx
ಸಮಾಚಾರ

ಮಗಳು ಆರತಿ ಮಾಡಿದ್ದಕ್ಕೆ ಟಿವಿ ಒಡೆದು ಹಾಕಿದ್ದ ಶಾಹಿದ್ ಅಫ್ರಿದಿ: ವಿಡಿಯೋ ವೈರಲ್

ಸದಾಕಾಲ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುವ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿತ್ ಅಫ್ರಿದಿಯವರು, ಇದೀಗ ಟಿವಿ ಕಾರ್ಯಕ್ರಮವೊಂದರಲ್ಲಿ ಹಿಂದು ಸಂಪ್ರದಾಯವನ್ನು ಅಣಕಿಸಿರುವುದು ಭಾರತೀಯರ ಕಣ್ಣು ಕೆಂಪಗಾಗುವಂತೆ ಮಾಡಿದೆ.

ಶಾಹಿದ್ ಅಫ್ರಿದಿ ಈ ಕುರಿತು ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿರುವ ಹಳೆಯ ವಿಡಿಯೋ ಇದೀಗ ವೈರಲ್ ಆಗಿದೆ. ಟಿವಿ ವಾಹಿನಿಯ ನಿರೂಪಕಿ ಸಂದರ್ಶನವೊಂದರಲ್ಲಿ ನೀವು ಎಷ್ಟು ಬಾರಿ ಟಿವಿ ಒಡೆದಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಅಫ್ರಿದಿ ಪ್ರತಿಕ್ರಿಯಿಸಿದ್ದು, ನಾನು ಒಂದು ಬಾರಿ ಟಿವಿಯನ್ನು ಒಡೆದಿದ್ದೇನೆ ಎಂದು ತಿಳಿಸಿದ್ದಾರೆ.

ನೀವು ಎಂದಾದರೂ ಟಿವಿ ಒಡೆದಿದ್ದೀರಾ ಎಂಬ ನಿರೂಪಕಿಯ ಪ್ರಶ್ನೆಗೆ ಆಫ್ರಿದಿ, ಭಾರತೀಯ ಸಂಪ್ರದಾಯವನ್ನು ಅಣಕಿಸುತ್ತಾ ಉತ್ತರ ನೀಡುತ್ತಾರೆ. ನನ್ನ ಪತ್ನಿ ಪ್ರತಿ ನಿತ್ಯ ಧಾರವಾಹಿಗಳನ್ನು ನೋಡುತ್ತಿದ್ದರು. ಆಗ ನೀನೊಬ್ಬಳೆ ನೋಡು ಮಕ್ಕಳು ಇದನ್ನು ನೋಡಲು ಬಿಡಬೇಡ ಎಂದು ಹೇಳಿದ್ದೆ. ಒಂದು ಬಾರಿ ನಾನು ರೂಮಿನಿಂದ ಹೊರಗಡೆ ಬಂದಾಗ ನನ್ನ ಮಕ್ಕಳಲ್ಲಿ ಒಬ್ಬಳು ಟಿವಿ ಶೋ ನೋಡಿಕೊಂಡು ಆರತಿ ಮಾಡುವುದನ್ನು ಅನುಕರಣೆ ಮಾಡುತ್ತಿದ್ದಳು. ಇದನ್ನು ಕಂಡ ತಕ್ಷಣ ಕೋಪ ಬಂತು ಹೀಗಾಗಿ ಟಿವಿಯನ್ನೇ ಒಡೆದು ಹಾಕಿದ್ದೆ ಎಂದು ಹೇಳಿಕೊಂಡಿದ್ದಾರೆ.

ಶಾಹೀದ್ ಆಫ್ರಿದಿ ಹಿಂದೂ ಸಂಪ್ರದಾಯವನ್ನು ಅಣಕಿಸಿರುವುದು ದೃಶ್ಯದಲ್ಲಿ ಕಂಡುಬರುತ್ತದೆ. ಭಾರತೀಯರು ಅದೇನೋ ಮಾಡುತ್ತಾರಲ್ಲಯೇ, ತಟ್ಟೆ ಹಿಡಿದುಕೊಂಡು? ಹೀಗೆ ಹೀಗೆ ಮಾಡಿ ಅದೇನು ಅಂತಾರೆ? ಈ ವೇಳೆಯಲ್ಲಿ ನಿರೂಪಕಿ ಆರತಿ ಎಂದಾಗ ಹೌದು, ಹೀಗೆ ಹೀಗೆ ಮಾಡಿ ಟಿವಿ ಮುಂದೆ ನಿಂತಿದ್ದಳು. ನಾನು ಸಿಟ್ಟೆದ್ದು ಟಿವಿಯನ್ನು ಗೋಡೆಯೊಳಗೆ ಸೇರಿಸಿಬಿಟ್ಟೆ ಎಂದು ಹೇಳಿದ್ದಾರೆ.

ಹೇಳಿಕೆ ವೇಳೆ ಆರತಿ ಪದವನ್ನು ಹೇಳಲು ಬಾರದಂತೆ ಹಿಂದೂ ಸಂಪ್ರದಾಯವನ್ನು ಅಫ್ರಿದಿ ಅಣಕಿಸಿರುವುದು ಕಂಡು ಬಂದಿದೆ. ಇದೀಗ ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅಫ್ರಿದಿ ವಿರುದ್ಧ ಭಾರತೀಯರು ಕಿಡಿಕಾರುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top